ಗೆದ್ದು ಸಚಿವರಾದರೂ ನೈತಿಕವಾಗಿ ಸೋತಿರುವ ಅವರು ಈಗಲೂ ಅನರ್ಹರೇ-ಸಿದ್ಧರಾಮಯ್ಯ

  ಉಪಚುನಾವಣೆಯಲ್ಲಿ ಗೆದ್ದು ಈಗ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿರುವವವರ ವಿಚಾರವಾಗಿ ಪ್ರತಿಕ್ರಿಯಿಸಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ 'ಗೆದ್ದು ಸಚಿವರಾದರೂ ನೈತಿಕವಾಗಿ ಸೋತಿರುವ ಅವರು ಈಗಲೂ ಅನರ್ಹರೇ ಎಂದು ಹೇಳಿದ್ದಾರೆ.

Last Updated : Feb 6, 2020, 07:13 PM IST
 ಗೆದ್ದು ಸಚಿವರಾದರೂ ನೈತಿಕವಾಗಿ ಸೋತಿರುವ ಅವರು ಈಗಲೂ ಅನರ್ಹರೇ-ಸಿದ್ಧರಾಮಯ್ಯ  title=
file photo

ಬೆಂಗಳೂರು:  ಉಪಚುನಾವಣೆಯಲ್ಲಿ ಗೆದ್ದು ಈಗ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿರುವವವರ ವಿಚಾರವಾಗಿ ಪ್ರತಿಕ್ರಿಯಿಸಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ 'ಗೆದ್ದು ಸಚಿವರಾದರೂ ನೈತಿಕವಾಗಿ ಸೋತಿರುವ ಅವರು ಈಗಲೂ ಅನರ್ಹರೇ ಎಂದು ಹೇಳಿದ್ದಾರೆ.

"ಸಂಪುಟ ವಿಸ್ತರಣೆ ಬಗ್ಗೆ ಸಂತೋಷ ಪಡುವುದೇನಿಲ್ಲ. ತಾಂತ್ರಿಕವಾಗಿ ಚುನಾವಣೆಯಲ್ಲಿ ಗೆದ್ದು ಶಾಸಕರಾದರೂ ನೈತಿಕವಾಗಿ ಸೋತಿರುವ ಅವರು ಈಗಲೂ ಅನರ್ಹರೇ ಆಗಿದ್ದಾರೆ. ನೂತನ ಸಚಿವರಿಗೆ ಒಳ್ಳೆಯದಾಗಲಿ' ಎಂದು ಹಾರೈಸಿದರು.

ಇದೇ ವೇಳೆ ಯಡಿಯೂರಪ್ಪ ನವರ ವಿರುದ್ಧ ವ್ಯಂಗ್ಯವಾಡಿದ ಸಿದ್ದರಾಮಯ್ಯ 'ಮುಖ್ಯಮಂತ್ರಿಯವರ ಕೈಕಾಲನ್ನು ಹೈಕಮಾಂಡ್ ಕಟ್ಟಿಹಾಕಿ ತಲೆಗೆ ಮಾತ್ರ ಕಿರೀಟ ಇಟ್ಟು ಕೂರಿಸಿದ್ದಾರೆ. ಅವರ ಅಸಹಾಯಕತೆಯನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತೆ. ಮಾಡಿದುಣ್ಣೋ ಮಹರಾಯ' ಎಂದರು.

ಗುರುವಾರದಂದು ನೂತನ ಸಚಿವರಾಗಿ ಎಸ್ ಟಿ ಸೋಮಶೇಖರ್, ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್, ಡಾ.ಕೆ ಸುಧಾಕರ್ ,ಬಿ.ಎ.ಬಸವರಾಜ್, ಶಿವರಾಂ ಹೆಬ್ಬಾರ್, ಬಿ.ಸಿ.ಪಾಟೀಲ್, ಕೆ.ಗೋಪಾಲಯ್ಯ, ನಾರಾಯಣ ಗೌಡ, ಶ್ರೀಮಂತ್ ಪಾಟೀಲ್ ಅವರು ಪ್ರಮಾಣ ವಚನ ಸ್ವೀಕರಿಸಿದರು.

 

Trending News