ರಾಜಕೀಯ ಸ್ವರೂಪ ಪಡೆದುಕೊಂಡ ಪಂಚಮಸಾಲಿ ಪೀಠದ ಗದ್ದುಗೆ ಗುದ್ದಾಟ : ಶಾಖಾ ಮಠ ನಿರ್ಮಾಣಕ್ಕೆ ನಡೆದಿದೆ ಪ್ಲಾನ್

ಒಂದು ವೇಳೆ ಶ್ರೀಗಳಿಗೆ ಆಭದ್ರತೆ ಕಾಡುತ್ತಿದ್ದರೆ ಕೊಡಲಸಂಗಮ ಪೀಠವನ್ನು ಮೂಲವಾಗಿ ಇಟ್ಟುಕೊಂಡು ಶಾಖಾ ಮಠ ನಿರ್ಮಾಣದ ಪ್ಲಾನ್ ನಡೆದಿದೆ. 

Written by - Ranjitha R K | Last Updated : Jul 22, 2025, 05:26 PM IST
  • ೧೫ ಎಕರೆ ಜಾಗದಲ್ಲಿ ಮಠ ನಿರ್ಮಾಣಕ್ಕೆ ಯತ್ಮಾಳ್, ಸಿ.ಸಿ ಪಾಟೀಲ್ ನಿರ್ಧಾರ
  • ಕಗ್ಗಂಟಾದ ಪಂಚಮಸಾಲಿ ಶ್ರೀ ಹಾಗೂ ಶಾಸಕ ಕಾಶಪ್ಪನವರ ನಡುವೆ ಭಿನ್ನಾಭಿಪ್ರಾಯ
  • ಸಮಾಜದ ಹಿರಿಯರ ಸಮ್ಮುಖದಲ್ಲಿ ಸಂಧಾನ ಸಭೆ ಸಾಧ್ಯತೆ
ರಾಜಕೀಯ ಸ್ವರೂಪ ಪಡೆದುಕೊಂಡ ಪಂಚಮಸಾಲಿ ಪೀಠದ ಗದ್ದುಗೆ ಗುದ್ದಾಟ : ಶಾಖಾ ಮಠ ನಿರ್ಮಾಣಕ್ಕೆ ನಡೆದಿದೆ ಪ್ಲಾನ್

ಗದಗ  : ಪಂಚಮಸಾಲಿ ಪೀಠದ ಗದ್ದುಗೆ ಗುದ್ದಾಟ, ರಾಜಕೀಯ ಸ್ವರೂಪ ಪಡೆದುಕೊಂಡಿದೆ. ನಾ ಕೊಡೆ, ನೀ ಬಿಡೆ ಅನ್ನುವಂತಾಗಿದೆ. ಕಾಶೆಪ್ಪನವರ ಹಾಗೂ ಪಂಚಮಸಾಲಿ ಶ್ರೀಗಳ ನಡುವೆ ಸಂಧಾನ ಮಾಡಲು ಬೆಂಗಳೂರಿನಲ್ಲಿ ಸಮಾಜದ ಹಿರಿಯರ ಮುಖಂಡ ಸಭೆಗೆ ನಿರ್ಧಾರ ನಡೆಸಲಾಗಿದೆ. ಒಂದು ವೇಳೆ ಶ್ರೀಗಳಿಗೆ ಆಭದ್ರತೆ ಕಾಡುತ್ತಿದ್ದರೆ ಕೊಡಲಸಂಗಮ ಪೀಠವನ್ನು ಮೂಲವಾಗಿ ಇಟ್ಟುಕೊಂಡು ಶಾಖಾ ಮಠ ನಿರ್ಮಾಣದ ಪ್ಲಾನ್ ನಡೆದಿದೆ. ಕೂಡಲಸಂಗಮ ಶ್ರೀ ವಿರುದ್ಧ ಹತ್ಯೆ ಸಂಚು ನಡೆದಿತ್ತು ಅಂತ ಬೆಲ್ಲದ ಆರೋಪಿಸಿದ್ದಾರೆ. 

Add Zee News as a Preferred Source

ಸ್ವಾಮೀಜಿ ಇಷ್ಟಪಟ್ಟಕ್ಕೆ ಶಾಖಾ‌ ಮಠಕ್ಕೆ ಪ್ಲಾನ್ :
ಹೌದು, ಕೂಡಲಸಂಗಮದ ಪಂಚಮಸಾಲಿ ಮಠಕ್ಕೆ ಬೀಗ ಹಾಕಿದಾಗಿನಿಂದ ಮಠದ ಪಿಠಾಧಿಪತಿ ಬಸವಜಯ ಮೃತ್ಯುಂಜಯ ಶ್ರೀಗಳು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಈಗ ಈ ವಿಷಯ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಅವಶ್ಯಕತೆ ಇದ್ದಾಗ ಶ್ರೀಗಳನ್ನು ಬಳಸಿಕೊಂಡರು. ಕೆಲಸ ಮುಗಿದ ಮೇಲೆ ಬಳಸಿಕೊಂಡ ಸ್ವಾಮಿಜಿಯನ್ನು ಬಿಸಾಡಿದರು ಎನ್ನುವ ಅಪಸ್ವರ ಮಾತುಗಳು ಕಾಶಪ್ಪನವರ್ ವಿರುದ್ಧ ಕೇಳಿಬರುತ್ತಿವೆ. ಈಗ ಸಮಾಜ ಒಗ್ಗೂಡಿಸುವ ಕೆಲಸ ನಡೆಯುತ್ತಿದೆ. ಶ್ರೀಗಳು ಹಾಗೂ ಕಾಶಪ್ಪನವರ್ ನಡುವಿನ ಆ ಭಿನ್ನಾಭಿಪ್ರಾಯ ಬೇಗ ಬಗೆಹರಿಯಲಿ ಅನ್ನೋದು ಪಂಚಮಸಾಲಿ ಸಮಾಜದ ಹೆಬ್ಬಯಕೆಯಾಗಿದೆ ಅಂತ ಶಾಸಕ ಸಿ.ಸಿ ಪಾಟೀಲ ಹೇಳಿದರು. ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವ ಕಾರಣಕ್ಕಾಗಿ ಭಿನ್ನಾಭಿಪ್ರಾಯ ಬಂತು ಗೊತ್ತಿಲ್ಲ. ಶ್ರೀಗಳು ಮನನೊಂದು ಸ್ವಲ್ಪ ಹಿಂಸೆ‌ ಆಗಿದ್ದಕ್ಕೆ ಬಾಗಲಕೋಟೆ ಆಸ್ಪತ್ರೆಯಲ್ಲಿ ಇದ್ದರು. ಸಮಾಜದ ಹಿರಿಯರು ಸೇರಿಕೊಂಡು ಸಂಧಾನ ಸಭೆ ಮಾಡುವಂತಹ ನಿರ್ಣಯ ತೆಗೆದುಕೊಂಡಿದ್ದೇವೆ. ಇನ್ನೂ ಕೆಲವೇ ದಿನಗಳಲ್ಲಿ ಸಮಾಜ ಹಿರಿಯರು, ಶಾಸಕರು, ರಾಜ್ಯಸಭಾ ಸದಸ್ಯರು ಎಲ್ಲರೂ ಒಟ್ಟಾಗಿ ಬೆಂಗಳೂರಲ್ಲಿ ಸಭೆ ಮಾಡಿ, ಶಮನ ಮಾಡುವ ಪ್ರಾಮಾಣಿಕ‌ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಚಪ್ಪಾಳೆ ಎರಡೂ ಕೈಯಿಂದ ಆಗಬೇಕು. ಕಾಶಪ್ಪನವರ ಎರಡು ಹೆಜ್ಜೆ ಹಿಂದೆ ಸರಿಯಬೇಕು. ಶ್ರೀಗಳು ಎರಡು ಹೆಜ್ಜೆ ಹಿಂದೆ ಸರಿದು ಸಂಧಾನ ಆದರೆ  ಸಮಾಜಕ್ಕೆ ಒಳ್ಳೆ ಸಂದೇಶ ಹೋಗತ್ತದೆ. ಅದು ಆಗದೇ  ಹೋದರೆ ಮೂಲ ಪೀಠ ಅಲ್ಲೇ ಇಟ್ಟು, ಶ್ರೀಗಳಿಗೆ ಸಮಾಜ ಸಂಘಟನೆಗೆ ಅನುಕೂಲ ಆಗುವಂತಹ ಅವರು ಅಪೇಕ್ಷೆ ಪಟ್ಟ ಯಾವುದೇ ಊರು, ಪಟ್ಟಣ, ನಗರದಲ್ಲಿ ಮತ್ತೊಂದು ಶಾಖಾಪೀಠ ಮಾಡುತ್ತೇವೆ ಎಂದು ಪಂಚಮಸಾಲಿ ಮುಖಂಡ ಹಾಗೂ ಶಾಸಕ ಸಿ.ಸಿ ಪಾಟೀಲ ಹೇಳಿದ್ದಾರೆ. 

ಇದನ್ನೂ ಓದಿ : ಧರ್ಮಸ್ಥಳ ಅಪರಾಧ ಪ್ರಕರಣ – ರಾಜಕೀಯವಲ್ಲ, ಸತ್ಯ ಅನಾವರಣವೇ ಗುರಿ: ದಿನೇಶ್ ಗುಂಡೂರಾವ್

ಬಸನಗೌಡ ಪಾಟೀಲ್ ಯತ್ನಾಳ, ಸಿದ್ದು ಸವದಿ, ಶಿವಶಂಕ್ರಪ್ಪ, ಅರವಿಂದ ಬೆಲ್ಲದ, ಮುರುಗೇಶ್ ನಿರಾಣಿ ಎಲ್ಲರೂ ಶ್ರೀಗಳ ಬೆನ್ನಿಗೆ ಬೆಂಗಾವಲಾಗಿ ನಿಲ್ಲುತ್ತೇವೆ ಅಂತ ಸಿಸಿ ಪಾಟೀಲ ಹೇಳಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ದೊಡ್ಡ ಮಟ್ಟದ ಹೋರಾಟವನ್ನ ಸ್ವಾಮೀಜಿ ಮಾಡಿದ್ದರು. 750 ಕಿಲೋಮೀಟರ್ ಪಾದಯಾತ್ರೆ ಮಾಡಿದ್ದರು.  ಸೂಕ್ತವಾದ ಬಂದೋಬಸ್ತ್ ಕೊಟ್ಟಿದ್ದೆವು. ಅರಮನೆ ಮೈದಾನದಲ್ಲಿ ಪರವಾನಿಗೆ ಇಲ್ಲದೇ ಸಭೆ ಮಾಡಿದರೂ ಪರ್ಮಿಷನ್ ಕೊಟ್ಟಿದ್ದೆವು. ನಾನು ಸಚಿವನಿದ್ದಾಗ‌ ಸರ್ಕಾರ ಮತ್ತು ಸಮಾಜದ ನಡುವೆ ಕೊಂಡಿಯಾಗಿ ಕೆಲಸ ಮಾಡಿದ್ದೇನೆ. ನಮ್ಮ ಸರ್ಕಾರ ಬಂದು 24 ಘಂಟೆಯೊಳಗೆ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಕೊಡುತ್ತೇವೆ ಅಂತಾ ವಿಜಯಾನಂದ ಕಾಶಪ್ಪನವರ ಹೇಳಿದ್ದರು. ಅವರು ಕೆಲಸದ ಒತ್ತಡದಲ್ಲಿ 24 ಘಂಟೆ ಮರೆತಂತೆ ಕಾಣತ್ತದೆ. ಈಗಲಾದರೂ ಅವರು ಪ್ರಯತ್ನ ಮಾಡಿ 2A ಮೀಸಲಾತಿ ಕೊಡಿಸಲಿ ಎಂದಿದ್ದಾರೆ. 

ಕೂಡಲಸಂಗಮ ಶ್ರೀ ವಿರುದ್ಧ ಹತ್ಯೆ ಸಂಚು ವಿಚಾರ ಬಗ್ಗೆ ಬೆಲ್ಲದ ಕೇಳಿದ್ದಾರೆ. ಈ ಬಗ್ಗೆ ವಿಜಯಪುರದಲ್ಲಿ ಶಾಸಕ ಬಸನಗೌಡಾ ಪಾಟೀಲ ಯತ್ನಾಳ್ ಮಾತನಾಡಿದ್ದಾರೆ. ಇನ್ನು ಬಸವಜಯ ಮೃತ್ಯುಂಜಯ ಸ್ವಾಮಿಜಿಗಳಿಗಾಗಿ ೧೫ ಎಕರೆ ಜಮೀನು ತಗೆದುಕೊಂಡು ಹಾಸ್ಟೆಲ್ ಸಮೇತ ಮಠದ ವ್ಯವಸ್ಥೆ ಮಾಡುತ್ತೇವೆ.ಅದರ ಬಗ್ಗೆ ಬುಧವಾರ ನಾನು ,ಸಿಸಿ ಪಾಟೀಲ ಸೇರಿದಂತೆ ಅನೇಕರು ಸೇರಿ ಸಭೆ ಮಾಡುತ್ತೇವೆ. ಶ್ರೀಗಳು ಅಲ್ಲಿ ಬಂದು ಇರಲಿದ್ದಾರೆ. ಈ ಬಾರಿ ಯಾವುದೇ ರಾಜಕಾರಣಿ ಟ್ರಸ್ಟ್ ನಲ್ಲಿ ಇರಲ್ಲ. ಕೇವಲ ಭಕ್ತರು ಮಾತ್ರ ಟ್ರಸ್ಟ್ ನಲ್ಲಿ ಇರುತ್ತಾರೆ ಎಂದಿದ್ದಾರೆ.  ಕಾಶಪ್ಪನವರ ಯಾರು ಸ್ವಾಮೀಜಿಯನ್ನು ಹೊರಹಾಕಲು ಎಂದು ಪ್ರಶ್ನಿಸಿದ್ದಾರೆ. 

ಇದನ್ನೂ ಓದಿ : ಶುಕ್ರವಾರ ದೆಹಲಿಗೆ ಸಿಎಂ ಸಿದ್ದರಾಮಯ್ಯ & ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರಯಾಣ: ರಣದೀಪ್ ಸಿಂಗ್ ಸುರ್ಜೇವಾಲಾ ಜೊತೆಗೆ ಮಹತ್ವದ ಸಭೆ

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News