close

News WrapGet Handpicked Stories from our editors directly to your mailbox

ಸಿದ್ದರಾಮಯ್ಯ ಒಬ್ಬ ಸ್ಟ್ಯಾಂಡರ್ಡ್ ರಾಜಕಾರಣಿ: ಮಾಜಿ ಸಚಿವ ಜಮೀರ್ ಅಹ್ಮದ್

ಮಾಜಿ ಪ್ರಧಾನಿ ದೇವೇಗೌಡರು ಲಾಭವಿಲ್ಲದೆ ಏನನ್ನೂ ಹೇಳಲ್ಲ ಎಂದಿರುವ ಜಮೀರ್ ಅಹ್ಮದ್, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ದಳಪತಿಗಳೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಸಾಥ್ ನೀಡಿದ್ದಾರೆ.

Updated: Aug 23, 2019 , 03:39 PM IST
ಸಿದ್ದರಾಮಯ್ಯ ಒಬ್ಬ ಸ್ಟ್ಯಾಂಡರ್ಡ್ ರಾಜಕಾರಣಿ: ಮಾಜಿ ಸಚಿವ ಜಮೀರ್ ಅಹ್ಮದ್
File Image

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಲಾಭವಿಲ್ಲದೆ ಏನನ್ನೂ ಹೇಳುವುದಿಲ್ಲ. ಅವರ ಪ್ರತಿಯೊಂದು ಹೇಳಿಕೆಯಲೂ ಒಂದು ರಾಜಕೀಯ ಲಾಭದ ಉದ್ದೇಶ ಇದ್ದೇ ಇರುತ್ತದೆ. ಸಿದ್ದರಾಮಯ್ಯನವರನ್ನು ನಿರಂತರವಾಗಿ ಟೀಕಿಸುತ್ತಿರುವ ಹಿಂದೆಯೂ ಯಾವುದೋ ಒಂದು ರಾಜಕೀಯ ಲಾಭ ಇದೆ. ಆದರೆ, ಸಿದ್ದರಾಮಯ್ಯನವರಿಗೆ ಹೀಗೆ ರಾಜಕೀಯ ಮಾಡಲು ಬರುವುದಿಲ್ಲ. ಸಿದ್ದರಾಮಯ್ಯ ಒಬ್ಬ ಸ್ಟ್ಯಾಂಡರ್ಡ್ ರಾಜಕಾರಣಿ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಮಾಜಿ ಮುಖ್ಯಮಂತ್ರಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ನಡೆಸಿ ದೇವೇಗೌಡರು ಅವರ ಮೇಲೆ ಮಾಡಿದ್ದ ಆರೋಪಗಳಿಗೆ ತಿರುಗೇಟು ನೀಡಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್, ಸಿದ್ದರಾಮಯ್ಯ ಒಬ್ಬ ಸ್ಟ್ಯಾಂಡರ್ಡ್ ರಾಜಕಾರಣಿ. ಅವರಿಗೆ ದೇವೇಗೌಡರು ಹಾಗೂ ಕುಮಾರಸ್ವಾಮಿಯವರಂತೆ ರಾಜಕಾರಣ ಮಾಡಲು ಬರುವುದಿಲ್ಲ.  ಈ ಇಬ್ಬರು ನಾಯಕರಿಂದಲೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪತನವಾಯಿತೇ ಹೊರತು, ಸಿದ್ದರಾಮಯ್ಯನವರಿಗೂ ಮೈತ್ರಿ ಸರ್ಕಾರದ ಪತನಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸಿದ್ದು ಪರ ಬ್ಯಾಟಿಂಗ್ ಮಾಡಿದ್ದಾರೆ.

ಕುಮಾರಸ್ವಾಮಿ ಹಾಗೂ ದೇವೇಗೌಡರಿಂದಲೇ ಮೈತ್ರಿ ಸರ್ಕಾರ ಪತನವಾಯಿತು. ತಮ್ಮ ತಪ್ಪಿಗೆ ಬೇರೆಯವರನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ನಮ್ಮಿಂದ ಎಂದಿಗೂ ಅವರಿಗೆ ತೊಂದರೆಯಾಗಿಲ್ಲ. ಸಿದ್ದರಾಮಯ್ಯನವರು ಯಾರಿಗೂ ಕಣ್ಣೀರು ಹಾಕಿಸಲ್ಲ. ಅವರು ಕಣ್ಣೀರು ಹಾಕಿಸುವ ವ್ಯಕ್ತಿಯೂ ಅಲ್ಲ ಎಂದು ಜಮೀರ್ ಸಿದ್ದರಾಮಯ್ಯ ಅವರ ಪರವಾಗಿ ಹೇಳಿಕೆ ನೀಡಿದ್ದಾರೆ.