close

News WrapGet Handpicked Stories from our editors directly to your mailbox

ರಾಜ್ಯ ಹಾಗೂ ಕೇಂದ್ರದ ಆರೋಗ್ಯ ಸೇವೆಗಳ ಬಗ್ಗೆ ಅರಿವು ಮೂಡಬೇಕಿದೆ: ಡಿಸಿಎಂ

ಜನ ಸಾಮಾನ್ಯರಿಗೆ ಆರೋಗ್ಯ ಸೇವೆ ಅತಿ ಕಡಿಮೆ ವೆಚ್ಚದಲ್ಲಿ‌ ಸಿಗಬೇಕು ಎಂಬ ಕಾರಣಕ್ಕೆ ಕೇಂದ್ರ ಸರಕಾರ ಆಯುಷ್‌ ಮಾನ್ ಭಾರತ್ ಆರೋಗ್ಯ ಯೋಜನೆ ತಂದಿದೆ.

Updated: Feb 15, 2019 , 03:42 PM IST
ರಾಜ್ಯ ಹಾಗೂ ಕೇಂದ್ರದ ಆರೋಗ್ಯ ಸೇವೆಗಳ ಬಗ್ಗೆ ಅರಿವು ಮೂಡಬೇಕಿದೆ: ಡಿಸಿಎಂ

ಬೆಂಗಳೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೇರಿ "ಆಯುಷ್‌ಮಾನ್‌ ಭಾರತ್ ಆರೋಗ್ಯ ಕರ್ನಾಟಕ" ಎಂಬ ಬೃಹತ್ ಯೋಜನೆಯನ್ನು ತಂದಿದ್ದು, ಜನಸಾಮಾನ್ಯರು ಇದರ ಪ್ರಯೋಜನ‌ ಪಡೆದುಕೊಳ್ಳುವ ಅರಿವು ಮೂಡಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.

ತುಮಕೂರು ಜಿಲ್ಲಾಡಳಿತ, ಜಿಲ್ಲಾ ಆಯುಷ್ ಸೇರಿದಂತೆ ಇತರೆ ಆಸ್ಪತ್ರೆಗಳ ಸಹಯೋಗದಲ್ಲಿ ಸಿದ್ದಾರ್ಥ ಮೆಡಿಕಲ್‌ ಕಾಲೇಜು ಮೈದಾನದಲ್ಲಿ ಆರೋಗ್ಯ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನ ಸಾಮಾನ್ಯರಿಗೆ ಆರೋಗ್ಯ ಸೇವೆ ಅತಿ ಕಡಿಮೆ ವೆಚ್ಚದಲ್ಲಿ‌ ಸಿಗಬೇಕು ಎಂಬ ಕಾರಣಕ್ಕೆ ಕೇಂದ್ರ ಸರಕಾರ ಆಯುಷ್‌ ಮಾನ್ ಭಾರತ್ ಆರೋಗ್ಯ ಯೋಜನೆ ತಂದಿದೆ. 

ಎಲ್ಲಾ ರಾಜ್ಯಗಳಲ್ಲೂ ಈ ಯೋಜನೆ ಜಾರಿಗೆ ಬಂದಿದೆ. ಬಿಪಿಎಲ್ ಕಾರ್ಡ್‌ ಹೊಂದಿರುವವರಿಗೆ ಉಚಿತ ಹಾಗೂ ಎಪಿಎಲ್ ಕಾರ್ಡ್‌ ಹೊಂದಿರುವವರಿಗೆ ಶೇ.30 ರಷ್ಟು ವೆಚ್ಚದಲ್ಲಿ ಚಿಕಿತ್ಸೆ ಕೊಡಲಾಗುತ್ತದೆ. 5 ಲಕ್ಷ ರೂ. ವರೆಗೆ ಈ ಯೋಜನೆಯಡಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದರು.

ಜಯದೇವ, ವಿಕ್ಟೋರಿಯಾದಂಥ ದೊಡ್ಡ ಆಸ್ಪತ್ರೆಗಳು‌ ಪ್ರತಿ ಜಿಲ್ಲೆಗೊಂದರಂತೆ ಆಗಬೇಕಿದೆ. ಈಗಾಗಲೇ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಆಸ್ಪತ್ರೆಗೆ ಹೊಂದಿಕೊಳ್ಳುವಂತೆ ಮೆಡಿಕಲ್ ಕಾಲೇಜು ತೆರೆಯಲಾಗಿದೆ‌. ಇದರಿಂದ ವೈದ್ಯತಜ್ಞರ ಸಂಖ್ಯೆ ಹೆಚ್ಚಲಿದೆ ಎಂದು ಹೇಳಿದ್ದಾರೆ.