)
Dharmasthala case update: ಧರ್ಮಸ್ಥಳ ಪ್ರಕರಣಕ್ಕೆ ತಿರುವುಗಳ ಮೇಲೆ ತಿರುವುಗಳು ಸಿಗುತ್ತಿದೆ. ದೂರು ದಾಖಲಿಸಿದ ಅನಾಮಿಕ ವ್ಯಕ್ತಿ 13 ಸ್ಥಳಗಳನ್ನು ಗುರುತಿಸಿದ್ದು, ಅದರಲ್ಲಿ ಕಳೆದ ದಿನದವರೆಗೆ 1, 2, 3, 4 ಮತ್ತು 5 ನೇ ಸ್ಥಳಗಳಲ್ಲಿ ಶೋಧ ನಡೆಸಲಾಗಿತ್ತು. ಆದರೆ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. ಆದರೆ ಇಂದು 6 ನೇ ಸ್ಥಳದಲ್ಲಿ ಮಾನವ ಮೂಳೆ ಪತ್ತೆಯಾಗಿದ್ದು, ಅದನ್ನು ಈಗ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಈ ಮಧ್ಯೆ, ಸ್ಥಳದಲ್ಲಿ ಶೋಧ ನಡೆಸುವಾಗ ಎಟಿಎಂ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಂಡ ಎಸ್ಐಟಿ ತಂಡಕ್ಕೆ ಅದು ಯಾರದ್ದು ಎಂದು ತಿಳಿದುಬಂದಿದೆ. ಈಗ, ಎಟಿಎಂ ಕಾರ್ಡ್ಗಾಗಿ ಹುಡುಕಾಟ ನಡೆಸಿದ ಎಸ್ಐಟಿ ತಂಡಕ್ಕೆ ಸ್ಫೋಟಕ ಮಾಹಿತಿ ಸಿಕ್ಕಿದೆ.
ಅನಾಮಿಕ ವ್ಯಕ್ತಿ ಗುರುತಿಸಿದ ಮೊದಲ ಸ್ಥಳದಲ್ಲಿ, ಪ್ಯಾನ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಪತ್ತೆಯಾಗಿತ್ತು. ಪಾನ್ ಕಾರ್ಡ್ ವಶಪಡಿಸಿಕೊಂಡ ಎಸ್ಐಟಿ ತಂಡವು ಅದು ಯಾರದ್ದು ಎಂದು ಕಂಡುಹಿಡಿದಿದೆ. ಈ ಪ್ಯಾನ್ ಕಾರ್ಡ್ ಹೊಂದಿದ್ದ ವ್ಯಕ್ತಿ 2025ರ ಮಾರ್ಚ್ ತಿಂಗಳಲ್ಲಿ ಕಾಮಾಲೆಯಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇಲಾಖೆ ಸಿಬ್ಬಂದಿ ಮೃತರ ತಂದೆಯನ್ನು ಸಂಪರ್ಕಿಸಿದ್ದು, ಈ ಸಮಯದಲ್ಲಿ ಆ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅದರೊಂದಿಗೆ ಒಂದು ಡೆಬಿಟ್ ಕಾರ್ಡ್ ಕೂಡ ಪತ್ತೆಯಾಗಿದೆ. ಇಂದು, ಅದರ ವಿಚಾರವಾಗಿ ತನಿಖೆ ನಡೆಸಿದ ಎಸ್ಐಟಿ ತಂಡ, ಆ ಕಾರ್ಡ್ ಯಾರಿಗೆ ಸೇರಿದೆ ಎಂದು ಕಂಡುಹಿಡಿದಿದೆ. ಈ ಡೆಬಿಟ್ ಕಾರ್ಡ್ ಮಾಲೀಕರು ಒಬ್ಬ ಮಹಿಳೆ. ಅವರು ಇನ್ನೂ ಜೀವಂತವಾಗಿದ್ದಾರೆ ಎಂದು ಹೇಳಲಾಗಿದೆ. ಪಾಯಿಂಟ್ ನಂಬರ್ ಒನ್ನಲ್ಲಿ ಕಂಡುಬಂದ ಡೆಬಿಟ್ ಮತ್ತು ಪ್ಯಾನ್ ಕಾರ್ಡ್ಗಳು ಎರಡೂ ಒಂದೇ ಕುಟುಂಬಕ್ಕೆ ಸೇರಿದವರದ್ದಾಗಿದೆ ಎಂದು ತಿಳಿದುಬಂದಿದೆ.