)
ಹಾವೇರಿ: ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಬೀಜೋತ್ಪಾದನೆ ಮಾಡುವ ಮೂಲಕ ರಾಣೇಬೆನ್ನೂರು ತಾಲ್ಲೂಕು ಹೆಸರು ಮಾಡಿತ್ತು. ಜೊತೆಗೆ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಖ್ಯಾತಿ ಪಡೆದಿದೆ. ಈಗ ರಾಣೇಬೆನ್ನೂರು ತಾಲ್ಲೂಕಿನಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದೆ. ರಾಣೇಬೆನ್ನೂರು ನಗರದಲ್ಲಿ ಬೋಟಿಂಗ್, ಕೃಷ್ಣಮೃಗ ಅಭಯಾರಣ್ಯದಲ್ಲಿ ಸಫಾರಿ ಆರಂಭವಾಗಿದೆ. ಇದರಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಲಾಗಿದೆ.
ದೊಡ್ಡಕರೆಯಲ್ಲಿ ಸಚಿವರ ದೋಣಿ ವಿಹಾರ. ಕೃಷ್ಣಮೃಗ ಅಭಯಾರಣ್ಯದಲ್ಲಿ ಕೃಷ್ಣಮೃಗ ನೋಡಲು ಸಪಾರಿ. ನಗರದಲ್ಲಿ ಯುದ್ದದ ಟ್ಯಾಂಕರ್ ಪ್ರತಿಷ್ಠಾಪನೆ. ಹೌದು ಇದು ಹಾವೇರಿ ಜಿಲ್ಲೆ ರಾಣೇಬೆನ್ನೂರಿನಲ್ಲಿ ಕಂಡುಬಂದ ದೃಶ್ಯಗಳಿವು.
ತಾಲ್ಲೂಕು ಕಚೇರಿಯ ಮುಂದೆ ಇಂಡೋ ಪಾಕ್ ಯುದ್ದದಲ್ಲಿ ಭಾಗವಹಿಸಿದ್ದ, T55 ಟ್ಯಾಂಕರ್ ಪ್ರತಿಷ್ಠಾನೆ ಮಾಡಲಾಗಿದೆ. ಭಾರತ ಮತ್ತು ಬಾಂಗ್ಲ ಯುದ್ದ ಮತ್ತು ಇಂಡೋ ಪಾಕ್ ಯುದ್ದದಲ್ಲಿ ಭಾಗವಹಿಸಿದ್ದ ಯುದ್ಧ ಟ್ಯಾಂಕರ್ ಪ್ರತಿಷ್ಟಾಪನೆ ಮಾಡಲಾಗಿದೆ.
ರಾಣೇಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ತಮ್ಮ ಸಂಸ್ಥೆಯ ಪಿಕೆಕೆಯ ಅನುಧಾನ & ಶಾಸಕರ ಅನುಧಾನ ಬಳಸಿ ಯುದ್ಧದ ಟ್ಯಾಂಕರ್ ಪ್ರತಿಷ್ಟಾಪನೆ ಮಾಡಲಾಗಿದೆ. ಅಲ್ಲದೇ ರಾಣೇಬೆನ್ನೂರು ದೊಡ್ಡ ಕೆರೆಯಲ್ಲಿ ದೋಣಿಯ ವಿಹಾರ ಪ್ರಾರಂಭ ಮಾಡಲಾಗಿದೆ.
ಈಗಾಗಲೇ ಎರಡು ದೋಣಿಗಳ ಪ್ರಾರಂಭ ಮಾಡಿದ್ದು, ಶನಿವಾರ & ಭಾನುವಾರ ಬೋಟಿಂಗ್ ಮಾಡಲಾಗಿದೆ. ಜಿಲ್ಲೆಯ ಜನರಿಗೆ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ ಮಾಡಲಾಗಿದೆ. ಈ ಪ್ರವಾಸಿಗರ ತಾಣವಾಗಿ ಮಾರ್ಪಾಡುತ್ತಿದೆ.
ರಾಣೇಬೆನ್ನೂರು ಏಷ್ಯಾದ ಖಂಡದಲ್ಲಿಯೇ ಬೀಜೋತ್ಪಾದನೆ ಹೆಸರು ಮಾಡಿತ್ತು. ಈಗ ಪ್ರವಾಸಿ ತಾಣಗಳು ಇದ್ದರು ಅಭಿವೃದ್ಧಿ ಆಗಿರಲಿಲ್ಲ. ಈ ಕೃಷ್ಣಮೃಗ ಅಭಯಾರಣ್ಯದಲ್ಲಿ ಸಪಾರಿ ಪ್ರಾರಂಭ ಮಾಡಲಾಗಿದೆ. 30 ಸಾವಿರ ಎಕರೆ ಪ್ರದೇಶದಲ್ಲಿರೋ ಅರಣ್ಯ ಪ್ರದೇಶದಲ್ಲಿ ಕೃಷ್ಣಮೃಗ ನೋಡಲು ಸಪಾರಿ ಮಾಡಲಾಗಿದೆ.
ಜಿಂಕೆ ,ಕೃಷ್ಣಮೃಗ, ವಿವಿಧ ಜಾತಿಯ ಪಕ್ಷಿಗಳು ನೋಡಬಹುದು. ಬೆಳಗ್ಗೆ ಮತ್ತು ಸಂಜೆ ಸಪಾರಿ ವ್ಯವಸ್ಥೆ ಮಾಡಲಾಗಿದ್ದು, ಸಪಾರಿ ಸುಂದರವಾದ ಅರಣ್ಯ ಪ್ರದೇಶ ಹಾಗೂ ಜಿಂಕೆ ಹಾಗೂ ಕೃಷ್ಣಮೃಗಗಳನ್ನ ನೋಡಿ ಜನರು ಎಂಜಾಯ್ ಮಾಡುತ್ತಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.