)
Shivamogga Crime News: ಅವರಿಬ್ಬರು ಸಂಬಂಧದಲ್ಲಿ ಅಣ್ಣ ತಮ್ಮ. ಯಾವಾಗಲೂ ಜೊತೆಗಿರುವ ಜನ್ಮದ ಜೋಡಿ. ಸಹೋದರರ ನಡುವಿನ ಸ್ನೇಹ ಸಂಬಂಧಕ್ಕೆ ದ್ವೇಷದ ಎರಕ ಒಯ್ದಿದ್ದು ಮಾತ್ರ ಅದೊಂದು ಘಟನೆ. ಪದೇ ಪದೇ ಅಂಗ ವೈಫಲ್ಯತೆಯನ್ನ ಕಿಂಡಲ್ ಮಾಡುತ್ತಿದ್ದ ತಮ್ಮನೇ ಅಣ್ಣನಿಗೆ ಮಹೂರ್ತ ಇಟ್ಡು, ನೆತ್ತರು ಹರಿಸಿದ್ದಾನೆ.
ಏನಿದು ಘಟನೆ?
ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಂದು ಕೊ*ಲೆ ಘಟನೆ ವರದಿಯಾಗಿದೆ. ನಿನ್ನೆದಿನ ಯುವಕನೊಬ್ಬನಿಗೆ ಚಾಕುವಿನಿಂದ ಇರಿಯಲಾಗಿದ್ದು, ಆತ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಎಫ್ಐಆರ್ ದಾಖಲಾಗಿದ್ದು ಆರೋಪಿ ಸಹ ಪೊಲೀಸ್ ವಶದಲ್ಲಿದ್ದಾನೆ.
ನಡೆದಿದ್ದೇನು?
ಶಿವಮೊಗ್ಗ ನಗರದ ಎಪಿಎಂಸಿ ಬಳಿಯ ಲೇಔಟ್ ಒಂದರಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಜನಾರ್ದನ ನಾಯ್ಕ್ ಎಂಬಾತ ಸಾವನ್ನಪ್ಪಿದ್ದಾನೆ. ಈತನ ದೊಡ್ಡಪ್ಪನ ಮಗ ಹನುಮಂತ ನಾಯ್ಕ್ನೇ ಕೊ*ಲೆ ಆರೋಪಿಯಾಗಿದ್ದಾನೆ. ಇವರಿಬ್ಬರ ನಡುವೆ ನಡೆದ ಜಗಳದಲ್ಲಿ ಹನುಮಂತ ಜಗದೀಶನನ್ನ ಚಾಕುವಿನಿಂದ ಇರಿದು ಕೊ*ಲೆ ಮಾಡಿದ್ದಾನೆ.
ಜಗದೀಶ ಹಾಗೂ ಹನುಮಂತ ಚಿಕ್ಕಪ್ಪ, ದೊಡ್ಡಪ್ಪನ ಮಕ್ಕಳು, ಇವರಿಬ್ಬರ ನಡುವೆ ಈ ಹಿಂದೆ ಒಂದು ತಗಾದೆಯಾಗಿತ್ತು. ಅಪಘಾತ ಘಟನೆಯಲ್ಲಿ ಹನುಮಂತನಿಗೆ ಫ್ರ್ಯಾಕ್ಚರ್ ಆಗಿತ್ತು. ಅದರ ಆಸ್ಪತ್ರೆಯ ಖರ್ಚು ಜಗದೀಶ್ ನೀಡಿಲ್ಲ ಎಂಬುದು ಆರೋಪ.
ಮೇಲಾಗಿ ಅಪಘಾತದಲ್ಲಾದ ಊನದ ಬಗ್ಗೆ ಹನುಮಂತನನ್ನು ಜಗದೀಶ್ ಆಡಿಕೊಳ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಜಗಳವಾಗಿ ಹನುಮಂತ ಜಗದೀಶನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಇನ್ನಷ್ಟು ವಿಚಾರ, ತನಿಖೆಯಿಂದ ಬೆಳಕಿಗೆ ಬರಬೇಕಿದೆ ವಿನೋಬನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.