)
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ರಾಜಾತಿಥ್ಯ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೆ ರಾಜಾತಿಥ್ಯ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಮರುಕಳಿಸಿದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಸುಪ್ರೀಂ ಖಡಕ್ ಸೂಚನೆ ನಡೆಯುವ ಕೊಲೆ ಆರೋಪಿ ಗುಬ್ಬಚ್ಚಿ ಸೀನನಿಗೆ ಜೈಲಿನಲ್ಲಿ ಸಲಕ ಸೌಲಭ್ಯ ಕಲ್ಪಿಸಲಾಗಿದೆ.
ಜೈಲಿನ ಆರನೇ ಬ್ಯಾರಕ್ ಏಳನೇ ಕೊಠಡಿಯಲ್ಲಿರುವ ಗುಬ್ಬಚ್ಚಿ ಸೀನ ಅಂಡ್ ಗ್ಯಾಂಗ್ ಗೆ ಜೈಲಿನ ಅಧಿಕಾರಿಗಳು ಟಿವಿ, ಮೊಬೈಲ್ ಸ್ವೌವ್, ಆಡುಗೆ ಪಾತ್ರೆಗಳು, ಮೊಟ್ಟೆ, ಚಿಕನ್ ಮಟನ್ ಹೀಗೆ ಸಲಕ ಸೌಲಭ್ಯ ಒದಗಿಸಿದ್ದು, ಗುಬ್ಬಚ್ಚಿ ಸಹಚರ ಅರವಿಂದ್ ಪೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದೀಗ ವೈರಲ್ ಆಗಿದೆ.
ಇನ್ನೂ ಗುಬ್ಬಚ್ಚಿ ಸೀನ ಸೆಪ್ಟೆಂಬರ್ ಐದನೇ ತಾರೀಖು ತನ್ನ ಗ್ಯಾಂಗ್ ಜೊತೆ ಜೈಲಿನ ಆರನೇ ಬ್ಯಾರಕ್ ಏಳನೇ ಕೊಠಡಿಯಲ್ಲಿ ಭರ್ಜರಿಯಾಗಿ ಕೇಕ್ ಕಟ್ ಮಾಡಿ ಆ್ಯಪಲ್ ಹಾರ ಹಾಕಿಕೊಂಡು ಬರ್ತ್ ಡೇ ಸೆಲೆಬ್ರೆಷನ್ ಮಾಡಿಕೊಂಡಿದ್ದ ವಿಡಿಯೋಗಳು ಹರಿದಾಡಿದ್ದು, ಝೀ ನ್ಯೂಸ್ ನಲ್ಲಿ ಗುಬ್ಬಚ್ಚಿ ರಾಜಾತಿಥ್ಯದ ಬಗ್ಗೆ ಸುದ್ದಿ ಬಿತ್ತರಿಸಲಾಗಿತ್ತು. ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಎಡಿಜಿಪಿ ದಯಾನಂದ್ ಇಬ್ಬರು ಜೈಲು ಅಧಿಕಾರಿಗಳನ್ನು ಅಮಾನತ್ತು ಮಾಡಿ ಐವರ ಮೇಲೆ ಕ್ರಮಕ್ಕೆ ಶಿಪಾರಸ್ಸು ಮಾಡಿದ್ದಾರೆ. ಈ ನಡುವೆ ಜೈಲಿನಲ್ಲಿ ಗುಬ್ಬಚ್ಚಿ ಸೀನನ ಐಷಾರಾಮಿ ಅಡ್ಡೆ ಪೋಟೋಗಳು ವೈರಲ್ ಆಗಿದ್ದು ಜೈಲಿನ ಅಧಿಕಾರಿಗಳ ಮೇಲೆ ತೂಗುಕತ್ತಿ ಶುರುವಾಗಿದೆ.
ಒಟ್ನಲ್ಲಿ ಒಂದು ಕಡೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ಗೆ ಕೋರ್ಟ್ ಆದೇಶ ನೀಡಿದ್ರು ಹೆಚ್ಚುವರಿ ಹಾಸಿಗೆ ದಿಂಬು ನೀಡ್ತಿಲ್ಲ. ಆದ್ರೆ ಗುಬ್ಬಚ್ಚಿ ಸೀನನಿಗೆ ಮಾತ್ರ ಸಕಲ ಸೌಲಭ್ಯದ ಹಿಂದೆ ಲಕ್ಷ ಲಕ್ಷ ಕಂಚಾಣ ಜೈಲು ಅಧಿಕಾರಿಗಳ ಜೇಬು ಸೇರಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿದ್ದು, ಇನ್ನಾದರೂ ತಪ್ಪಿತಸ್ಥ ಜೈಲು ಅಧಿಕಾರಿಗಳ ತಲೆದಂಡವಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ.