ಡಿಕೆ ಶಿವಕುಮಾರ್‌ ಸಿಎಂ ಸ್ಥಾನದ ಬಗ್ಗೆ: ಮತ್ತೆ ಮುನ್ನಲೆಗೆ ಬಂದ ಮೂಲ vs ವಲಸಿಗ ಫೈಟ್!

ಸಿದ್ದರಾಮಯ್ಯನವರ ಆಪ್ತ ಸಚಿವರಾದ ಸತೀಶ್ ಜಾರಕಿಹೊಳಿ, ಮಹಾದೇವಪ್ಪ, ರಾಜಣ್ಣ ಸಿದ್ದರಾಮಯ್ಯ ಮುಂದುವರಿಯಬೇಕು ಎಂಬ ಅಭಿಪ್ರಾಯದಲ್ಲಿದ್ದಾರೆ. ವಲಸಿಗ ನಾಯಕರು ಹೀಗೆ ಲೆಕ್ಕ ಹಾಕುತ್ತಿದ್ದಾರೆ:

Written by - Prashobh Devanahalli | Edited by - Manjunath Naragund | Last Updated : Mar 4, 2025, 10:11 AM IST
  • ಸಿದ್ದರಾಮಯ್ಯ ಹೊರತು ಪಡಿಸಿ, ಹೈಕಮಾಂಡ್‌ ಎಂಟ್ರಿಯಾದರೆ ನಮ್ಮ ಆಟ ನಡೆಯದು
  • ಪಕ್ಷದ ಮೂಲ ನಾಯಕರು ಮುನ್ನಲೆಗೆ ಬಂದರೆ ನಮ್ಮ ಅವಕಾಶ ಕಡಿಮೆಯಾಗಬಹುದು
ಡಿಕೆ ಶಿವಕುಮಾರ್‌ ಸಿಎಂ ಸ್ಥಾನದ ಬಗ್ಗೆ: ಮತ್ತೆ ಮುನ್ನಲೆಗೆ ಬಂದ ಮೂಲ vs ವಲಸಿಗ ಫೈಟ್!

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ಸುತ್ತಲೂ ಮತ್ತೊಮ್ಮೆ ಬಣ ರಾಜಕೀಯ ಚರ್ಚೆಗೆ ಬಂದಿದೆ. ಡಿಕೆ ಶಿವಕುಮಾರ್‌ ಅವರ ಸಿಎಂ ಆಕಾಂಕ್ಷೆಗೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಬೆಂಬಲ ನೀಡಿದಂತಾಗಿದ್ದು, ಇತ್ತ ಸಿದ್ದರಾಮಯ್ಯನವರ ಆಪ್ತ ಸಚಿವರು ನಾಯಕತ್ವಕ್ಕೆ ಒತ್ತಾಸೆಯನ್ನೂ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೂಲ vs ವಲಸಿಗ ನಾಯಕರ ರಾಜಕೀಯ ಹೋರಾಟ ಮತ್ತೆ ಚರ್ಚೆಗೆ ಬಂದಿದೆ.

Add Zee News as a Preferred Source

ಡಿಕೆಶಿ ಪರ ಮೊಯ್ಲಿಯ ಬ್ಯಾಟಿಂಗ್..!

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಡಿಕೆ ಶಿವಕುಮಾರ್ ಅವರನ್ನು ಮುಂದಿನ ಸಿಎಂ ಆಗಲು ಕಾದು ಕುಳಿತಿದ್ದಾರೆ. "ಡಿಕೆಶಿಗೆ ಸಿಎಂ ಪಟ್ಟ ತಪ್ಪಿಸಲಾಗದು" ಎಂದು ಮೊಯ್ಲಿ ಹೇಳಿದರು. ಇದು ಡಿಕೆಶಿ ಪರ ಪಕ್ಷದ ಮೂಲ ನಾಯಕರ ಬಲವನ್ನು ಹೆಚ್ಚಿಸಿದೆ.

ವಲಸಿಗ ಸಚಿವರ ಲೆಕ್ಕಾಚಾರ:

ಸಿದ್ದರಾಮಯ್ಯನವರ ಆಪ್ತ ಸಚಿವರಾದ ಸತೀಶ್ ಜಾರಕಿಹೊಳಿ, ಮಹಾದೇವಪ್ಪ, ರಾಜಣ್ಣ ಸಿದ್ದರಾಮಯ್ಯ ಮುಂದುವರಿಯಬೇಕು ಎಂಬ ಅಭಿಪ್ರಾಯದಲ್ಲಿದ್ದಾರೆ. ವಲಸಿಗ ನಾಯಕರು ಹೀಗೆ ಲೆಕ್ಕ ಹಾಕುತ್ತಿದ್ದಾರೆ:

ಸಿದ್ದರಾಮಯ್ಯ ಮುಂದುವರಿದರೆ ನಾವೂ ಸೇಫ್

ಸಿದ್ದರಾಮಯ್ಯನ ನಾಮಬಲ ನಮಗೆ ರಕ್ಷೆ

ಸಿದ್ದರಾಮಯ್ಯ ಹೊರತು ಪಡಿಸಿ, ಹೈಕಮಾಂಡ್‌ ಎಂಟ್ರಿಯಾದರೆ ನಮ್ಮ ಆಟ ನಡೆಯದು

ಪಕ್ಷದ ಮೂಲ ನಾಯಕರು ಮುನ್ನಲೆಗೆ ಬಂದರೆ ನಮ್ಮ ಅವಕಾಶ ಕಡಿಮೆಯಾಗಬಹುದು

ಮೂಲ ನಾಯಕರ ಲೆಕ್ಕಾಚಾರ:

ಮೂಲ ಕಾಂಗ್ರೆಸ್ ನಾಯಕರಿಗೆ ಡಿಕೆಶಿಯೇ ಪ್ರಸ್ತಾವಿತ ಸಿಎಂ! ವೀರಪ್ಪ ಮೊಯ್ಲಿ ಸೇರಿ ಹಲವರು ಮೂಲ ಕೈ ನಾಯಕರಿಗೆ ಪಕ್ಷದಲ್ಲಿ ಪ್ರಾತಿನಿಧ್ಯ ಹೆಚ್ಚಾಗಬೇಕೆಂದು ಬಯಸುತ್ತಿದ್ದಾರೆ. ಅವರ ಲೆಕ್ಕಾಚಾರ ಹೀಗಿದೆ:

ಡಿಕೆ ಶಿವಕುಮಾರ್ ಮೂಲ ಕಾಂಗ್ರೆಸ್‌ಗೆ ಸೇರಿದವರು ಮೂಲ ನಾಯಕರಿಗೆ ಮತ್ತಷ್ಟು ಅವಕಾಶ ಸಿಗಬೇಕು.

ಮುಖ್ಯಮಂತ್ರಿ ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ ವಲಸಿಗರಿಗೆ ಬ್ರೇಕ್ ಹಾಕಬೇಕು.

ಪಕ್ಷದ ಪೂಜೆ ಓಕೆ, ಆದರೆ ವ್ಯಕ್ತಿ ಪೂಜೆ ಬೇಡ!

ಡಿಕೆಶಿ ಪರ ಇರುವ ಹಿರಿಯ ಮುಖಂಡರು ಮತ್ತು ಸಿದ್ದರಾಮಯ್ಯ ಪರ ಇರುವ ಆಪ್ತರು ತಮ್ಮದೇ ಲೆಕ್ಕಾಚಾರ ಮಾಡುತ್ತಿದ್ದು, ಈ ಬಣ ರಾಜಕೀಯ ಮುಂದಿನ ದಿನಗಳಲ್ಲಿ ಎಲ್ಲಿ ತಲುಪುತ್ತದೋ ಎಂಬುದರ ಮೇಲೆ ಕುತೂಹಲ ಹೆಚ್ಚಾಗಿದೆ. ಹೈಕಮಾಂಡ್ ಈ ಬಗ್ಗೆಯೇನು ತೀರ್ಮಾನ ಮಾಡಲಿದೆ ಎಂಬುದೂ ಪ್ರಮುಖ ಪ್ರಶ್ನೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News