)
ಹುಬ್ಬಳ್ಳಿ: ಮಹದಾಯಿ ಯೋಜನೆಗೆ ಪರಿಸರ ಇಲಾಖೆ ಅನುಮತಿಗಾಗಿ ಆಗ್ರಹಿಸಿ ನಗರದ ಚಿಟಗುಪ್ಪಿ ಆಸ್ಪತ್ರೆ ಬಳಿ ಇರುವ ಪ್ರಹ್ಲಾದ್ ಜೋಶಿ ಕಚೇರಿ ಬಳಿ ನಡೆಸುತ್ತಿದ್ದ ಹೋರಾಟ ತಾತ್ಕಾಲಿಕವಾಗಿ ಅಂತ್ಯವಾಗಿದೆ.
ರೈತ ಮುಖಂಡರು ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಧ್ಯೆ ರಾತ್ರಿ ನಡೆದ ಮಾತುಕತೆಯ ನಂತರ ತಾತ್ಕಾಲಿಕವಾಗಿ ಹೋರಾಟ ಅಂತ್ಯಗೊಳಿಸಲು ಹೋರಾಟಗಾರರು ನಿರ್ಧರಿಸಿದ್ದಾರೆ.
ಈಕುರಿತಂತೆ ಮಹದಾಯಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಸಿದ್ದಣ್ಣ ತೇಜಿ ಮಾತನಾಡಿ, ಹೋರಾಟಕ್ಕೂ ಮುನ್ನ ಸಚಿಗರು ಭೇಟಿಯಾಗಲು ಹೇಳಿದ್ದರು. ಆಗ ನಾವು ನೀವು ಪರಿಸರ ಇಲಾಖೆ ಅನುಮತಿ ಕೊಡಿಸಿ ಇಲ್ಲಿಯವರೆಗೂ ಹೋರಾಟ ಮಾಡುತ್ತೇವೆ ಎಂದಿದ್ದೇವು.
ರಾಜ್ಯ ಸರ್ಕಾರದ ಅಧಿಕಾರಿಗಳು, ವಕೀಲರು ಸಭೆ ಇದೆ. ಆಗ ನೀವು ಬನ್ನಿ ಭೇಟಿ ಮಾಡಿಸುವದಾಗಿ ಜೋಶಿಯವರು ಹೇಳಿದ್ದಾರೆ. ನಾವು ಬರುವದಕ್ಕೆ ಆಗುವದಿಲ್ಲ ಎಂದು ಹೇಳಿದ್ದೇವೆ. ನೀವು ಜಿಲ್ಲೆಯ ಪ್ರತಿನಿಧಿ ಆಗಿದ್ದು ಪರಿಸರ ಇಲಾಖೆ ಅನುಮತಿ ತರಬೇಕು ಎಂದು ಒತ್ತಾಯಿಸಿದ್ದೇವೆ.
ಆದ್ರೆ ಜೋಶಿಯವರೇ ತಮ್ನ ನೇತೃತ್ವದಲ್ಲಿ ಅನುಮತಿ ತರಬೇಕು. ಹೋರಾಟ ಮುಂದುವರೆಯುತ್ತದೆ. 15 ದಿನಗಳ ಕಾಲಾವಕಾಶ ಕೇಳಿದ್ದಾರೆ. ಅವರು ಅನುಮತಿ ಪತ್ರ ತಂದ್ರೆ ಸರಿ. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು.
ಮಹಾದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ಕಳೆದ ಮೂರು ದಿನಗಳಿಂದ ಅನಿರ್ಧಿಷ್ಟ ಹೋರಾಟ ಆರಂಭಿಸಿದ್ದರು. ಮಹಾದಾಯಿ ಜಾರಿಗೆ ಕೇಂದ್ರ ಸಚಿವರ ಮೇಲೆ ಒತ್ತಡ ತರುವ ಭರವಸೆ ಹಿನ್ನೆಲೆ ತಾತ್ಕಾಲಿಕವಾಗಿ ಹೋರಾಟ ಹಿಂಪಡೆದಿದ್ದಾರೆ. ಪ್ರಹ್ಲಾದ್ ಜೋಶಿ ಕೊಟ್ಟ ಮಾತಿನಂತೆ ನಡೆಯಬೇಕು.ಕಾಲಮಿತಿಯಲ್ಲಿ ಮಹಾದಾಯಿ ಯೋಜನೆ ಜಾರಿಗೆ ತರಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮತ್ತೆ ಹೋರಾಟ ಆರಂಭಿಸುವ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.