Satish Jarkiholi: ಬೆಳಗಾವಿ ಬೈಎಲೆಕ್ಷನ್ ಗೆಲ್ಲಲು ಕೈ ರಣತಂತ್ರ; ಜೆಡಿಎಸ್, ಬಿಜೆಪಿ ನಾಯಕರಿಗೆ ಸತೀಶ್ ಗಾಳ!
ಅಶೋಕ್ ಪೂಜಾರಿ ಸೇರಿ ಹಲವು ಮುಖಂಡರಿಗೆ ಆಹ್ವಾನ ನೀಡಿದ್ದೇವೆ. ಸಮಯಾವಕಾಶ ಕೇಳಿದ್ದಾರೆ. ಅವರ ತೀರ್ಮಾನದ ಬಳಿಕ ಮುಂದಿನ ಹೆಜ್ಜೆ ಇಡಲಿದ್ದೇವೆ ಎಂದು ಹೇಳಿದರು.
ಬೆಳಗಾವಿ: ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಬಿಟ್ಟು ಹೋದ ಮಾಜಿ ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು, ಹಿರಿಯ ನಾಯಕರನ್ನು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ಮಾಡಲಾಗುತ್ತಿದೆ. ಕಾಂಗ್ರೆಸ್‌ಗೆ ಆಹ್ವಾನ ಮಾಡುವುದು ಪಕ್ಷ ಕಟ್ಟುವ ಒಂದು ಭಾಗವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದ ಕಾಂಗ್ರೆಸ್(Congress) ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಹಿರಿಯ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಲಾಗುತ್ತಿದ್ದು, ಗೋಕಾಕನಿಂದಲೇ ಈ ಕೆಲಸ ಆರಂಭಿಸಲಾಗಿದೆ. ಅಶೋಕ್ ಪೂಜಾರಿ ಸೇರಿ ಹಲವು ಮುಖಂಡರಿಗೆ ಆಹ್ವಾನ ನೀಡಿದ್ದೇವೆ. ಸಮಯಾವಕಾಶ ಕೇಳಿದ್ದಾರೆ. ಅವರ ತೀರ್ಮಾನದ ಬಳಿಕ ಮುಂದಿನ ಹೆಜ್ಜೆ ಇಡಲಿದ್ದೇವೆ ಎಂದು ಹೇಳಿದರು.
Siddaramaiah: 'ಅಯೋಧ್ಯೆಯ ಶ್ರೀರಾಮ ಮಂದಿರ ಕಟ್ಟೋದಕ್ಕೆ ದೇಣಿಗೆ ಕೊಡಲ್ಲ'
ಈಗಾಗಲೇ ರಾಜ್ಯದಲ್ಲಿ ಕೆಪಿಸಿಸಿ(KPCC) ಅಧ್ಯಕ್ಷರು ಸಮಿತಿ ರಚನೆ ಮಾಡಿದ್ದಾರೆ. ಆ ತಂಡ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಸೇರಲು ಇಚ್ಛೆ ಉಳ್ಳವರು, ಹಾಗೂ ಹಲವು ಕಾರಣಗಳಿಂದ ಪಕ್ಷ ಬಿಟ್ಟು ಹೋದ ನಾಯಕರನ್ನು ಮತ್ತೆ ಪಕ್ಷಕ್ಕೆ ಆಹ್ವಾನಿಸಲಾಗುತ್ತಿದೆ. ನಾವು ಸಹ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಆಹ್ವಾನ ನೀಡುತ್ತೇವೆ ಎಂದು ಹೇಳಿದರು.
BJP: ಸಿಎಂ ಯಡಿಯೂರಪ್ಪ ಸಾರಥ್ಯದಲ್ಲಿಯೇ 2023ರ ಚುನಾವಣೆ..!
ಗೋಕಾಕದಲ್ಲಿ ಹಿರಿಯ ನಾಯಕ, ಜೆಡಿಎಸ್(JDS) ಮುಖಂಡ ಅಶೋಕ ಪೂಜಾರಿ ಅವರ ಮನೆಗೆ ದಿಢೀರ್ ಭೇಟಿ ನೀಡಿ, ಕಾಂಗ್ರೆಸ್ ಪಕ್ಷ ಸೇರಲು ಸತೀಶ್ ಜಾರಕಿಹೊಳಿ ಆಹ್ವಾನಿಸಿದರು. ಅವರೊಂದಿಗೆ ಮಹಾಂತೇಶ ತಾವಂಶಿ, ರಾಜು ಮುನ್ನೋಳಿ, ಶಂಕರ ಗಿಡ್ಡನವರ್ ಅವರಿಗೂ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.
HD Kumaraswamy: 'ಶ್ರೀರಾಮನ ಮೇಲೆ ನಂಬಿಕೆ ಇದ್ರೆ ಕುಮಾರಸ್ವಾಮಿ ರಾಮಮಂದಿರ ದೇಣಿಗೆ ನೀಡಲಿ'
ಅಶೋಕ ಪೂಜಾರಿ ಅವರು, ಈ ಹಿಂದೆ ಬಿಜೆಪಿಯಲ್ಲಿ ಇದ್ದರು. ಗೋಕಾಕ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ(BJP) ಟಿಕೆಟ್ ಸಿಗದ ಹಿನ್ನೆಲೆ ಅಸಮಾಧಾನಗೊಂಡು ಜೆಡಿಎಸ್ ಸೇರಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಬೆಳಗಾವಿ ಲೋಕಸಭಾ ಉಪಚುನಾವಣೆ ದಿನಾಂಕ ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ. ಯಾವುದೇ ಕ್ಷಣದಲ್ಲಾದರೂ ಚುನಾವಣಾ ದಿನಾಂಕ ಘೋಷಣೆ ಆಗಲಿದೆ. ಈ ನಡುವೆ ಕಾಂಗ್ರೆಸ್ ಸಂಘಟನೆಗೆ ಒತ್ತು ನೀಡಿರುವುದು ಕುತೂಹಲ ಮೂಡಿಸಿದೆ.
ಫೆ.22ರಿಂದ ಎಲ್ಲಾ ತರಗತಿಗಳನ್ನು ತೆರೆಯಲು ಸರ್ಕಾರದ ನಿರ್ಧಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.