ಹುಟ್ಟುಹಬ್ಬದ ನೆಪದಲ್ಲಿ ಜಯಚಂದ್ರಗೆ ಸಡ್ಡು ಹೊಡೆದ ಸಾಸಲು ಸತೀಶ್

Last Updated : Sep 15, 2022, 03:42 PM IST
  • ಕಳೆದ 6 ತಿಂಗಳಿನಿಂದ ಹೆಚ್ಚು ಶಿರಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಸತೀಶ್ ಹೆದ್ದಾರಿ ಪಕ್ಕದಲ್ಲಿ ಶಾಶ್ವತ ಕಚೇರಿ ನಿರ್ಮಿಸುತ್ತಿದ್ದಾರೆ.
  • ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತುತ್ತಿದ್ದು, ಶಿರಾ ಕ್ಷೇತ್ರದ ಅಹಿಂದ ವರ್ಗಗಳಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.
ಹುಟ್ಟುಹಬ್ಬದ ನೆಪದಲ್ಲಿ ಜಯಚಂದ್ರಗೆ ಸಡ್ಡು ಹೊಡೆದ ಸಾಸಲು ಸತೀಶ್ title=
screengrab

ರಾಜ್ಯ ವಿಧಾನಸಭಾ ಚುನಾವಣೆ ಕೆಲವೇ ತಿಂಗಳುಗಳು ಬಾಕಿ ಇರುವಂತೆಯೇ ತುಮಕೂರು ಚುನಾವಣಾ ಅಖಾಡ ರಂಗೇರುತ್ತಿದೆ. ತುಮಕೂರು ಜಿಲ್ಲೆಯಲ್ಲಿ ಪ್ರಶ್ನಾತೀತ ನಾಯಕರು ಎಂದು ಭಾವಿಸಿಕೊಂಡವರಿಗೆ ಯುವಕರು ಸಡ್ಡು ಹೊಡೆಯುತ್ತಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಜಯಚಂದ್ರ ಅವರ ಪರಿಸ್ಥಿತಿ ಇದಕ್ಕೆ ಸ್ಪಷ್ಟ ಉದಾಹರಣೆ. ಮಾಜಿ ಸಚಿವ ಟಿ.ಬಿ ಜಯಚಂದ್ರ ಅವರು ನಿರಂತರವಾಗಿ ಸ್ಪರ್ಧಿಸುತ್ತಿರುವ ಶಿರಾ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿ ಎಂಟ್ರಿಯಾಗಿದೆ. ಚುನಾವಣೆಯಲ್ಲಿ ನಿರ್ಣಾಯಕ ವಹಿಸುವ ಕಾಡುಗೊಲ್ಲ ಸಮುದಾಯದ ಡಾ. ಸಾಸಲು ಸತೀಶ್ ರಂಗಪ್ರವೇಶದಿಂದ ಜಯಚಂದ್ರ ವಿಚಲಿತರಾಗಿದ್ದಾರೆ.

ಕಳೆದ ಮಂಗಳವಾರ ಶಿರಾ ನಗರದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಸಾಸಲು ಸತೀಶ್  ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆಟೋ ಚಾಲಕರು, ದಿನಗೂಲಿ ಕಾರ್ಮಿಕರು,  ಸಫಾಯಿ ಕರ್ಮಚಾರಿಗಳನ್ನು ಗುರುತಿಸಿ ಸುಮಾರು ಎರಡು ಸಾವಿರ ಜನರನ್ನು ಸನ್ಮಾನಿಸಿದ್ದಾರೆ.ಶಿರಾ ಕ್ಷೇತ್ರದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದ್ದಾರೆ. ಅಹಿಂದ ಮಂತ್ರ ಜಪಿಸುತ್ತಿರುವ ಸಾಸಲು ಸತೀಶ್ ಈ ಬಾರಿ ನನಗೆ ಟಿಕೆಟ್ ಖಾತ್ರಿಯಾಗಿದೆ ಎನ್ನುತ್ತಿದ್ದಾರೆ.

ಇದನ್ನೂ ಓದಿ : ನಾಯಿಗಾಗಿ ಆರಂಭವಾದ ಗಲಾಟೆ ತಾಯಿ ಮಗಳ ಆತ್ಮಹತ್ಯೆಯಲ್ಲಿ ಅಂತ್ಯ

ಕಳೆದ 6 ತಿಂಗಳಿನಿಂದ ಹೆಚ್ಚು ಶಿರಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಸತೀಶ್ ಹೆದ್ದಾರಿ ಪಕ್ಕದಲ್ಲಿ ಶಾಶ್ವತ ಕಚೇರಿ ನಿರ್ಮಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತುತ್ತಿದ್ದು, ಶಿರಾ ಕ್ಷೇತ್ರದ ಅಹಿಂದ ವರ್ಗಗಳಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. 

ಶಿರಾ ಪಕ್ಕದ ಕ್ಷೇತ್ರ ಚಿಕ್ಕನಾಯಕನಹಳ್ಳಿಯಲ್ಲಿ ಹೆಚ್ಚು ಸಕ್ರಿಯರಾಗಿ ಕಾಂಗ್ರೆಸ್ ಪಕ್ಷಕ್ಕೆ ಬಲ ತುಂಬಿದ್ದ ಸತೀಶ್ ಅವ್ರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಲಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲಿ ಜಯಚಂದ್ರ ಅವರು ಸ್ಪರ್ಧೆ ಮಾಡಿದ್ರೆ, ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಪುತ್ರ ಸಂತೋಷ್ ಗೆ ಟಿಕೆಟ್ ಕೊಡಿಸಿದ್ದರು. ಎರಡು ಕ್ಷೇತ್ರದಲ್ಲಿ ತಂದೆ, ಮಗ ಸೋಲು ಅನುಭವಿಸಿದ್ದರು. ತನಗೆ ಟಿಕೆಟ್ ತಪ್ಪಿದ ಅಸಮಧಾನದಲ್ಲಿದ್ದ ಡಾ. ಸಾಸಲು ಸತೀಶ್ ಅವ್ರು ಶಿರಾದಲ್ಲಿ ಟಿಕೆಟ್ ಗಾಗಿ ಜಯಚಂದ್ರ ವಿರುದ್ಧ ತೊಡೆ ತಟ್ಟಿದ್ದಾರೆ. ಕಾಂಗ್ರೆಸ್ ಟಿಕೆಟ್ ನನಗೆ ಸಿಗುವುದು ಪಕ್ಕಾ ಎಂದು ಕ್ಷೇತ್ರದಲ್ಲಿ ಸಂಘಟನೆ ಶುರುಮಾಡಿದ್ದಾರೆ.

ಸಾಸಲು ಸತೀಶ್ ಅವರು ಶಿರಾ ಕ್ಷೇತ್ರದಲ್ಲಿ ಹೆಚ್ಚು ಆಕ್ಟೀವ್ ಆಗುತ್ತಿದ್ದ ಹಾಗೆ ಜಯಚಂದ್ರ ಅವರು ತನ್ನ ಮುಂದಿನ ದಾರಿ ಯಾವುದು..? ಅನ್ನುವ ಬಗ್ಗೆ ಯೋಜನೆಯಲ್ಲಿ ಇದ್ದಾರೆ. ಜೆಡಿಎಸ್ ಕಡೆ ಒಂದು ಕಾಲು ಇಟ್ಟಿರುವ ಜಯಚಂದ್ರ ಅವರು ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗುವ ಬಗ್ಗೆಯೂ ಯೋಚಿಸುತ್ತಿದ್ದಾರೆ. ಜೆಡಿಎಸ್ ಸೇರಿದರೆ ಜಯಚಂದ್ರ ಅವರಿಗೆ ಸ್ವಾಗತ ಎನ್ನುತಿದ್ದಾರೆ ಜೆಡಿಎಸ್ ನಾಯಕರು.‌ 

ಇದನ್ನೂ ಓದಿ : Namma Metro : ಪ್ರಯಾಣಿಕರ ಗಮನಕ್ಕೆ : ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ತುಮಕೂರು ಹಾಗೂ ಚಿತ್ರದುರ್ಗ ಎರಡು ಜಿಲ್ಲೆಗಳಲ್ಲಿ ಕಾಡುಗೊಲ್ಲ ಸಮುದಾಯ ನಿರ್ಣಾಯಕ. ಕಳೆದ ಬಾರಿ ಸಾಸಲು ಸತೀಶ್ ಅವರಿಗೆ ಟಿಕೆಟ್ ತಪ್ಪಿಸಿ ಕಾಂಗ್ರೆಸ್ ತುಮಕೂರು ಹಾಗೂ ಚಿತ್ರದುರ್ಗದಲ್ಲಿ ಹೀನಾಯ ಪ್ರದರ್ಶನ ನೀಡಿತ್ತು. ಕಳೆದ ಶಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಕಾಡುಗೊಲ್ಲ ಸಮುದಾಯ ಬಿಜೆಪಿ ಬೆಂಬಲಿಸಿತ್ತು. ಕ್ಷೇತ್ರದಲ್ಲಿ ಈ ಬಾರಿ ಕಾಡುಗೊಲ್ಲ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎನ್ನುವುದು ಹೈಕಮಾಂಡ್ ಸೂಚನೆ ನೀಡಿದೆ.ಶಿರಾ ಕ್ಷೇತ್ರದಲ್ಲಿ ಡಾ. ಸಾಸಲು ಸತೀಶ್ ಅವರಿಗೆ ಟಿಕೆಟ್ ನೀಡುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಒಲವು ತೋರಿದ್ದಾರೆ‌. ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಪರೋಕ್ಷವಾಗಿ ಸತೀಶ್ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News