ಪ್ರಧಾನಿ ಮೋದಿ ಭಾರತವನ್ನು ವಿಶ್ವಗುರು ಮಾಡ್ತೀನಿ ಎಂದು ಈಗ ಕೊರೊನಾದಲ್ಲಿ ನಂ.1 ಮಾಡಲು ಹೊರಟಿದ್ದಾರೆ-ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧೀರ್ಘ ಆಯಸ್ಸು, ಆರೋಗ್ಯ ಕರುಣಿಸಲಿ ಎಂದು ಈ ವೇಳೆ ಹಾರೈಸುತ್ತೇನೆ.

Last Updated : Sep 17, 2020, 05:55 PM IST
ಪ್ರಧಾನಿ ಮೋದಿ ಭಾರತವನ್ನು ವಿಶ್ವಗುರು ಮಾಡ್ತೀನಿ ಎಂದು ಈಗ ಕೊರೊನಾದಲ್ಲಿ ನಂ.1 ಮಾಡಲು ಹೊರಟಿದ್ದಾರೆ-ಸಿದ್ದರಾಮಯ್ಯ  title=

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧೀರ್ಘ ಆಯಸ್ಸು, ಆರೋಗ್ಯ ಕರುಣಿಸಲಿ ಎಂದು ಈ ವೇಳೆ ಹಾರೈಸುತ್ತೇನೆ.
ಮೋದಿಯವರ ಜನ್ಮದಿನದ ಆಚರಣೆಯನ್ನು ಯಾರೂ ಬೇಡ ಅಂದಿಲ್ಲ, ಆದರೆ ಕೋಟ್ಯಂತರ ರೂಪಾಯಿ ಸುರಿದು ಜಾಹೀರಾತು ನೀಡಿ ಮಾಡದೇ ಇರುವ ಕೆಲಸಗಳನ್ನೆಲ್ಲಾ ಮೋದಿಯ ಸಾಧನೆ ಎಂದು ಸುಳ್ಳು ಪ್ರಚಾರ ಪಡೆಯುತ್ತಿರುವುದಕ್ಕಷ್ಟೇ ನಮ್ಮ ವಿರೋಧ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನಿಜವಾದ ಸಾಧನೆಗಳೆಂದರೆ, ಭಾರತದ ಜಿಡಿಪಿಯನ್ನು -23% ಗೆ ಕೊಂಡೊಯ್ದಿರುವುದು, ನಿರುದ್ಯೋಗ ಪ್ರಮಾಣವನ್ನು ಕಳೆದ 45 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿಸಿರುವುದು, ಪೆಟ್ರೋಲ್ ಡೀಸೆಲ್ ಬೆಲೆ ನೂರರ ಆಸುಪಾಸಿಗೆ ತಂದು ನಿಲ್ಲಿಸಿರುವುದು.

ದೇಶದ ಯುವಜನತೆ ಮೋದಿ ಅವರಲ್ಲಿ ಭರವಸೆ ಇಟ್ಟು ಮತ ನೀಡಿದ್ದರು, ಇಂದು ಅದೇ ಯುವಜನಾಂಗ ಉದ್ಯೋಗವಿಲ್ಲದೆ ಖಿನ್ನತೆ ಅನುಭವಿಸುತ್ತಿದೆ. ಕೃಷಿ ಕ್ಷೇತ್ರವೊಂದನ್ನು ಹೊರತುಪಡಿಸಿ ದೇಶದ ಉಳಿದೆಲ್ಲಾ ವಲಯಗಳ ಪ್ರಗತಿ ಋಣಾತ್ಮಕವಾಗಿದೆ. ಇದರಿಂದ ರಾಷ್ಟ್ರದ ಭವಿಷ್ಯಕ್ಕೆ ಅಂಧಕಾರ ಆವರಿಸಿದೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಭರವಸೆ ನೀಡಿ, ಈಗ ಇರುವ ಉದ್ಯೋಗವನ್ನು ಕಳೆದುಕೊಳ್ಳುವಂತೆ ಮಾಡಿದ್ದಾರೆ.

ಸಂಕಷ್ಟದ ಸಮಯದಲ್ಲಿ ಸರ್ಕಾರ ರೈತರ ಬೆನ್ನುಮೂಳೆ ಮುರಿಯಲು ಹೊರಟಿದೆ-ಸಿದ್ಧರಾಮಯ್ಯ

ಇದರಿಂದ ನೊಂದಿರುವ ಉದ್ಯೋಗವಂಚಿತ ಯುವಜನತೆ ಈ ದಿನವನ್ನು #NationlUnemploymentDay ಎಂದು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ.ಮಾರ್ಚ್‌ನಲ್ಲಿ 564 ಇದ್ದ ದೇಶದ ಕೊರೊನಾ ಸೋಂಕಿತರ ಪ್ರಮಾಣವನ್ನು ಕೇವಲ ಆರೇ ತಿಂಗಳಲ್ಲಿ 51 ಲಕ್ಷಕ್ಕೆ ಮುಟ್ಟಿಸಿರುವುದೇ ನರೇಂದ್ರ ಮೋದಿ ಅವರ ಮಹತ್ತರ ಸಾಧನೆ. ಭಾರತವನ್ನು ವಿಶ್ವಗುರು ಮಾಡ್ತೀನಿ ಅಂತ ಹೇಳಿ, ಈಗ ಕೊರೊನಾದಲ್ಲಿ ನಂ.1 ಮಾಡಲು ಹೊರಟಿದ್ದಾರೆ. 

ಸದ್ಯ ಸೋಂಕಿತರ ಏರಿಕೆ ಪ್ರಮಾಣದಲ್ಲಿ ಭಾರತವೇ ಮುಂದಿದೆ. ಆರೋಗ್ಯ ಮಂತ್ರಿ ಶ್ರೀರಾಮುಲು ತನ್ನ ಕೈಯಲ್ಲಿ ಆರೋಗ್ಯ ಇಲಾಖೆಯನ್ನು ನಿಭಾಯಿಸೋಕೆ ಆಗ್ತಿಲ್ಲ, ಸ್ವಲ್ಪ ಸಹಾಯ ಮಾಡಿ ಅಂತ ಕೇಳಿರಬಹುದು.ಇಲ್ಲದಿದ್ದರೆ ಸಂವಿಧಾನಾತ್ಮಕ ಹುದ್ದೆಯೇ ಇಲ್ಲದ ವ್ಯಕ್ತಿಯೊಬ್ಬ ಸರ್ಕಾರಿ ಅಧಿಕಾರಿಗಳ ಸಭೆ ನಡೆಸೋಕೆ ಹೇಗೆ ಸಾಧ್ಯ? ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರಾ? ಅಥವಾ ವಿಜಯೇಂದ್ರನಾ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿ ಈಗಲೇ ಹೆಚ್ಚಿದೆ, ಇದಕ್ಕೆ ಇನ್ನಷ್ಟು ಗ್ರಾಮಗಳನ್ನು ಸೇರಿಸಿ, ಹುದ್ದೆಗಳ ಹೆಸರು ಬದಲಾಯಿಸಿದ್ರೆ ನಗರದ ಚಿತ್ರಣ ಬದಲಾಗುತ್ತಾ? ರಾಜಾಕಾಲುವೆಗಳ ದುರಸ್ತಿ, ರಸ್ತೆಗಳ ದುರಸ್ತಿ ಸೇರಿದಂತೆ ಇತರೆ ಮೂಲ ಸೌಕರ್ಯ ಅಭಿವೃದ್ಧಿ ಆಗಬೇಕಲ್ಲಾ? ಸರ್ಕಾರದ ಬಳಿ ಹಣವಿಲ್ಲದೆ ಇವೆಲ್ಲ ಸಾಧ್ಯವಾ? ರಾಜ್ಯ ಬಿಜೆಪಿ ನಾಯಕರು ಬರೀ ಭಾಷಣದಿಂದ ಬದಲಾವಣೆ ಮಾಡೋಕೆ ಹೊರಟಿದ್ದಾರೆ. 

Trending News