ರಾಜ್ಯಕ್ಕೆ ನೀಡಿರುವ ಪರಿಹಾರ ಬ್ರಹ್ಮಾಂಡ ಹಸಿವಿಗೆ ಅರೆಕಾಸಿನ ಮಜ್ಜಿಗೆಯಂತೆ -ಸಿದ್ದರಾಮಯ್ಯ

 ರಾಜ್ಯದಲ್ಲಿನ ಪ್ರವಾಹಕ್ಕೆ ಕೇಂದ್ರ ಸರ್ಕಾರ ಘೋಷಿಸಿರುವ 1200 ಕೋಟಿ ರೂ.ಪರಿಹಾರ ಮೊತ್ತದ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

Last Updated : Oct 5, 2019, 05:58 PM IST
ರಾಜ್ಯಕ್ಕೆ ನೀಡಿರುವ ಪರಿಹಾರ ಬ್ರಹ್ಮಾಂಡ ಹಸಿವಿಗೆ ಅರೆಕಾಸಿನ ಮಜ್ಜಿಗೆಯಂತೆ -ಸಿದ್ದರಾಮಯ್ಯ title=
file photo

ಬೆಂಗಳೂರು: ರಾಜ್ಯದಲ್ಲಿನ ಪ್ರವಾಹಕ್ಕೆ ಕೇಂದ್ರ ಸರ್ಕಾರ ಘೋಷಿಸಿರುವ 1200 ಕೋಟಿ ರೂ.ಪರಿಹಾರ ಮೊತ್ತದ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಈಗ ಈ ವಿಚಾರವಾಗಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 'ಹಿಂದೆಂದೂ ಕಂಡರಿಯದ ನೆರೆ ಪರಿಸ್ಥಿತಿಯಿಂದ ಆಗಿರುವ ನಷ್ಟ ಅಂದಾಜು ರೂ.50,000‌ ಕೋಟಿ, ರಾಜ್ಯ ಸರ್ಕಾರ ಕೇಳಿದ್ದು ರೂ.35,000 ಕೋಟಿ. ಕೇಂದ್ರ ಕೊಟ್ಟಿರುವುದು ರೂ.1200 ಕೋಟಿ. ಇದು ಬ್ರಹ್ಮಾಂಡ ಹಸಿವಿಗೆ ಅರೆಕಾಸಿನ ಮಜ್ಜಿಗೆಯಂತೆ' ಎಂದು ಟೀಕಿಸಿದ್ದಾರೆ.

ಇನ್ನೊಂದೆಡೆಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ 'ನೆರೆಯಿಂದ ₹1 ಲಕ್ಷ ಕೋಟಿಗೂ ಹೆಚ್ಚು ನಷ್ಟವಾಗಿದೆ,ರಾಜ್ಯ ಸರ್ಕಾರವೇ ₹38,000 ಕೋಟಿ ನಷ್ಟದ ವರದಿ ನೀಡಿ, ಮಧ್ಯಂತರ ₹3,500 ಕೋಟಿ ಪರಿಹಾರ ಕೇಳಿದೆ.ಆದರೂ, ಕೇಂದ್ರ ಸರ್ಕಾರ 60 ದಿನಗಳ ನಂತರ ಕೇವಲ ₹1200 ಕೋಟಿ ಘೋಷಿಸಿರುವ ಸಂದರ್ಭದಲ್ಲಿ ರಾಜ್ಯಕ್ಕೆ ಬಂದಿರುವ ನೀವು,ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕಲ್ಲವೇ? ಎಂದು ಪ್ರಶ್ನಿಸಿದೆ.

ಶುಕ್ರವಾರದಂದು ಕೇಂದ್ರ ಸರ್ಕಾರವು ಪ್ರವಾಹದಿಂದ ತತ್ತರಿಸಿರುವ ಕರ್ನಾಟಕದ ಸಂತ್ರಸ್ತರ ನೋವಿಗೆ ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯಿಂದ 1200 ಕೋಟಿ  ರೂ ಮುಂಗಡ ಪರಿಹಾರವನ್ನು ಘೋಷಿಸಿತ್ತು.

 

 

 

Trending News