ಉಗ್ರರ ಕೈಯಲ್ಲಿ ಮೊಬೈಲ್, ಕೈದಿಗಳ ಎಣ್ಣೆ ಪಾರ್ಟಿ ಡ್ಯಾನ್ಸ್ : ಪರಪ್ಪನ ಅಗ್ರಹಾರ ರಹಸ್ಯ ರಿವೀಲ್‌

ಸೆಂಟ್ರಲ್ ಜೈಲ್ ಪರಪ್ಪನ ಅಗ್ರಹಾರದಲ್ಲಿ ಅಕ್ರಮಗಳ ಒಂದು ಎರಡು ವಿಡಿಯೋ ಅಲ್ಲ. ಸಾಲು ಸಾಲು ದೃಶ್ಯಗಳು ವೈರಲ್ ಆಗ್ತಿದೆ. ಈ ನಡುವೆ ಒಂದೆಡೆ ತನಿಖೆ ನಡೆಯುತ್ತಿದ್ದರೆ, ಇನ್ನೊಂದೆಡೆ ಕೈದಿಗಳು ಬಿಂದಾಸ್ ಡ್ಯಾನ್ಸ್, ಮದ್ಯ ಸೇವನೆ ಮಾಡ್ತಿರುವ ಕೆಲ ವಿಡಿಯೋಗಳು ಇವತ್ತು ಕೂಡ ವೈರಲ್ ಆಗಿದ್ದು, ಪ್ರಕರಣ ಇನ್ನಷ್ಟು ಗಂಭೀರತೆ ಪಡೆದಿದೆ. ಮತ್ತೊಂದೆಡೆ ಎನ್‌ಐಎ ಮತ್ತು ಡಿಆರ್‌ಐ ಜೈಲಿಗೆ ಭೇಟಿ ನೀಡುವ ಸಾಧ್ಯತೆ ಕೂಡ ಇದೆ.. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ.

Written by - Krishna N K | Last Updated : Nov 9, 2025, 05:51 PM IST
    • ಸೆಂಟ್ರಲ್ ಜೈಲ್ ಪರಪ್ಪನ ಅಗ್ರಹಾರದಲ್ಲಿ ಇದೆಂಥಾ ಅಕ್ರಮ
    • ಉಗ್ರರ ಕೈಯಲ್ಲಿ ಮೊಬೈಲ್, ಕೈದಿಗಳ ಎಣ್ಣೆ ಪಾರ್ಟಿ ಡ್ಯಾನ್ಸ್
    • ಎರಡು ಮೂರು ವರ್ಷಗಳ ಹಿಂದಿನ ದೃಶ್ಯಗಳು ಎನ್ನಲಾಗ್ತಿದೆ
ಉಗ್ರರ ಕೈಯಲ್ಲಿ ಮೊಬೈಲ್, ಕೈದಿಗಳ ಎಣ್ಣೆ ಪಾರ್ಟಿ ಡ್ಯಾನ್ಸ್ : ಪರಪ್ಪನ ಅಗ್ರಹಾರ ರಹಸ್ಯ ರಿವೀಲ್‌

ಬೆಂಗಳೂರು : ನಿನ್ನೆಯಿಂದ ಸೆಂಟ್ರಲ್ ಜೈಲ್ ಪರಪ್ಪನ ಅಗ್ರಹಾರದ ಕೆಲ ಅಕ್ರಮದ ವಿಡಿಯೋಗಳು ವೈರಲ್ ಆಗ್ತಿವೆ. ಈ ನಡುವೆ ಇವತ್ತು ಮದ್ಯ ಸೇವನೆ ಹಾಗೂ ಬಿಂದಾಸ್ ಡ್ಯಾನ್ಸ್ ಮಾಡುವ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋಗಳು ಯಾವ ಜೈಲಿನವು ಎಂಬುದರ ವಿಚಾರಣೆ ನಡೆಸಲಾಗ್ತಿದೆ. ಮೇಲ್ನೋಟಕ್ಕೆ ಎರಡು ಮೂರು ವರ್ಷಗಳ ಹಿಂದಿನ ದೃಶ್ಯಗಳು ಎನ್ನಲಾಗ್ತಿದೆ.

Add Zee News as a Preferred Source

ನಿನ್ನೆಯಷ್ಟೇ ಜೈಲಾಧಿಕಾರಿಗಳು ಜೈಲಲ್ಲಿ ರೇಡ್ ಮಾಡಿದ್ರು. ನೂರು ಮಂದಿ ಸಿಬ್ಬಂದಿಯ ಸಹಾಯದಿಂದ ಎಲ್ಲ ಬ್ಯಾರಕ್‌ಗಳಲ್ಲೂ ತಲಾಶ್ ನಡೆಸಲಾಯ್ತು. ಆದರೆ ಯಾವುದೇ ವಸ್ತು ಪತ್ತೆಯಾಗಿಲ್ಲ ಎನ್ನಲಾಗಿದೆ. ಇನ್ನು ವಿಡಿಯೋಗಳ ವೈರಲ್ ಹಿಂದೆ ಜೈಲಿನ ಕೆಲ ಸಿಬ್ಬಂದಿಯಿಂದಲೇ ಮಾಹಿತಿ ಲೀಕ್ ಆಗಿರಬಹುದು ಎಂಬ ಶಂಕೆಯಿದೆ..

ಇದನ್ನೂ ಓದಿ:ಮೈಸೂರಿನ ಪ್ರತಿಷ್ಠಿತ ಶಾಲೆಯಲ್ಲಿ ರ‍್ಯಾಗಿಂಗ್! ಮರ್ಮಾಂಗಕ್ಕೆ ಒದ್ದು ಹಲ್ಲೆ

ಮತ್ತೊಂದ್ಕಡೆ 2023ರಲ್ಲಿ ರೆಕಾರ್ಡ್ ಆಗಿದ್ದ ವಿಡಿಯೋಗಳು ಈಗ ವೈರಲ್ ಆಗಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ‌ಡಿಐಜಿ ಆನಂದ್ ರೆಡ್ಡಿ ADGP ದಯಾನಂದ್ ಅವರಿಗೆ ಮಾಹಿತಿ ನೀಡಿದ್ದಾರೆ. ಹೋಮ್ ಮಿನಿಸ್ಟರ್ ಡಾ. ಜಿ. ಪರಮೇಶ್ವರ್ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ರೇಪಿಸ್ಟ್ ಉಮೇಶ್ ರೆಡ್ಡಿಯ ಬ್ಯಾರಕ್, ಶಂಕಿತ ಉಗ್ರ ಶಕೀಲ್ ಸೆಲ್, ಮತ್ತು ರನ್ಯಾ ರಾವ್ ಕೇಸ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ನ ತರುಣ್ ರಾಜ್‌ನ ಬ್ಯಾರಕ್ ಬಳಿ ಭದ್ರತೆಗಿದ್ದ ಸಿಬ್ಬಂದಿಯ ಪಟ್ಟಿ ಕೊಡಲು ತಿಳಿಸಲಾಗಿದೆ. ಈ ವೈರಲ್ ವಿಡಿಯೋಗಳ ಕುರಿತಾಗಿ ಈಗ ಎನ್‌ಐಎ ಮತ್ತು ಡಿಆರ್‌ಐ ಕೂಡ ತನಿಖೆಗೆ ಕೈಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಲವರ ಸಂವಾದಗಳು ಮತ್ತು ಮೊಬೈಲ್ ರೆಕಾರ್ಡಿಂಗ್ ವಿವರಕ್ಕೂ ಪರಿಶೀಲನೆ ನಡೆಯಲಿದೆ.

ಇನ್ನು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್‌ನಲ್ಲಿ ಸಾಲು ಸಾಲು ಅಕ್ರಮ ಕಾರ್ಯಗಳು ನಡೆಯುತ್ತಿರೋದ್ಯಾಕೆ.? ಮೊಬೈಲ್ ಬಳಕೆ ಹೇಗೆ ಸಾಧ್ಯವಾಯ್ತು..? ಒಳಗಡೆ ಅಕ್ರಮದಲ್ಲಿ ಭಾಗಿಯಾದವರು ಯಾರು.? ಎಂದು ತನಿಖೆ ಮುಂದುವರೆದಿದೆ. ಜೈಲಾಧಿಕಾರಿಗಳ ವಿರುದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಗರಂ ಆಗಿದ್ದಾರೆ. ಈ ನಡುವೆ ಮಾತನಾಡಿ, ಪದೇಪದೇ ಹೀಗಾಗ್ತಿದೆ‌ ಅಂತ ಹಿಂದೆನೂ ಕ್ರಮ ತಗೊಂಡಿದ್ವಿ. ದಯಾನಂದ್ ಅವರ ಜೊತೆ ನಿನ್ನೆ ಮಾತಾಡಿದ್ದೀನಿ. ಪದೇ ಇದೇ ಇದು ನಡೀತಿದೆ, ಯಾರು ಉಸ್ತುವಾರಿ ಇದ್ದಾರೆ ಅವರ ವಿರುದ್ಧ ಕ್ರಮ ಆಗಲೇಬೇಕು ಅಂದಿದ್ದೀನಿ. ಇದು‌ ನಾನ್‌ಸೆನ್ಸ್, ಇದನ್ನೆಲ್ಲ ಸಹಿಸೋಕ್ಕೆ ಆಗಲ್ಲ ಅಂತ ಹೇಳಿದೀನಿ. ಎಡಿಜಿಪಿ ದಯಾನಂದ್ ಅವರಿಂದ ವರದಿ ಕೇಳಿದ್ದೀನಿ.. ಈ ಸಂಬಂಧ ನಾನೇ ಅಧಿಕಾರಿಗಳ ಸಭೆ ಕರೆಯುತ್ತೇನೆ. ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದೀವಿ. ವರದಿ ನಮಗೆ ಸಮಾಧಾನ ಆಗದಿದ್ರೆ ಉನ್ನತ ಮಟ್ಟದ ತನಿಖೆ ಮಾಡ್ತೇವೆ. ತನಿಖೆಗೆ ಸಮಿತಿಯನ್ನೂ ರಚನೆ ಮಾಡ್ತೇವೆ. ಇದು ಹಳೇ ವಿಡಿಯೋ ಅಂತಾರೆ, ಹಿಂದೆನೂ ಹಳೇ ವಿಡಿಯೋ ಬಂದಿತ್ತು.. ಏನೇ ಇರಲಿ ಇದು ಯಾವುದೂ ನಡೆಯಬಾರದು.. ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ತೇವೆ... ನಟ ದರ್ಶನ್ ಅವರು ದಿಂಬು, ಹಾಸಿಗೆಗೆ ಕೋರ್ಟ್ ನಲ್ಲಿ ಮನವಿ ಮಾಡ್ಕೊಳ್ತಾರೆ.. ಆದ್ರೆ ಈ ಕೈದಿಗಳಿಗೆ ಎಲ್ಲವೂ ಸುಲಭವಾಗಿ ಸಿಗುತ್ತೆ ಎಂದು ಮಾತಾಡಿದ್ರು..

ಇದನ್ನೂ ಓದಿ:ಕೊನೆಗೂ ಎಂಗೇಜ್ಮೆಂಟ್ ಮಾಡಿಕೊಂಡ ಬಿಗ್‌ಬಾಸ್‌ ಖ್ಯಾತಿಯ ಉಗ್ರಂ ಮಂಜು!

ಇನ್ನು ಶಂಕಿತ ಉಗ್ರ ಶಕೀಲ್‌ಗೆ ಮೊಬೈಲ್ ಕೊಟ್ಟಿದ್ದ ವಿಚಾರ ಗಂಭೀರವಾಗಿ ಪರಿಗಣಿಸಲಾಗಿದೆ.. ಈ ಹಿಂದೆ ಉಗ್ರನಿಗೆ ಮೊಬೈಲ್ ಕೊಟ್ಟು ಸಿಕ್ಕಿಬಿದ್ದಿದ್ದ ಮನೋವೈದ್ಯ ನಾಗರಾಜ್ ಮೇಲೆಯೇ ಅನುಮಾನ ಮೂಡಿದೆ. ಕಳೆದ ಜುಲೈ ನಲ್ಲಿ ಜೈಲಿನ ಮನೋವೈದ್ಯ ನಾಗರಾಜ್, ಸಿಎಆರ್ ASI ಚಾಂದ್ ಪಾಷಾ, ಉಗ್ರ ಜುನೈದ್ ತಾಯಿಯ ಬಂಧನ ಮಾಡಲಾಗಿತ್ತು. 10 ಸಾವಿರದ ಮೊಬೈಲ್ ಅನ್ನು ನಾಗರಾಜ್ ಜೈಲಿನಲ್ಲಿ 35 ಸಾವಿರಕ್ಕೆ ಮಾರಾಟ ಮಾಡ್ತಿದ್ದ. LET ಉಗ್ರ ಟಿ ನಾಸಿರ್‌ಗೆ ನಾಗರಾಜ್ ಮೊಬೈಲ್ ನೀಡಿದ್ದು ಪತ್ತೆಯಾಗಿತ್ತು. 2022-23 ರಲ್ಲಿ ನಾಸೀರ್ ಗೆ ಟ್ರೀಟ್ ಮೆಂಟ್ ನೀಡುತ್ತಿದ್ದ. ಹೀಗಾಗಿ ಆತನ ಮೇಲೂ ಅನುಮಾನ ಮೂಡಿದ್ದು, ತನಿಖೆ ಬಳಿಕ ಸ್ಪಷ್ಟತೆ ಸಿಗಲಿದೆ.

ಒಟ್ಟಾರೆ ಜೈಲಿನಲ್ಲಿ ನಡೆಯುತ್ತಿರೋ ಅಕ್ರಮಗಳು ಒಂದೊಂದಾಗಿ ಹೊರಗಡೆ ಬರುತ್ತಿದೆ. ಜೈಲಿನಲ್ಲಿ ಕೈದಿಗಳ ಜೀವನ ನೋಡಿದ್ರೆ ಜೈಲಿಗೆ ಯಾಕಾಗಿ ಕಳಿಸಬೇಕು ಎಂಬ ಪ್ರಶ್ನೆ ಮೂಡಿದೆ. ತನಿಖೆಯ ಬಳಿಕ ವೈರಲ್ ಆಗ್ತಿರುವ ವಿಡಿಯೋ ಹಿಂದಿನ ಅಸಲಿಯತ್ತು ಮತ್ತು ಅದರ ಹಿಂದಿರುವ ಕಾಣದ ಕೈಗಳ ಬಗ್ಗೆ ಗೊತ್ತಾಗಬೇಕಿದೆ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News