ಹಿಂದಿ ಬಳಕೆಗೆ ವಿರೋಧ ಬೇಡ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಪ್ರತಿಯೊಬ್ಬರಿಗೂ ನಮ್ಮ ಭಾಷೆ, ನಮ್ಮ ದೇಶ ಎಂಬ ಸ್ವಾಭಿಮಾನವಿರಲಿ ಬರುವ 21ನೇ ಶತಮಾನ ಭಾರತೀಯರದ್ದಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು,ಗಣಿ,ಕಲ್ಲಿದ್ದಲು ಸಚಿವರಾದ ಪ್ರಹ್ಲಾದ ಜೋಶಿ ಹೇಳಿದರು.

Updated: Aug 8, 2020 , 11:28 PM IST
ಹಿಂದಿ ಬಳಕೆಗೆ ವಿರೋಧ ಬೇಡ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Photo Courtsey : facebook

ಬೆಂಗಳೂರು: ಪ್ರತಿಯೊಬ್ಬರಿಗೂ ನಮ್ಮ ಭಾಷೆ, ನಮ್ಮ ದೇಶ ಎಂಬ ಸ್ವಾಭಿಮಾನವಿರಲಿ ಬರುವ 21ನೇ ಶತಮಾನ ಭಾರತೀಯರದ್ದಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು,ಗಣಿ,ಕಲ್ಲಿದ್ದಲು ಸಚಿವರಾದ ಪ್ರಹ್ಲಾದ ಜೋಶಿ ಹೇಳಿದರು.

ಇಂದು ಮದ್ಯಾಹ್ನ ಧಾರವಾಡ ನಗರದ ಹಿಂದಿ ಪ್ರಚಾರ ಸಭಾದ ಆವರಣದಲ್ಲಿ ಸ್ಥಾಪಿಸಿರುವ ಬೃಹತ ರಾಷ್ಟ್ರ ಧ್ವಜಸ್ತಂಭ ಉದ್ಘಾಟಿಸಿ,ರಾಷ್ಟ್ರ ಧ್ವಜಾರೋಹನ ನೆರವೇರಿಸಿ ಮಾತನಾಡಿದರು.

ದೇಶದಲ್ಲಿ ಉತ್ಪಾದನೆಯಾಗುವ ಉತ್ಪನಗಳನ್ನು ಬಳಸುವ ಮೂಲಕ ಆತ್ಮನಿರ್ಭರ ಯೋಜನೆಗೆ ಬಲತುಂಬಬೇಕು. ಸಾವಿರಾರು ವರ್ಷಗಳ ಇತಿಹಾಸವಿರುವ ಹಿಂದಿ ಭಾಷೆಗೆ ರಾಷ್ಟ್ರದಲ್ಲಿ ಪ್ರಮುಖ ಸ್ಥಾನವಿದೆ.ಹಿಂದಿ ಬಳಕೆಗೆ ವಿರೋಧ ಬೇಡ.ಮನೆಯಲ್ಲಿ ಕನ್ನಡ ಮತ್ತು ಅದರೊಂದಿಗೆ ಹಿಂದಿ, ಇಂಗ್ಲೀಷ್ ಭಾಷೆಗಳ ಬಳಕೆಗೆ ಆದ್ಯತೆ ನೀಡಬೇಕು ಎಂದರು.

ರಾಷ್ಟ್ರ ಧ್ವಜ ಗೌರವ ಹೆಚ್ಚಿಸುತ್ತಿದೆ.ದೇಶದ ಬದ್ಧತೆ, ನಮ್ಮತನ, ಸ್ವಾಲಂಬನೆಗಳನ್ನು ಬೆಳೆಸುತ್ತದೆ ಎಂದು ಅವರು ಹೇಳಿದರು.ಹಿಂದಿ ಪ್ರಚಾರ ಸಭಾ ಆರಂಭದಿಂದಲೂ ಉತ್ತಮ ಕಾರ್ಯವನ್ನು ಮಾಡುತ್ತಿದೆ ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಅರವಿಂದ ಬೆಲ್ಲದ,ಅಮೃತ ದೇಸಾಯಿ, ಧಾರವಾಡ ಹಿಂದಿ ಪ್ರಚಾರ ಸಭಾದ ಅಧ್ಯಕ್ಷ ಈರೇಶ ಅಂಚಟಗೇರಿ,ಆಡಳಿತ ಮಂಡಳಿಯ ಸದ್ಯಸರಾದ ಎಮ್.ಆರ್ ಪಾಟೀಲ್, ಅರುಣ ಜೋಶಿ, ಹಿಂದಿ ಪ್ರಚಾರ ಸಭಾ ಅಧೀನದ ವಿವಿಧ ಶಾಲೆ ಕಾಲೇಜುಗಳ ಮುಖ್ಯಸ್ಥರು, ಅಧ್ಯಾಪಕರು,ಶಿಕ್ಷಕರು,ಸಿಬ್ಬಂದಿಗಳು ಸೇರಿದಂತೆ ಇತರರು ಪಾಲ್ಗೊಂಡಿದ್ದರು.