ಅಂಬರೀಶ್ ಮೆಮೊರಿ ಪವರ್ ಗೆ ಅಚ್ಚರಿಗೊಂಡಿದ್ದ ರಮ್ಯಾ !

ರೆಬೆಲ್ ಸ್ಟಾರ್ ಅವರ ವರ್ಣರಂಜಿತ ವ್ಯಕ್ತಿತ್ವ ಎಲ್ಲರಿಗೂ ಗೊತ್ತು, ಆದರೆ ಅವರ ನೆನಪಿನ ಶಕ್ತಿಯ ಬಗ್ಗೆ ನೀವು ಈ ಘಟನೆಯನ್ನು ಒಂದು ಕ್ಷಣ ಓದಲೇಬೇಕು 

Last Updated : Nov 25, 2018, 06:59 PM IST
ಅಂಬರೀಶ್ ಮೆಮೊರಿ ಪವರ್ ಗೆ ಅಚ್ಚರಿಗೊಂಡಿದ್ದ ರಮ್ಯಾ ! title=

ಬೆಂಗಳೂರು: ರೆಬೆಲ್ ಸ್ಟಾರ್ ಅವರ ವರ್ಣರಂಜಿತ ವ್ಯಕ್ತಿತ್ವ ಎಲ್ಲರಿಗೂ ಗೊತ್ತು, ಆದರೆ ಅವರ ನೆನಪಿನ ಶಕ್ತಿಯ ಬಗ್ಗೆ ನೀವು ಈ ಘಟನೆಯನ್ನು ಒಂದು ಕ್ಷಣ ಓದಲೇಬೇಕು 

ಹೌದು, ಅಂಬಿ ಎಂದರೆನೇ ಹಾಗೆ ಯಾವುದೇ ಸ್ಟಾರ್ ಹಮ್ಮು ಇಲ್ಲದ ವ್ಯಕ್ತಿತ್ವ ಇಂತಹ ಅಂಬಿಗೆ ಮಾತ್ರ ಚಿತ್ರರಂಗದ ಮತ್ತು ಹಲವು ರಾಜಕೀಯ ನಾಯಕರ ನಂಬರ್ ಗಳನ್ನು ಕೇವಲ ಬಾಯಲ್ಲೇ ಹೇಳುತ್ತಿದ್ದರೆಂದರೆ ನೀವೆಲ್ಲ ಅಚ್ಚರಿ ಪಡಲೇಬೇಕು.  

ಇದಕ್ಕೆ ಉದಾಹರಣೆ ಎನ್ನುವಂತೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಒಮ್ಮೆ ಅಂಬರೀಶ್ ರವರ ಮನೆಯಲ್ಲಿದ್ದಾಗ ಅವರು ಚಿತ್ರರಂಗದ ಗಣ್ಯರಿಗೆ ಪೋನ್ ಮಾಡಬೇಕಾಗಿತ್ತು, ಆ ವೇಳೆ  ಅವರು ಪೋನ್ ಮಾಡಲು ಅಂಬರೀಶ್ ಅವರಿಗೆ ಪೋನ್ ಲಿಸ್ಟ್ ಕೇಳಿದರು.ಅದಕ್ಕೆ ತಕ್ಷಣ ಯಾರ್ಯಾರ್ ನಂಬರ್ ಬೇಕೆಂದು ಕೇಳಿದಾಗ ಕೆಲವು ನಾಯಕರ ಹೆಸರುಗಳನ್ನು ಅಂಬಿ ಹೇಳಿದಾಗ ಸ್ವತಃ ರಮ್ಯಾನೆ ಅವಕ್ಕಾಗಿದ್ದರು. ಅವರು ರಮ್ಯಾಗೆ ಯಾಕಮ್ಮ ಡೈರಕ್ಟರಿ ಅಂತಾ ಹೇಳಿ ತಕ್ಷಣ ಅವರು ಹೇಳಿದ ನಾಯಕರ ನಂಬರ್ ಗಳನ್ನು ಹೇಳಿ ಎಲ್ಲರನ್ನು ಚಕಿತರನ್ನಾಗಿ ಮಾಡಿದ್ದರು.

 

Trending News