POCSO Case: ಪೋಕ್ಸೋ ಪ್ರಕರಣ ಅತ್ಯಂತ ಸೂಕ್ಷ್ಮ ಹಾಗೂ ಗಂಭೀರವಾಗಿದ್ದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನು. ಬಿ.ಎಸ್. ಯಡಿಯೂರಪ್ಪ ಅರೆಸ್ಟ್ ವಾರೆಂಟ್ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡ್ತಾ ಇಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.


COMMERCIAL BREAK
SCROLL TO CONTINUE READING

ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಸಚಿವ ಎಂ.ಬಿ. ಪಾಟೀಲ (Minister MB Patil),  ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಏನಾದರೂ ಅಹಿತಕರ ಘಟನೆಗಳು ನಡೆದರೆ ಇದು ಪೋಕ್ಸೋ ಕಾಯ್ದೆ (POCSO Act) ವ್ಯಾಪ್ತಿಗೆ ಬರುತ್ತದೆ.  ಇದರಲ್ಲಿ ಯಾವುದೇ ಸರಕಾರ ಹಾಗೂ ಪಕ್ಷ ಹಸ್ತಕ್ಷೇಪ ಮಾಡಲು ಬರಲ್ಲ. ಆದ್ದರಿಂದ ಇದರಲ್ಲಿ ತನ್ನದೇ ಆದ ರೀತಿಯಲ್ಲಿ ತನಿಖೆಯನ್ನ ಪೊಲೀಸರು ‌ಮಾಡತ್ತಾರೆ. ಚಿತ್ರದುರ್ಗ ಮುರುಘಾಶರಣರ ಮೇಲೆ ಪೋಕ್ಸೋ ಕಾಯ್ದೆ ಮೇಲೆ ಬಂಧನ ಮಾಡಿದ್ದು ಏನಾಯಿತು ಗೊತ್ತು. ಹೀಗಾಗಿ ಪೋಕ್ಸೋ ಪ್ರಕರಣದಲ್ಲಿ ಹೈಕೋರ್ಟ್ ಬಂಧನ ವಾರಂಟ್ ಜಾರಿ ಮಾಡಿದೆ‌. ಕೋರ್ಟ್ ನಿರ್ದೇಶನ ಮೇರೆಗೆ ಪೊಲೀಸರು ದೂರು ದಾಖಲು ಮಾಡಿದ್ದಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ  ಎಂದರು. 


ಇದನ್ನೂ ಓದಿ- ಚುನಾವಣೆ ಸೋಲು ಅರಗಿಸಿಕೊಳ್ಳಲಾಗದೆ ಬಿಎಸ್ ವೈ ವಿರುದ್ದ ರಾಜಕೀಯ ವೈಷಮ್ಯ :ಕಾಂಗ್ರೆಸ್ ವಿರುದ್ಧ ಪ್ರಲ್ಹಾದ ಜೋಶಿ ಆಕ್ರೋಶ


ಇನ್ನು ನಟ ದರ್ಶನ ಬಂಧನ (Actor Darshan Arrest) ಕುರಿತು ಮಾತನಾಡಿದ ಅವರು ಆರೋಪಿ ಎಂತಹ ದೊಡ್ಡ ವ್ಯಕ್ತಿಯಾದರೂ ಆರೋಪಿಯೇ ಎಂದು ಹೇಳಿದರು. 


ಈ ಸಂದರ್ಭದಲ್ಲಿ ಸಚಿವ ಕೆಎನ್ ರಾಜಣ್ಣ (Minister KN Rajanna) ಅವರ, ಮೂವರು ಉಪ ಮುಖ್ಯಮಂತ್ರಿಗಳ ಹುದ್ದೇ ಸೃಷ್ಟಿ ಮಾಡಬೇಕು ಎನ್ನುವ ಕುರಿತು ಸಹ ಮಾತನಾಡಿದ ಅವರು ಇದೊಂದು ಪಕ್ಷದ ಆಂತರಿಕ ವಿಚಾರ ಆಗಿದ್ದು ಪಕ್ಷದ ವೇದಿಕೆಯಲ್ಲಿ ಮಾತನಾಡುವೆ ಎಂದರು. 


ಇದನ್ನೂ ಓದಿ- POCSO case: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಜಾಮೀನು ರಹಿತ ವಾರಂಟ್ ಜಾರಿ!


ಇನ್ನು ಲೋಕಸಭಾ ಚುನಾವಣೆಯಲ್ಲಿ (Loksabha Elections) ಕೆಲ ಕ್ಷೇತ್ರಗಳಲ್ಲಿ ಸೋಲಾಗಿದ್ದು ಕೆಲವರು ತಲೆದಂಡ ಆಗುತ್ತದೆ ಎಂಬ ವಿಚಾರ ಕೇವಲ ಊಹಾಪೋಹಗಳು ಎಂದು ತಳ್ಳಿ ಹಾಕಿದ ಸಚಿವ ಎಂ.ಬಿ. ಪಾಟೀಲ, ರಾಜ್ಯ ಸರ್ಕಾರ ಉರುಳುತ್ತದೇ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಮೊದಲು ಅವರು ಮಹಾರಾಷ್ಟ್ರ ಸರಕಾರ ಉಳಿಸಿಕೊಳ್ಳಲಿ ಎಂದು ಟಾಂಗ್ ನೀಡಿದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.