)
Karnataka Politics: ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಆಂತರಿಕ ಕಚ್ಚಾಟ ಹೆಚ್ಚಾಗಿದೆ. 2.5 ವರ್ಷ ಅಧಿಕಾರ ಹಂಚಿಕೆಗೆ ಸಿದ್ದರಾಮಯ್ಯ ಒಪ್ಪಿಗೆ ಕೊಟ್ಟೆ ಬಂದಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಹಾಲಿ ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಒಪ್ಪಿಗೆ ಕೊಟ್ಟು ಬಂದು ಈಗ ತಾನು 5 ವರ್ಷ ಸಿಎಂ ಆಗ್ತಿನಿ, ಬದಲಾವಣೆ ಆದ್ರೆ ತಾನು ಹೇಳಿದವರು ಆಗಬೇಕು, ಡಿಕೆಶಿ ಸಿಎಂ ಆಗಬಾರದೆಂದು ಇದೆಲ್ಲಾ ತಂತ್ರ ನಡೀತಿದೆ. ಸಿದ್ದರಾಮಯ್ಯ ತಂತ್ರ- ಪ್ರತಿತಂತ್ರದ ನಡುವೆ ಆಡಳಿತ ಹಾಳಾಗಿದೆ ಎಂದು ಕಿಡಿಕಾರಿದರು.
ನವೆಂಬರ್ ಕ್ರಾಂತಿ ಅಂದವರು ಅವರ ಪಕ್ಷದ ರಾಜಣ್ಣ, ಜಾತಿ ಗಣತಿ ವಿಚಾರದಲ್ಲಿ 450 ಕೋಟಿ ವೇಸ್ಟ್ ಮಾಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆರ್ ಎಸ್ ಎಸ್ ಬಗ್ಗೆ ಮಾತನಾಡಿಲ್ಲ, ಈ ಎರಡೂವರೆ ವರ್ಷ ಮಾತನಾಡಲಿಲ್ಲ. ಈಗ ಚಿತ್ತಾಪುರದಲ್ಲಿ ಲಾ ಅಂಡ್ ಪ್ರಾಬ್ಲಂ ಆಗಿದ್ಯಾ ಎಂದು ಪ್ರಶ್ನಿಸಿದರು.
ಜನರ ಮನಸ್ಸನ್ನು ಡೈವರ್ಟ್ ಮಾಡಲು ಅವರೇ ಒಂದೊಂದು ವಿಚಾರ ಹೊರಬಿಡುತ್ತಿದ್ದಾರೆ. ಐಟಿ ಬಿಟಿ ಮಿನಿಸ್ಟರ್ ಪ್ರಿಯಾಂಕ್ ಖರ್ಗೆಗೆ ಉದ್ಯೋಗವಿಲ್ಲ. ಅವರ ಇಲಾಖೆಯನ್ನು ಹೇಳೋರ್ ಕೇಳೋರ್ ಇಲ್ಲಾ, ಪ್ರಿಯಾಂಕ್ ನಿರ್ಲಕ್ಷ್ಯದಿಂದ ಆಂಧ್ರಕ್ಕೆ ಹೊಸ ಕಂಪನಿ ಹೋಗಿದೆ,
ಎಲ್ಲಾ ಫೇಲ್ಯೂರ್ ಮುಚ್ಚಿಕೊಳ್ಳಲು ಆರ್ ಎಸ್ ಎಸ್ ಬಗ್ಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಆರ್ ಎಸ್ ಎಸ್ ಬಗ್ಗೆ ಟೀಕೆ ಮಾಡಿದಷ್ಟು ಸಂಘ ಹೆಚ್ಚು ಬೆಳೆಯಲಿದೆ, ಆರ್ ಎಸ್ ಎಸ್ ಬರೀ ಚಿತ್ತಾಪುರ, ಗುರುಮಿಠಕಲ್ ನಲ್ಲಿಲ್ಲ- ಜಗತ್ತಲ್ಲೇ ಆರ್ ಎಸ್ ಎಸ್ ಇದೆ. ಪ್ರಿಯಾಂಕ್ ಖರ್ಗೆಗೆ ಕೂಪ ಮಂಡೂಕ ಬುದ್ದಿ, ತಮ್ಮ ಜಿಲ್ಲೆಯಲ್ಲಿ ರೂಟ್ ಮಾರ್ಚ್ ಗೆ ಅವಕಾಶ ಕೊಡದಿದ್ದರೇ ಜಗತ್ತಿನಲ್ಲಿ ಎಲ್ಲೂ ಅವಕಾಶ ಸಿಗಲ್ಲ ಎಂದು ಕೊಂಡಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ- ಹೈಕಮಾಂಡ್ ಒಪ್ಪಿದ್ರೆ 5 ವರ್ಷ ನಾನೇ ಸಿಎಂ