)
Bumper Gift For Govt Job Seekers: ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕಾ ರಾಜ್ಯ ಸರ್ಕಾರ ಬಂಪರ್ ಗುಡ್ನ್ಯೂಸ್ ನೀಡಿದೆ. ಸರ್ಕಾರಿ ಉದ್ಯೋಗಕ್ಕಾಗಿ ನೇರ ನೇಮಕಾತಿಗಾಗಿ ಗರಿಷ್ಠ ವಯೋಮಿತಿಯನ್ನು ಮೂರು ವರ್ಷಗಳವರೆಗೆ ಸಡಿಲಿಕೆ ಮಡಿ ಸಿದ್ದರಾಮಯ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು ಲಕ್ಷಾಂತರ ಮಂದಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ದಸರಾ ಉಡುಗೊರೆಯನ್ನು ನೀಡಿದೆ.
ಸೆಪ್ಟೆಂಬರ್ 29(ಸೋಮವಾರದಂದು) ಹೊರಡಿಸಿರುವ ಆದೇಶದ ಅನ್ವಯ, ಕಳೆದೆರಡು ವರುಷಗಳಿಂದ ಹಲವು ಕಾರಣಗಳಿಂದಾಗಿ ಸರ್ಕಾರಿ ಹುದ್ದೆಗಳ ನೇಮಕಾತಿ ತಡವಾಗಿದೆ. ಇದರಿಂದಾಗಿ ಹಲವು ಸರ್ಕಾರಿ ಉದ್ಯೋಗಾಕಾಂಕ್ಷಿಗಳು ವಯೋಮಿತಿ ದಾಟುವ ಆತಂಕದಲ್ಲಿದ್ದರು. ಇದೀಗ, ಇಂತಹ ಅಭ್ಯರ್ಥಿಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳ ಬೇಡಿಕೆಗಳಿಗೆ ಸ್ಪಂದಿಸಿ ರಾಜ್ಯ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಸರ್ಕಾರಿ ಉದ್ಯೋಗದಲ್ಲಿ ವಯಸ್ಸಿನ ಮಿತಿ ಸಡಿಲಿಕೆಯಿಂದ ಯಾರಿಗೆಲ್ಲಾ ಲಾಭ?
ಸಿವಿಲ್ ನೇರ ನೇಮಕಾತಿಗಳಲ್ಲಿ ರಾಜ್ಯ ಸರ್ಕಾರ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಿದೆ. ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೂ ಒಂದು ಬಾರಿಗೆ ಅನ್ವಯವಾಗುವಂತೆ 3 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ಆದೇಶಿಸಿದೆ. 31.12.2027ರವರೆಗೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ಹೊರಡಿಸುವ ಅಧಿಸೂಚನೆಗಳಂತೆ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಅನ್ವಯವಾಗಲಿದೆ.
ಎಲ್ಲಿಯವರೆಗೆ ಇದು ಅನ್ವಯ?
ಈ ವಯೋಮಿತಿ ಸಡಿಲಿಕೆ 2027ರ ಡಿಸೆಂಬರ್ 31ರೊಳಗೆ ಸರ್ಕಾರ ಹೊರಡಿಸುವ ಎಲ್ಲ ನೇರ ನೇಮಕಾತಿಗಳಿಗೂ ಅನ್ವಯವಾಗಲಿದ್ದು, ಕೇವಲ ಒಂದು ಬಾರಿ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೂ ಈ ನಿಯಮ ಅನ್ವಯಿಸುತ್ತದೆ.
ಯಾವ ವರ್ಗದ ಜನರಿಗೆ ಎಷ್ಟು ವರ್ಷ ವಯೋಮಿತಿ ಸಡಿಲಿಕೆ?
ಸಾಮಾನ್ಯ ವರ್ಗ – 35 ವರ್ಷದಿಂದ 38 ವರ್ಷ
ಒಬಿಸಿ – 38 ವರ್ಷದಿಂದ 41 ವರ್ಷ
ಎಸ್ಸಿ/ಎಸ್ಟಿ/ಪ್ರವರ್ಗ-1 – 40 ವರ್ಷದಿಂದ 43 ವರ್ಷ
ಶಿಕ್ಷಕರ ನೇಮಕಾತಿ:
SC/ST/OBC 42 ಇತ್ತು, 45 ಆಗುತ್ತೆ
ಸಾಮಾನ್ಯ – 40 ಇತ್ತು, 43 ಆಗುತ್ತೆ
SDA/FDA/ಗ್ರೂಪ್ ಸಿ ಹುದ್ದೆ:
SC/ST/OBC – 35 ಇತ್ತು, 38 ಆಗುತ್ತೆ
ಸಾಮಾನ್ಯ – 37 ಇತ್ತು, 40 ಆಗುತ್ತೆ
ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ:
SC/ST/OBC – 27 ಇತ್ತು, 30 ಆಗುತ್ತೆ
ಸಾಮಾನ್ಯ – 25 ಇತ್ತು, 28 ಆಗುತ್ತೆ
ಪೊಲೀಸ್ ಸಭ್ ಇನ್ಸ್ ಪೆಕ್ಟರ್:
SC/ST/OBC – 32 ಇತ್ತು, 35 ಆಗುತ್ತೆ
ಸಾಮಾನ್ಯ – 30 ಇತ್ತು, 33 ಆಗುತ್ತೆ
ಕೆಎಎಸ್:
SC/ST/OBC 40 ಇತ್ತು, 43 ಆಗುತ್ತೆ
ಸಾಮಾನ್ಯ 37 ಇತ್ತು, 40 ಆಗುತ್ತೆ