)
Rain Effect: ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ಎರಡು ಮನೆಗಳ ಛಾವಣಿ ಕುಸಿದಿದ್ದು, ಸ್ವಲ್ಪದರಲ್ಲೇ ಮನೆಯಲ್ಲಿ ಇದ್ದವರು ಬಚಾವ್ ಆಗಿರುವ ಘಟನೆ ಗದಗ ಜಿಲ್ಲೆಯ ಲಕ್ಷೇಶ್ವರ ಪಟ್ಟಣದಲ್ಲಿ ನಡೆದಿದೆ.
ಗದಗ ಜಿಲ್ಲೆಯ ಲಕ್ಷೇಶ್ವರ ಪಟ್ಟಣದ 12ನೇ ವಾರ್ಡ್ ನ ಮಹಾದೇವಪ್ಪ ಗೋಜನೂರು, ಗುರುನಾಥ ಸೊರಟೂರು ಎಂಬುವವರ ಮಣ್ಣಿನ ಮನೆಗಳ ಛಾವಣಿ ಕುಸಿತಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.
ಮಹಾದೇವಪ್ಪ ದಿನಕೂಲಿ ಕೆಲಸಕ್ಕೆ ಹೋಗಿದ್ದರು. ಮಕ್ಕಳು ಸಹ ಶಾಲೆಯ ಸಮಯ ಆಯ್ತು ಅಂತ ಶಾಲೆಗೆ ಹೋಗಿದ್ದರು. ಇನ್ನು ಮನೆಯಲ್ಲಿದ್ದ ಪತ್ನಿ ಮನೆಯ ಹೊರಗೆ ಅಂಗಳ ಕಸ ಹೊಡೆಯಲು ಹೊರ ಬಂದಿದ್ದ ವೇಳೆ ಏಕಾಏಕಿ ಮನೆಯ ಛಾವಣಿ ಕುಸಿದು ಬಿದ್ದಿರುವುದರಿಂದ ಮನೆಯೊಳಗೆ ಯಾರೂ ಇಲ್ಲದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
ಭಾರೀ ಮಳೆ, ಛಾವಣಿ ಕುಸಿತದಿಂದಾಗಿ ಮನೆಯಲ್ಲಿದ್ದ ಗೃಹ ಉಪಯೋಗಿ ವಸ್ತುಗಳಿಗೆ ಹಾನಿಯಾಗಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ಪುರಸಭೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.