Suraj Revanna on Prajwal Revanna: ಇನ್ನೊಂದು ತಿಂಗಳಿನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲಿನಿಂದ ಹೊರಬರುತ್ತಾರೆ. ನಾವೆಲ್ಲರೂ ಸೇರಿಕೊಂಡು ಅವರನ್ನ ಸ್ವಾಗತ ಮಾಡೋಣ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಹೇಳಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿಕಟ್ಟೆ ಗ್ರಾಮದಲ್ಲಿ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ʼಇನ್ನೊಂದು ತಿಂಗಳಲ್ಲಿ ಪ್ರಜ್ವಲ್ ಹೊರಬರುತ್ತಾರೆ. ಈ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಡಿ. ಇವತ್ತಿಗೇ ಪ್ರಪಂಚ ಮುಗಿದು ಹೋಗಿಲ್ಲʼ ಎಂದಿದ್ದಾರೆ.
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 1 ವರ್ಷದಿಂದ ಪ್ರಜ್ವಲ್ ರೇವಣ್ಣ ಜೈಲು ಪಾಲಾಗಿದ್ದಾರೆ. ಈ ಪ್ರಕರಣದಿಂದ ರೇವಣ್ಣ ಕುಟುಂಬ ಅಕ್ಷರಶಃ ನಡುಗಿದೆ. ಈ ನಡುವೆ ಪ್ರಜ್ವಲ್ ಸಹೋದರ ಸೂರಜ್ ರೇವಣ್ಣ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ʼಪ್ರಜ್ವಲ್ ರೇವಣ್ಣ ಇನ್ನೊಂದು ತಿಂಗಳಲ್ಲಿ ಹೊರಗೆ ಬರುತ್ತಾರೆ ಎಂದು ಆಶಿಸುತ್ತಿದ್ದೇವೆ. ಎಲ್ಲರೂ ಒಟ್ಟಿಗೆ ಸೇರಿ ಅವರನ್ನ ಸ್ವಾಗತಿಸೋಣʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಕ್ಕಿಜ್ವರದ ಆತಂಕ.. ಇದ್ದಕ್ಕಿದ್ದಂತೆ ಮೀನಿಗೆ ಫುಲ್ ಡಿಮ್ಯಾಂಡ್
ಅಧಿಕಾರ ನಿಂತ ನೀರಲ್ಲ. ಜೆಡಿಎಸ್‌ಗೆ ಮತ್ತೆ ಅಧಿಕಾರ ಸಿಕ್ಕೇ ಸಿಗುತ್ತದೆ. ಜನರಿಗೆ ಯಾರು ಹೆಚ್ಚು ಅನುಕೂಲ ಕಲ್ಪಿಸುತ್ತಾರೆ ಅನ್ನೋದರ ಬಗ್ಗೆ ಜನರ ಒಲವು ಇರುತ್ತದೆ. ಹೀಗಾಗಿಯೇ ಜೆಡಿಎಸ್ ಆಡಳಿತದ ಪರ ಮತ್ತೆ ಜನರು ಮಾತನಾಡುತ್ತಿದ್ದಾರೆ. ಎಚ್.ಡಿ.ರೇವಣ್ಣ ಸಚಿವರಾಗಿದ್ದಾಗ ಹಾಗೂ ಶಾಸಕರಾಗಿದ್ದಾಗ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಾಲೂಕಿಗೆ ಮತ್ತು ಜಿಲ್ಲೆಗೆ ನೀಡಿದ ಕೊಡುಗೆ ಬಗ್ಗೆ ಜನರಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ' ಎಂದು ತಿಳಿಸಿದರು.
ʼನಾಲೈದು ತಿಂಗಳಲ್ಲಿ ಸರ್ಕಾರ ಬದಲಾವಣೆ ಆಯ್ತು ಅನ್ನಳ್ಳಿ, ಆಗ ಜನರು ಬಂದು ಎಚ್.ಡಿ.ರೇವಣ್ಣಗೆ ಜೈ ಅಂತಾರೆ, ಇದೇ ನಮ್ಮ ತಾಲೂಕಿನ ಕಥೆ. ರೇವಣ್ಣ ಎಲ್ಲಾ ಗ್ರಾಮಗಳಿಗೂ ರಸ್ತೆ ಮಾಡಿಸಿದ್ರು, ಏನೂ ಕೆಲಸ ಮಾಡದೇ ಹಳ್ಳಿಗಳಲ್ಲಿ ಕೈ ಬೀಸ್ಕೊಂಡು ಬಂದು ಹೋಗುವವರೂ ಇದ್ದಾರೆ. ಆದ್ದರಿಂದ ನೀವು ನಮ್ಮ ಗ್ರಾಮಕ್ಕೆ ಯಾರು ಹಿತ, ಯಾರು ಅಹಿತ ಅಂತಾ ಯೋಚನೆ ಮಾಡಿ. ನಿಮ್ಮ ಗ್ರಾಮಕ್ಕೆ ಶಾಶ್ವತ ಕೆಲಸ ಮಾಡಿದವರನ್ನು ಏಕೆ ನೆನಪಿಸಿಕೊಳ್ಳುತ್ತಿಲ್ಲ' ಎಂದು ಇದೇ ವೇಳೆ ಸೂರಜ್ ಪ್ರಶ್ನಿಸಿದರು.
ಇದನ್ನೂ ಓದಿ: ಐವರನ್ನು ಬಂಧಿಸಿದ ಸೋಲೆದೇವನಹಳ್ಳಿ ಪೊಲೀಸರು
ʼನಾವು ಪ್ರತಿದಿನ ಬೆಳಗ್ಗೆ ನಿಮ್ಮ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇವೆ. ಯುವಕರು ಎಲ್ಲರೂ ಒಟ್ಟಿಗೆ ಒಗ್ಗಟ್ಟಾಗಿ ಒಂದು ಕಡೆ ಇರಬೇಕು. ಇವತ್ತಿಗೇ ಈ ಪ್ರಪಂಚ ಮುಗಿದು ಹೋಗಿಲ್ಲ, ಮುಂದಕ್ಕೂ ರಾಜಕೀಯ ಏನೂ ಅನ್ನೋದು ನನಗೆ ಗೊತ್ತಿದೆʼ ಅಂತಾ ಸೂರಜ್ ತಿಳಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









