ತಿಂಗಳಾಂತ್ಯದಲ್ಲಿ ಭಾಗ್ಯಗಳ ಹರಿಕಾರ ಸಿದ್ದರಾಮಯ್ಯ ಸರ್ಕಾರ: ಎಂಬಿಪಿ

ಸೂಕ್ಷ್ಮವಾಗಿ ಗಮನಿಸಿದರೆ ಮತ್ತೆ ಸಿದ್ದರಾಮಯ್ಯ ನವರು ಮುಖ್ಯಮಂತ್ರಿ ಆಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ ಎಂದು ಮಾಜಿ ಸಚಿವ ಎಂ.ಪಿ. ಪಾಟೀಲ್ ಟ್ವೀಟ್ ಮಾಡಿದ್ದಾರೆ.

Yashaswini V Yashaswini V | Updated: Dec 2, 2019 , 02:46 PM IST
ತಿಂಗಳಾಂತ್ಯದಲ್ಲಿ ಭಾಗ್ಯಗಳ ಹರಿಕಾರ ಸಿದ್ದರಾಮಯ್ಯ ಸರ್ಕಾರ: ಎಂಬಿಪಿ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಉಪಕಾರವಾಗುವುದೋ ಉರುಳಾಗುವುದೋ ಎಂಬುದೇ ಸದ್ಯದ ಚರ್ಚಾ ವಿಷಯವಾಗಿದೆ.

ಇದರ ನಡುವೆ ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಈಗಾಗಲೇ ಮೈತ್ರಿಯ ಜಪ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಮೈತ್ರಿ ಬಗ್ಗೆ ಸ್ಪಷ್ಡ ಸುಳಿವು ನೀಡಿದ್ದರೆ ಜೆಡಿಎಸ್ ನಾಯಕರು ಎಂದಿನಂತೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿ 'ತಾವು ಎಲ್ಲದಕ್ಕೂ ಸಿದ್ದ' ಎಂಬ ಸಂದೇಶ ರವಾನಿಸಿದ್ದಾರೆ‌.

ಈಗಿನ ಸರದಿ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರದು. ಎಂ.ಬಿ. ಪಾಟೀಲ್ 'ತಿಂಗಳಾಂತ್ಯದಲ್ಲಿ ಭಾಗ್ಯಗಳ ಸರಕಾರ ಬರಲಿದೆ' ಎಂಬ ಭರವಸೆ ವ್ಯಕ್ಯಪಡಿಸಿದ್ದಾರೆ. ಈಗಿನ ಸರ್ಕಾರ ಇದೆಯೋ ಇಲ್ಲವೋ ಎಂಬುದೇ ಗೊತ್ತಿಲ್ಲ ಎಂದು ತಿವಿದಿರುವ ಎಂಬಿಪಿ, ಭಾಗ್ಯಗಳ ಹರಿಕಾರ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಆ ಮೂಲಕ ಈಗಿನಿಂದಲೇ ಸಿದ್ದರಾಮಯ್ಯ ಜೊತೆಗಿರುವ ಪ್ರಯತ್ನವನ್ನೂ ಮಾಡಿದ್ದಾರೆ.