close

News WrapGet Handpicked Stories from our editors directly to your mailbox

ಕರ್ನಾಟಕದಲ್ಲಿ 19 ಉಗ್ರರು ನುಸುಳಿದ್ದಾರೆಂದು ಸುಳ್ಳು ಕರೆ ಮಾಡಿದ್ದ ನಿವೃತ್ತ ಸೈನಿಕನ ಬಂಧನ

ಬೆಂಗಳೂರಿನ ಪೋಲಿಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿ ಕರ್ನಾಟಕದಲ್ಲಿ 19 ಉಗ್ರರು ನುಸುಳಿದ್ದಾರೆ ಎಂದು ಹುಸಿ ಕರೆ ಮಾಡಿದ್ದ ನಿವೃತ್ತ ಸೈನಿಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Updated: Apr 27, 2019 , 11:18 AM IST
ಕರ್ನಾಟಕದಲ್ಲಿ 19 ಉಗ್ರರು ನುಸುಳಿದ್ದಾರೆಂದು ಸುಳ್ಳು ಕರೆ ಮಾಡಿದ್ದ ನಿವೃತ್ತ ಸೈನಿಕನ ಬಂಧನ

ಬೆಂಗಳೂರು: ಬೆಂಗಳೂರಿನ ಪೋಲಿಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿ ಕರ್ನಾಟಕದಲ್ಲಿ 19 ಉಗ್ರರು ನುಸುಳಿದ್ದಾರೆ ಎಂದು ಹುಸಿ ಕರೆ ಮಾಡಿದ್ದ ನಿವೃತ್ತ ಸೈನಿಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತನಾಗಿರುವ ವ್ಯಕ್ತಿಯನ್ನು 65 ವರ್ಷದ ಸ್ವಾಮಿ ಸುಂದರಮೂರ್ತಿ ಎಂದು ಗುರುತಿಸಲಾಗಿದ್ದು, ಸದ್ಯ ಅವರು ಲಾರಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಈ ಅನಾಮಧೇಯ ಕರೆಯನ್ನು ಸ್ವೀಕರಿಸಿದ ನಂತರ ಕಾರ್ಯ ಪ್ರವೃತ್ತರಾದ ಬೆಂಗಳೂರು ಗ್ರಾಮೀಣ ಪೊಲೀಸರು, ಕರೆ ಬಂದ ಸ್ಥಳವನ್ನು ಪತ್ತೆ ಹಚ್ಚಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಬೆಂಗಳೂರಿನ ಹೊರವಲಯದ ಅವಲಹಳ್ಳಿಯಲ್ಲಿ ಈ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂರ್ತಿಯವರ ಮಗ ಭಾರತೀಯ ಸೇನೆಯಲ್ಲಿದ್ದಾನೆ ಮತ್ತು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿದ್ದರು ಎನ್ನಲಾಗಿದೆ.

ಪೊಲೀಸರು ಬಂಧಿಸಿದ ನಂತರ, ಶ್ರೀಲಂಕಾದಲ್ಲಿನ ಬಾಂಬ್ ಸ್ಪೋಟದ ಹಿನ್ನಲೆಯಲ್ಲಿ ಭಯೋತ್ಪಾದಕರು ರಾಜ್ಯದಲ್ಲಿ ನುಸುಳಿರಬಹುದು ಎಂದು ತಾವು ಊಹಿಸಿ ಕರೆ ಮಾಡಿರುವುದಾಗಿ ನಿವೃತ್ತ ಸೈನಿಕನು ತಿಳಿಸಿದ್ದಾನೆ.ಇದಕ್ಕೂ ಮೊದಲು ಕರ್ನಾಟಕದ ಡಿಜಿ-ಐಜಿಪಿ ನೀಲಮಣಿ ಎನ್ ರಾಜು ಸುತ್ತಮುತ್ತಲಿನ ಆರು ರಾಜ್ಯಗಳಿಗೆ ಪತ್ರ ಬರೆದು ಉಗ್ರರ ದಾಳಿಯ ಬಗ್ಗೆ ಎಚ್ಚರದಿಂದಿರುವ ಬಗ್ಗೆ ಸೂಚನೆ ನೀಡಿದ್ದರು.