ಬೆಂಗಳೂರು : ರಾಜ್ಯ ಬಿಜೆಪಿ ಯಲ್ಲಿ ಯತ್ನಾಳ್, ವಿಜಯೇಂದ್ರ, ತಟಸ್ಥ ಬಣ ಆಗಿರುವುದು ಎಲ್ಲರಿಗೂ ತಿಳಿದಿರುವ ವಿಷಯ, ಇದಕ್ಕೆ ಮಾತೃ ಸಂಸ್ಥೆ ಆಗಿರುವ ಆರ್ ಎಸ್ ಎಸ್ ಮಧ್ಯಪ್ರವೇಶ ಮಾಡುವುದಕ್ಕೆ ಹಿಂದೆ ಸರೆದಿದೆ ಎಂಬ ಮಾಹಿತಿ ಜೀ ಕನ್ನಡ ನ್ಯೂಸ್ ಗೆ ಲಭ್ಯವಾಗಿದೆ. ಈಗ ಇದಕ್ಕೆ ಕಾರಣ ಏನು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಮಾರ್ಚ್ 21 ರಿಂದ 23 ವರೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಪ್ರತಿನಿಧಿ ಸಭೆ ಚನ್ನಯ್ಯನಹಳ್ಳಿಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಜೆಪಿಯ ಆರ್ ಎಸ್ ಎಸ್ ಕಾರ್ಯಕರ್ತರು ಸೇರಿದಂತೆ ರಾಜ್ಯ ಬಿಜೆಪಿಯ ಆರ್ ಎಸ್ ಎಸ್ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತಿ ಇರಲಿದೆ. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ನಾಯಕ ಒಬ್ಬರು ಆರ್ ಎಸ್ ಎಸ್ ನ ಪ್ರಮುಖರೊಬ್ಬರಿಗೆ ರಾಜ್ಯ ಬಿಜೆಪಿ ಗೊಂದಲ ನಿವಾರಣೆ ಮಾಡಿ ಎಂದು ಕೇಳಿದಾಗ ಕೆಲ ವಿಷಯಗಳನ್ನ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಜಗಳದಲ್ಲಿ ತಲೆ ಹಾಕದಿರಲು ಆರೆಸೆಸ್ಸ್ ನಿರ್ಧಾರ..! ಆರೆಸೆಸ್ಸ್ ಹೇಳಿದ್ದೇನು?
1. ರಾಷ್ಟ್ರ ಮೊದಲು : ಮಾರ್ಚ್ 21 ರಿಂದ 23 ವರೆಗೆ ಚನ್ನಯ್ಯನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಪ್ರತಿನಿಧಿ ಸಭೆ ಸೇರುವುದರ ಉದ್ದೇಶ ರಾಷ್ಟ್ರ ನಿರ್ಮಾಣ ಆಗಿರುತ್ತದೆ.
2. ಲೋಕಸಭೆ ಚುನಾವಣೆ ಚರ್ಚೆ : ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕೆಲ ಸ್ಥಾನಗಳು ಕಳೆದುಕೊಂಡಿದೆ, ಇದರಿಂದ ಪಕ್ಷಕ್ಕೆ ಬಹುಮತ ಸಿಕ್ಕಿಲ್ಲ. ಇದಕ್ಕೆ ಕಾರಣ ಬೇಕಿದೆ.
3. ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರ ಆಯ್ಕೆ : ಹಾಲಿ ರಾಷ್ಟ್ರೀಯ ಅಧ್ಯಕ್ಷರ ಅವಧಿ ಮುಗಿದಿದೆ. ಈಗ ಮುಂದಿನ ಬಿಜೆಪಿ ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆ ನಡೆಯಬೇಕು.
4. ನಿಮ್ಮ ಪ್ರಯತ್ನ ಎಷ್ಟ್ ಇದೆ? : ಇವೆಲ್ಲಾ ದೊಡ್ಡ ಕಾರಣ, ಆದರೆ ಬಣ ರಾಜಕೀಯ ನಿಲ್ಲಿಸಲು ಪಕ್ಷ ಏನೆಲ್ಲಾ ಪ್ರಯತ್ನ ಮಾಡಿದೆ? ವಿಜಯೇಂದ್ರ, ಯತ್ನಾಳ್ ಅಥವಾ ತಟಸ್ಥರು ಅಂದರೆ ಪಕ್ಷ ಅಲ್ಲಾ. ಮೊದಲು ನೀವು ಪ್ರಯತ್ನ ಮಾಡಿ.
5. ಕೇಂದ್ರ ಬಿಜೆಪಿ ಸರಿ ಮಾಡಲಿ : ಒಂದು ವೇಳೆ ರಾಜ್ಯ ಮಟ್ಟದಲ್ಲಿ ಪರಿಹಾರ ಸಿಕ್ಕಿಲ್ಲ ಅಂದ್ರೆ ಕೇಂದ್ರ ನಾಯಕರ ಮೊರೆ ಹೋಗಿ. ಅವರ ಸಲಹೆ ಪಡೆಯಿರಿ.
ಎಂದು ತಿಳಿಸುವ ಮೂಲಕ ಸದ್ಯಕ್ಕೆ ಸಂಘ ರಾಜಕೀಯ ನಾಯಕರ ಸ್ವಾರ್ಥ ರಾಜಕಾರಣದಲ್ಲಿ ತಲೆ ತೂರಿಸುವುದಿಲ್ಲ ಎಂದು ಹೇಳಿದೆ. ಒಟ್ಟಿನಲ್ಲಿ, ಲರ್ನ್ ಬೈ ಹಾರ್ಡ್ ವೇ ಎನ್ನುವ ಹಾಗೆ ಕಷ್ಟಗಳು ನಿಮಗೆ ಪಾಠ ಕಲಿಸಲಿದೆ ಎಂದು ಸಂಘ ರಾಜ್ಯ ಬಿಜೆಪಿ ನಾಯಕರಿಗೆ ತಿಳಿಸಿದೆ.









