ಇವಿಎಂ ಅನುಮಾನದ ಬಗ್ಗೆ ಬಿಜೆಪಿ ವಕ್ತಾರ ಬರೆದ ಪುಸ್ತಕವನ್ನು ಉಲ್ಲೇಖಿಸಿ ಸಿದ್ದು ತಿರುಗೇಟು..!

ಕಾಂಗ್ರೆಸ್ ಸೇರಿ ಎಲ್ಲ ಪ್ರತಿಪಕ್ಷಗಳು ಇವಿಎಂ ಬಗ್ಗೆ ಎತ್ತಿರುವ ಅನುಮಾನದ ಪ್ರಶ್ನೆಗಳ ವಿಚಾರವಾಗಿ ಈಗ ಸಿದ್ದರಾಮಯ್ಯ ಈ ಹಿಂದೆ ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹರಾವ್ ಬರೆದ ಪುಸ್ತಕವನ್ನು ಉಲ್ಲೇಖಿಸಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

Last Updated : May 22, 2019, 05:29 PM IST
ಇವಿಎಂ ಅನುಮಾನದ ಬಗ್ಗೆ ಬಿಜೆಪಿ ವಕ್ತಾರ ಬರೆದ ಪುಸ್ತಕವನ್ನು ಉಲ್ಲೇಖಿಸಿ ಸಿದ್ದು ತಿರುಗೇಟು..!  title=
file photo

ಬೆಂಗಳೂರು: ಕಾಂಗ್ರೆಸ್ ಸೇರಿ ಎಲ್ಲ ಪ್ರತಿಪಕ್ಷಗಳು ಇವಿಎಂ ಬಗ್ಗೆ ಎತ್ತಿರುವ ಅನುಮಾನದ ಪ್ರಶ್ನೆಗಳ ವಿಚಾರವಾಗಿ ಈಗ ಸಿದ್ದರಾಮಯ್ಯ ಈ ಹಿಂದೆ ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹರಾವ್ ಬರೆದ ಪುಸ್ತಕವನ್ನು ಉಲ್ಲೇಖಿಸಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಬಿಜೆಪಿ ಟೀಕೆಗೆ ಈಗ ಟ್ವೀಟ್ ಮೂಲಕ ಉತ್ತರಿಸಿರುವ ಸಿದ್ದರಾಮಯ್ಯ" ಇವಿಎಂ ಬಗ್ಗೆ ಮೊದಲು ಅನುಮಾನ ವ್ಯಕ್ತಪಡಿಸಿದ್ದು ಬಿಜೆಪಿ.‌ ಆ ಪಕ್ಷದ ವಕ್ತಾರ ಜಿವಿಎಲ್ ನರಸಿಂಹರಾವ್ ಈ ಬಗ್ಗೆ ಪುಸ್ತಕವನ್ನೇ ಬರೆದಿದ್ದರು. ಆ ಅನುಮಾನವನ್ನು ಬೆಂಬಲಿಸಿ ಎಲ್.ಕೆ.ಅಡ್ವಾಣಿ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರು. 'ಇವಿಎಂ' ಬಗ್ಗೆ ಈ ಹತ್ತು ವರ್ಷಗಳಲ್ಲಿ ಬಿಜೆಪಿಯ ಬದಲಾದ ನಿಲುವಿಗೆ ಕಾರಣವೇನು?" ಎಂದು ಪ್ರಶ್ನಿಸಿದ್ದಾರೆ. 2009 ರಲ್ಲಿ  ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹರಾವ್ ' Democracy At Risk! Can We Trust Our Electronic Voting Machines' ಪುಸ್ತಕವನ್ನು ಇವಿಎಂ ಕುರಿತಾಗಿ ಬರೆದಿದ್ದಾರೆ. ಈ ಪುಸ್ತಕಕ್ಕೆ ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಮುನ್ನುಡಿಯನ್ನು ಬರೆದಿದ್ದಾರೆ.

2019 ರ ಚುನಾವಣೆ ಮುಗಿದ ನಂತರ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದವು.ಈ ಹಿನ್ನಲೆಯಲ್ಲಿ ಈಗ ಪ್ರತಿಪಕ್ಷಗಳು ಪಕ್ಷಗಳು ಮತಯಂತ್ರದ ಕುರಿತಾಗಿ ಆತಂಕವನ್ನು ವ್ಯಕ್ತಪಡಿಸಿವೆ.

 

Trending News