ಗೃಹಲಕ್ಷ್ಮೀ ಯೋಜನೆಯ ಹಣ 2000 ದಿಂದ 4000 ಹೆಚ್ಚಳಕ್ಕೆ ಜನರ ಆಗ್ರಹ

ರಾಜ್ಯದಲ್ಲಿನ ಸಾಮಾನ್ಯ ಮಹಿಳೆಯರ ತಿಂಗಳ ಖರ್ಚಿಗೆ ಸಹಾಯವಾಗುವ ಸಲುವಾಗಿ ಪ್ರತಿ ತಿಂಗಳಿಗೆ 2000 ಹಣವನ್ನು ಕೊಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಾಗ, ಇದಕ್ಕೆ ವಿರೋಧ ಪಕ್ಷಗಳು ಗೃಹಲಕ್ಷ್ಮೀ ಯೋಜನೆಯಿಂದ ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಟೀಕಿಸಿದವು

Written by - Manjunath Naragund | Last Updated : Mar 6, 2025, 06:17 PM IST
  • ಈ ಬೆಲೆ ಏರಿಕೆಯಲ್ಲಿ ದಿನನಿತ್ಯ ಜೀವನವನ್ನು ನಡೆಸಿಕೊಂಡು ಹೋಗಲು ಸಾಧ್ಯವಿಲ್ಲ
  • ಆದ್ದರಿಂದ ಯೋಜನೆಯ ಹಣ 2000 ದಿಂದ 4000 ಕ್ಕೆ ಹೆಚ್ಚಿಸಿ ಎಂದು ಜನ ಮಾತನಾಡುತ್ದಿದ್ದಾರೆ
  • ಇದರೊಂದಿಗೆ ಈ ಯೋಜನೆಯ ಹೆಸರಿನಲ್ಲಿ ಹಣವನ್ನು ಎಲ್ಲ ಮಹಿಳೆಯರಿಗೆ ಕೊಡುವುದು ಸರಿಯಲ್ಲ
ಗೃಹಲಕ್ಷ್ಮೀ ಯೋಜನೆಯ ಹಣ 2000 ದಿಂದ 4000 ಹೆಚ್ಚಳಕ್ಕೆ ಜನರ ಆಗ್ರಹ

Gruha Lakshmi : ಗೃಹಲಕ್ಷ್ಮೀ ಯೋಜನೆಯು ರಾಜ್ಯ ಸರ್ಕಾರದ ಪ್ರಮುಖ ಐದು ಯೋಜನೆಗಳಲ್ಲಿ ಒಂದು, ಈ ಯೋಜನೆಯಿಂದ ಸಾಕಷ್ಟು ಮಹಿಳೆಯರಿಗೆ ಸಹಾಯವಾಗಿದೆ. ಅಷ್ಟೇ ಅಲ್ಲದೆ ಈ ಹಣವನ್ನು ಒಳ್ಳೆಯ ಕಾರ್ಯಕ್ಕೆ ಸದುಪಯೋಗ ಪಡಿಸಿಕೊಂಡವರು ಬಹಳ ಜನ, ಮಹಿಳೆಯರಿಗಾಗಿ ಆರ್ಥಿಕವಾಗಿ ಸಹಾಯ ಮಾಡಲು ಪ್ರಥಮವಾಗಿ ಕರ್ನಾಟಕದಲ್ಲಿ ಜಾರಿಗೆ ತಂದಂತಹ ಈ ಯೋಜನೆ ದೇಶದಾದ್ಯಂತ ಸದ್ದು ಮಾಡುತ್ತಿದೆ.ಈಗ ಈ ಸಹಾಯಧನವನ್ನು ಹೆಚ್ಚಿಸುವ ಕುರಿತಾಗಿ ಜನರು ಬೇಡಿಕೆಯನ್ನು ಇಡುತಿದ್ದಾರೆ.

Add Zee News as a Preferred Source

ರಾಜ್ಯದಲ್ಲಿನ ಸಾಮಾನ್ಯ ಮಹಿಳೆಯರ ತಿಂಗಳ ಖರ್ಚಿಗೆ ಸಹಾಯವಾಗುವ ಸಲುವಾಗಿ ಪ್ರತಿ ತಿಂಗಳಿಗೆ 2000 ಹಣವನ್ನು ಕೊಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಾಗ, ಇದಕ್ಕೆ ವಿರೋಧ ಪಕ್ಷಗಳು ಗೃಹಲಕ್ಷ್ಮೀ ಯೋಜನೆಯಿಂದ ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಟೀಕಿಸಿದವು. ಆದರೆ ಈ ಟೀಕೆಗಳಿಗೆ ಕಿವಿಗೊಡದೆ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ತಮ್ಮ ಐದು ಗ್ಯಾರಂಟಿಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ ಜಾಕ್‌ಪಾಟ್‌: ಶೀಘ್ರವೇ ಖಾತೆ ಸೇರಲಿದೆ 1 ಲಕ್ಷ ರೂ. ಹಣ

ಆದರೆ ಇತ್ತೀಚಿಗೆ ಈ ಯೋಜನೆ ಹಣವು ಕೆಲವು ತಿಂಗಳುಗಳಿಂದ ಕೆಲವರಿಗೆ ಸರಿಯಾಗಿ ತಲುಪುತ್ತಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಐದು ಗ್ಯಾರಂಟಿಗಳನ್ನು ಮುಂದುವರೆಸಿಕೊಂಡು ಹೋಗಲು ಹಣ ಇಲ್ಲದ ಕಾರಣಕ್ಕೆ , ಸರ್ಕಾರ ಎಲ್ಲದರಲ್ಲೂ ಬೆಲೆ ಏರಿಕೆ ಮಾಡಿ, ಒಂದು ಕಡೆ ಕೊಟ್ಟು ಇನ್ನೊಂದು ಕಡೆ ಕಿತ್ತುಕೊಳ್ಳುವ ಆಟವಾಡುತ್ತಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಬೆಲೆ ಏರಿಕೆಯಲ್ಲಿ ದಿನನಿತ್ಯ ಜೀವನವನ್ನು ನಡೆಸಿಕೊಂಡು ಹೋಗಲು ಸಾಧ್ಯವಿಲ್ಲ, ಆದ್ದರಿಂದ ಯೋಜನೆಯ ಹಣ 2000 ದಿಂದ 4000 ಕ್ಕೆ ಹೆಚ್ಚಿಸಿ ಎಂದು ಜನ ಮಾತನಾಡುತ್ದಿದ್ದಾರೆ, ಇದರೊಂದಿಗೆ ಈ ಯೋಜನೆಯ ಹೆಸರಿನಲ್ಲಿ ಹಣವನ್ನು ಎಲ್ಲ ಮಹಿಳೆಯರಿಗೆ ಕೊಡುವುದು ಸರಿಯಲ್ಲ ಆರ್ಥಿಕವಾಗಿ ಚೆನ್ನಾಗಿದ್ದವರು ಸಹ ಈ ಯೋಜನೆಯ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ, ಅಂತವರ ಖಾತೆಗೆ ಹಣ ಹಾಕುವುದನ್ನು ನಿಲ್ಲಿಸಿ, ಇದರ ಬದಲಾಗಿ ಬಡಕುಟುಂಬಗಳಿಗೆ ಹೆಚ್ಚಿನ ಹಣ ನೀಡಿ ಎಂದು ಜನ ಹೇಳುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

About the Author

Trending News