ಬೆಂಗಳೂರು : ಬಿಹಾರ ಚುನಾವಣೆ ಮುಗಿದ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿ ದೆಹಲಿಗೆ ಭೇಟಿ ನೀಡಿದ್ದಾರೆ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ತಮ್ಮ ಕೈಚಳಕ ತೋರ್ತಿದ್ದಾರೆ. ನವೆಂಬರ್ ನಲ್ಲಿ ಕ್ರಾಂತಿಯಾಗಲಿದೆ. ಡಿಕೆಶಿ ಸಿಎಂ ಆಗ್ತಾರೆ ಅನ್ನೋ ಚರ್ಚೆ ಜೋರಾಗ್ತಿರುವ ಸಂದರ್ಭದಲ್ಲೇ ಸಾವ್ಕಾರ್ ವರಿಷ್ಠರ ಭೇಟಿ ಮಹತ್ವ ಪಡೆದುಕೊಂಡಿದೆ.
ಹೇಗಾದ್ರೂ ಮಾಡಿ ಡಿಕೆಶಿಗೆ ಸಿಎಂ ಕುರ್ಚಿ ತಪ್ಪಿಸಬೇಕೆಂದು ಪದೇ ಪದೇ ದಲಿತ ಸಚಿವರು ಸಭೆ ನಡೆಸ್ತಿದ್ರು. ಇದಕ್ಕೆ ಯಾವಾಗ ಹೈಕಮಾಂಡ್ ಮೂಲಕ ಮೂಗುದಾರ ಹಾಕಿದ್ರೋ ಆಗಲೇ ನಕಶಿಖಾಂತ ಉರಿದು ಹೋಗಿದ್ರು. ಇದೀಗ ಹೈಕಮಾಂಡ್ ಮೂಲಕವೇ ಡಿಕೆಶಿ ಆಸೆಗೆ ತಣ್ಣೀರು ಹಾಕೋಕೆ ಮುಂದಾಗಿದ್ದಾರೆ. ರಾತ್ರಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರನ್ನ ಭೇಟಿ ಮಾಡಿದ್ದಾರೆ. ಇಬ್ಬರ ಜೊತೆಗೂ ರಾಜ್ಯ ರಾಜಕಾರಣದ ಬಗ್ಗೆ ಗಂಭೀರ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ:ಮಾಲೂರು ಜನತೆಗೆ ಧನ್ಯವಾದಗಳು: ಹಾಲಿ ಕಾಂಗ್ರೆಸ್ ಶಾಸಕ ನಂಜೇಗೌಡ
ಇನ್ನು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರನ್ನ ಭೇಟಿ ಮಾಡಿರುವ ಸತೀಶ್ ಜಾರಕಿಹೊಳಿ ಹಲವು ವಿಚಾರಗಳನ್ನ ಪ್ರಸ್ತಾಪ ಮಾಡಿದ್ದಾರೆ. ರಾಜ್ಯದಲ್ಲಿ ಸಿಎಂ ಕುರ್ಚಿ ಬದಲಾವಣೆ ಚರ್ಚೆ ಜೋರಾಗಿದ್ದು, ಪಕ್ಷ ಹಾಗೂ ಸರ್ಕಾರದ ಮೇಲೆ ಗಂಭೀರ ಪರಿಣಾಮ ಬೀರ್ತಿದೆ. ಮೊದಲು ಇದಕ್ಕೆ ನೀವು ಕಡಿವಾಣ ಹಾಕಬೇಕು. ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡಿದ್ರೆ ಸರ್ಕಾರಕ್ಕೆ ಸಂಕಷ್ಟ ಅನ್ನೋ ವಿಚಾರವನ್ನ ಮುಂದಿಟ್ಟಿದ್ದಾರಂತೆ.
ಸಿದ್ದರಾಮಯ್ಯ ಜನನಾಯಕ,ಅವರಿದ್ದರೆ ಮುಂದಿನ ಚುನಾವಣೆಯೂ ನಮಗೆ ಸೇಫ್ ಆಗಲಿದೆ. ಅವರಿಲ್ಲದೆ ಕಾಂಗ್ರೆಸ್ ಸದ್ಯದ ಪರಿಸ್ಥಿತಿಯಲ್ಲಿ ಊಹಿಸಿಕೊಳ್ಳೋದು ಕಷ್ಟವಾಗಲಿದೆ. ಡಿಕೆಶಿ ಪಕ್ಷ ಸಂಘಟನೆ ಇದೆ ನಿಜ. ಆದ್ರೆ ಅವರು ಜನರನ್ನ ಮತಗಳಾಗಿ ಪರಿವರ್ತನೆ ಮಾಡೋದು ಕಷ್ಟ. ರಾಜ್ಯದ ಹಳೆ ಮೈಸೂರು ಭಾಗದಲ್ಲಿ ರುವ ಒಕ್ಕಲಿಗ ಸಮುದಾಯ ಇನ್ನೂ ದೇವೇಗೌಡರ ಮರ್ಜಿಯಲ್ಲೇ ಇದ್ದಾರೆ. ಜೆಡಿಎಸ್ ನಿಂದ ಸಮುದಾಯ ಇನ್ನೂ ಹೊರಬಂದಿಲ್ಲ. ಅವರ ಸಮುದಾಯವನ್ನೂ ಸೆಳೆಯೋಕೆ ಅವರಿಗೆ ಆಗ್ತಿಲ್ಲ.
ಇದನ್ನೂ ಓದಿ:ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸಿದ ಆಕ್ಷನ್ ಪ್ರಿನ್ಸ್ ಫ್ಯಾನ್ಸ್
ಇನ್ನು ಉಳಿದ ಸಮುದಾಯಗಳನ್ನ ಹೇಗೆ ಸೆಳೆಯೋಕೆ ಸಾಧ್ಯ ಅನ್ನೋ ವಿಚಾರವನ್ನ ಮುಂದಿಟ್ಡಿದ್ದಾರಂತೆ. ರಾಜ್ಯ ರಾಜಕಾರಣಲ್ಲಿ ನಾವು ೪೦ ವರ್ಷಗಳಿಂದ ನೋಡ್ತಿದ್ದೇವೆ. ದೇವೇಗೌಡ, ಸಿದ್ದರಾಮಯ್ಯ, ಯಡಿಯೂರಪ್ಪನಂತರ ವರ್ಚಸ್ವೀ ನಾಯಕರು ಇಲ್ಲ. ಅವರಂತೆ ಜನರನ್ನ ಸೆಳೆಯುವ ಶಕ್ತಿಯೂ ಈಗಿನಿವರಲ್ಲಿ ಕಾಣ್ತಿಲ್ಲ. ಹಾಗಾಗಿ ಸಿಎಂ ಕುರ್ಚಿ ಬದಲಾವಣೆ ವಿಚಾರವನ್ನ ಸೈಡಿಗಿದೆ. ಕ್ಯಾಬಿನೆಟ್ ರಿಷಪಲ್ ಬೇಕಾದರೆ ಮಾಡಿ ಹೊಸಬರಿಗೆ ಅವಕಾಶ ಮಾಡಿ ಕೊಡಿ, ನಾವು ನಮ್ಮ ಸ್ಥಾನವನ್ನ ತ್ಯಾಗ ಮಾಡ್ತೇವೆ ಎಂದಿದ್ದಾರಂತೆ.
ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕನಸನ್ನು ಎಐಸಿಸಿ ಪ್ರಧಾನ ಕಾರ್ಯ ದರ್ಶಿ ಮುಂದೆ ಪ್ರಸ್ತಾಪಿಸಿದ್ದಾರೆ ಎನ್ನಲಾಗ್ತಿದೆ. ಪಕ್ಷವನ್ನು ಅಧಿಕಾರಕ್ಕೆ ಮತ್ತೆ ಅಧಿಕಾರಕ್ಕೆ ತರ್ತೇನೆ. ತಮ್ಮದೇ ಟ್ರಸ್ಟ್ ಮೂಲಕ ಇಡೀ ರಾಜ್ಯಾದ್ಯಂತ ಪ್ರಗತಿಪರ ಮನಸ್ಸುಗಳನ್ನ ಒಂದು ಗೂಡಿಸುವ ಪ್ರಯತ್ನ ಮಾಡ್ತಿದ್ದೇವೆ. ಅದಕ್ಕೆ ಬೇಕಾದ ತರಬೇತಿಯನ್ನೂ ನೀಡ್ತಿದ್ದೇವೆ. ಇದನ್ನ ರಾಜ್ಯವ್ಯಾಪಿ ಹೆಚ್ಚು ಮಾಡಿದರೆ ಆರ್ ಎಸ್ ಎಸ್ ಗಿಂತ ಗಟ್ಟಿ ಮುಟ್ಟಾದ ಸಂಘಟನೆಯಾಗಲಿದೆ. ರಾಜ್ಯದ ದಲಿತ, ಹಿಂದುಳಿ, ಅಲ್ಪ ಸಂಖ್ಯಾತ ಮತಬ್ಯಾಂಕ್ ಕ್ರೋಡೀಕರಣಕ್ಕೆ ಈಸಿಯಾಗಲಿದೆ. ಸಚಿವ ಸ್ಥಾನದ ಜೊತೆ ಕೆಪಿಸಿಸಿ ಸಾರಥ್ಯ ನೀಡಿದ್ರೆ ಸಮರ್ಥವಾಗಿ ಮುನ್ನಡೆಸುತ್ತೇನೆಂದು ಪ್ರಸ್ತಾಪ ಇಟ್ಟಿದ್ದಾರಂತೆ.
ಇದನ್ನೂ ಓದಿ:ಬಿಹಾರದ ಚುನಾವಣೋತ್ತರ ಸಮೀಕ್ಷೆ ಬಹಿರಂಗ: ಬಿಹಾರದಲ್ಲಿ NDAಗೆ ಸ್ಪಷ್ಟ ಬಹುಮತ
ಒಟ್ನಲ್ಲಿ ನವೆಂಬರ್ ಕ್ರಾಂತಿಯ ಮುನ್ಸೂಚನೆ ಶುರುವಾಗಿದೆ. ಒಂದೆಡೆ ಸಿಎಂ ಬದಲಾವಣೆ, ಇನ್ನೊಂದೆಡೆ ಸಂಪುಟ ಪುನಾರಚನೆ ಚರ್ಚೆ ಜೋರಾಗಿ ನಡೆದಿವೆ. ಬಿಹಾರ ಚುನಾವಣೆ ಕೂಡ ಮುಗಿದಿದ್ದು ಬೆಳಗಾವಿ ಸಾವ್ಕಾರ್ ಸತೀಶ್ ಜಾರಕಿಹೊಳಿ ದೆಹಲಿಯಲ್ಲಿ ರಾಜಕೀಯ ಚಟುವಟಿಕೆ ನಡೆಸ್ತಿದ್ದಾರೆ. ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷರ ನಿವಾಸಕ್ಕೆ ಸಚಿವರು, ಶಾಸಕರ ಪರೇಡ್ ನಡೆಸ್ತಿದ್ದಾರೆ. ಮಾಸಾಂತ್ಯಕ್ಕೆ ರಾಜ್ಯ ರಾಜಕೀಯದಲ್ಲಿ ಭಾರಿ ಬೆಳವಣಿಗೆಗಳು ನಡೆಯೋ ಸಾಧ್ಯತೆ ಕೇಳಿ ಬರ್ತಿದೆ.









