ಚಾಮರಾಜನಗರ: ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ಶುಕ್ರವಾರ ತಡರಾತ್ರಿವರೆಗೆ ನಡೆದಿದ್ದು, ಬರೋಬ್ಬರಿ 2 ಕೋಟಿ ರೂ.  ಸಂಗ್ರಹವಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Textbook Revision Row: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಇಂದು ಬೃಹತ್ ಪ್ರತಿಭಟನೆ


ಶುಕ್ರವಾರ ಬೆಳಗ್ಗೆಯಿಂದ ತಡರಾತ್ರಿವರೆಗೂ ಎಣಿಕೆ ಕಾರ್ಯ ನಡೆದಿದ್ದು, ಕೇವಲ 35 ದಿನಗಳಲ್ಲಿ 2,03,25,354 ನಗದು ಸಂಗ್ರಹವಾಗಿದೆ. ಇದರೊಟ್ಟಿಗೆ  ಚಿನ್ನ, ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಭಕ್ತರು ಮಹದೇಶ್ವರನಿಗೆ ಅರ್ಪಿಸಿದ್ದಾರೆ.


ಇದನ್ನೂ ಓದಿ: ರಾತ್ರಿ 10 ರಿಂದ ಬೆಳಿಗ್ಗೆ 6ರವರೆಗೆ ಧಾರ್ಮಿಕ ಸ್ಥಳ, ಪಬ್ & ರೆಸ್ಟೋರೆಂಟ್‌ಗಳಲ್ಲಿ ಧ್ವನಿವರ್ಧಕ ಬ್ಯಾನ್: ಹೈಕೋರ್ಟ್


ದಿನನಿತ್ಯದ ವಿವಿಧ ಸೇವಗಳನ್ನು ಹೊರತುಪಡಿಸಿ ಹುಂಡಿಯಲ್ಲೇ 2 ಕೋಟಿ ರೂ. ಆದಾಯ ಬಂದಿದ್ದು, ಕೊರೊನಾ ಬಳಿಕ ಭಕ್ತಸಾಗರವೇ ಬೆಟ್ಟಕ್ಕೆ ಹರಿದುಬರುತ್ತಿದೆ. ವಾರಾಂತ್ಯ ಹಾಗೂ ಸೋಮವಾರದಂದು ಚಿನ್ನದ ರಥ ಸೇವೆ ಮಾಡಲು ಕಿಕ್ಕೇರಿದು ಜರನು ಸೇರುತ್ತಿದ್ದಾರೆ. ತಿರುಪತಿ ಮಾದರಿಯಲ್ಲೇ ಹೆಚ್ಚಿನ ಸಂಖ್ಯೆಯ ಭಕ್ತರು ವಾರಾಂತ್ಯದಲ್ಲಿ ಬೆಟ್ಟಕ್ಕೆ ಹರಿದುಬರುತ್ತಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.