)
ಮಂಡ್ಯ : ಕರ್ನಾಟಕ ಹೋಮಿಂಗ್ ಪಿಜನ್ ಫೆಡರೇಶನ್ ನಿಂದ ದೆಹಲಿಯಲ್ಲಿ ಪಿಜನ್ ರೇಸ್ ಆಯೋಜನೆ ಮಾಡಲಾಗಿತ್ತು. ಈ ರೇಸ್ ನಲ್ಲಿ ಒಟ್ಟು 22 ಪಾರಿವಾಳಗಳು ಭಾಗಿಯಾಗಿದ್ದವು. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ಮೂಲದ ಒಟ್ಟು 22 ಪಾರಿವಾಳಗಳು ಭಾಗಿಯಾಗಿದ್ದವು.
ಈ ಪಿಜನ್ ರೇಸ್ ನಲ್ಲಿ ಭಾಗಿಯಾದ 22 ಪಾರಿವಾಳಗಳು ಈ ಪೈಕಿ 14 ಪಾರಿವಾಳಗಳು ದೆಹಲಿಯಿಂದ ತಮ್ಮ ಮೂಲ ನೆಲೆಗೆ ವಾಪಸ್ಸಾಗಿವೆ.
ದೆಹಲಿಯಲ್ಲಿ ಹಾರಿ ಬಿಡಲಾಗಿದ್ದ ಎಲ್ಲಾ ಪಾರಿವಾಳಿಗೆ ಗುರುತಿಗಾಗಿ ವಿಶಿಷ್ಟ ಗುರುತಿನ ರಿಂಗನ್ನು ಹಾಕಲಾಗಿತ್ತು. ಪಾರಿವಾಳಗಳನ್ನು ಸುಲಭವಾಗಿ ಗುರುತಿಸುವ ಸಲುವಾಗಿ ಈ ರಿಂಗನ್ನು ಹಾಕಲಾಗಿತ್ತು.
ಈ ರೇಸ್ ನಲ್ಲಿ ಭಾಗಿಯಾಗಿದ್ದ ಮಂಡ್ಯದ ಪಾರಿವಾಳ ದೆಹಲಿಯಿಂದ ಮಂಡ್ಯಕ್ಕೆ ಹಾರಿ ಬಂದು ದಾಖಲೆ ಬರೆದಿದೆ. ಬರೋಬ್ಬರಿ 52 ದಿನಗಳ ಬಳಿಕ ಈ ಪಾರಿವಾಳ ದೆಹಲಿಯಿಂದ ಮಂಡ್ಯಕ್ಕೆ ಬಂದು ದಾಖಲೆ ಮಾಡಿದೆ. ಸುಮಾರು 1790 ಕಿ.ಮೀ.ಹಾರಾಟ ನಡೆಸಿ ಬಂದು ಇತಿಹಾಸ ಬರೆದಿದೆ.
ಮಂಡ್ಯದ ಹೊಳಲು ಗ್ರಾಮದ ಶ್ರೀಧರ ಎಂಬುವರು ಸಾಕಿದ್ದ 1 ವರ್ಷ ಅಭಿಮನ್ಯು ಹೆಸರಿನ ಪಾರಿವಾಳ ಈ ರೇಸ್ ನಲ್ಲಿ ಭಾಗಿಯಾಗಿತ್ತು. ಈ ಮೂಲಕ ಅತಿ ಚಿಕ್ಕ ವಯಸ್ಸಿಗೆ ಹೆಚ್ಚು ದೂರ ಕ್ರಮಿಸಿದ ಪಾರಿವಾಳ ಎಂಬ ಎನ್ನುವ ಹೆಗ್ಗಳಿಕೆಗೆ ಮಂಡ್ಯದ ಈ ಪಾರಿವಾಳ ಪಾತ್ರವಾಗಿದೆ.
ತಾನು ಸಾಕಿದ ಪಾರಿವಾಳ ಇಷ್ಟು ದೂರ ಹಾರಿ ಬಂದಿರುವುದಕ್ಕೆ ಮಾಲೀಕ ಸಂಭ್ರಮಪಟ್ಟಿದ್ದಾನೆ.