ರಾಜ್ಯ ಬಿಜೆಪಿ ಬಣ ಗೊಂದಲ: ಮಧ್ಯಪ್ರವೇಶದಿಂದ ಹಿಂದೆ ಸರಿದ ಆರ್ ಎಸ್ ಎಸ್!

ರಾಜ್ಯ ಬಿಜೆಪಿಯಲ್ಲಿ ಬಸನಗೌಡ ಪಾಟೀಲ ಯತ್ನಾಳ್, ಬಿ ವೈ ವಿಜಯೇಂದ್ರ, ತಟಸ್ಥ ಬಣ ಆಗಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಇದಕ್ಕೆ ಮಾತೃ ಸಂಸ್ಥೆ ಆಗಿರುವ ಆರ್ ಎಸ್ ಎಸ್ ಮಧ್ಯಪ್ರವೇಶ ಮಾಡುವುದಕ್ಕೆ ಹಿಂದೆ ಸರಿದಿದೆ ಎಂಬ ಮಾಹಿತಿ ಜೀ ಕನ್ನಡ ನ್ಯೂಸ್ ಗೆ ಲಭ್ಯವಾಗಿದೆ. ಇದಕ್ಕೆ ಕಾರಣ ಏನು? ಇಲ್ಲಿವೆ ನೋಡಿ.

Written by - Prashobh Devanahalli | Last Updated : Mar 7, 2025, 07:25 PM IST
    • ಆರ್ ಎಸ್ ಎಸ್ ಮಧ್ಯಪ್ರವೇಶ ಮಾಡುವುದಕ್ಕೆ ಹಿಂದೆ ಸರಿದಿದೆ
    • ಮಾರ್ಚ್ 21 ರಿಂದ 23 ವರೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಪ್ರತಿನಿಧಿ ಸಭೆ
    • ರಾಜ್ಯ ಬಿಜೆಪಿಯ ಆರ್ ಎಸ್ ಎಸ್ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ
ರಾಜ್ಯ ಬಿಜೆಪಿ ಬಣ ಗೊಂದಲ: ಮಧ್ಯಪ್ರವೇಶದಿಂದ ಹಿಂದೆ ಸರಿದ ಆರ್ ಎಸ್ ಎಸ್!
File Photo

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಸನಗೌಡ ಪಾಟೀಲ ಯತ್ನಾಳ್, ಬಿ ವೈ ವಿಜಯೇಂದ್ರ, ತಟಸ್ಥ ಬಣ ಆಗಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಇದಕ್ಕೆ ಮಾತೃ ಸಂಸ್ಥೆ ಆಗಿರುವ ಆರ್ ಎಸ್ ಎಸ್ ಮಧ್ಯಪ್ರವೇಶ ಮಾಡುವುದಕ್ಕೆ ಹಿಂದೆ ಸರಿದಿದೆ ಎಂಬ ಮಾಹಿತಿ ಜೀ ಕನ್ನಡ ನ್ಯೂಸ್ ಗೆ ಲಭ್ಯವಾಗಿದೆ. ಇದಕ್ಕೆ ಕಾರಣ ಏನು? ಇಲ್ಲಿವೆ ನೋಡಿ.

Add Zee News as a Preferred Source

ಇದನ್ನೂ ಓದಿ:  ಸರ್ಕಾರಿ ನೌಕರರಿಗೆ ಪಿಂಚಣಿಯಲ್ಲಿ ಹೆಚ್ಚಳ ಘೋಷಿಸಿದ ಸರ್ಕಾರ ! ಏಪ್ರಿಲ್ ನಿಂದ ಜಾರಿಗೆ ಬರುವ ಹೊಸ ನಿಯಮದಲ್ಲಿ ಯಾರಿಗೆ ಎಷ್ಟು ಜಾಸ್ತಿ ಪೆನ್ಶನ್ ? ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ

ಮಾರ್ಚ್ 21 ರಿಂದ 23 ವರೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಪ್ರತಿನಿಧಿ ಸಭೆ ಚನ್ನಯ್ಯನಹಳ್ಳಿಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಜೆಪಿಯ ಆರ್ ಎಸ್ ಎಸ್ ಕಾರ್ಯಕರ್ತರು ಸೇರಿದಂತೆ ರಾಜ್ಯ ಬಿಜೆಪಿಯ ಆರ್ ಎಸ್ ಎಸ್ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ನಾಯಕ ಒಬ್ಬರು ಆರ್ ಎಸ್ ಎಸ್ ನ ಪ್ರಮುಖರೋಬ್ಬರಿಗೆ ರಾಜ್ಯ ಬಿಜೆಪಿ ಗೊಂದಲ ನಿವಾರಣೆ ಮಾಡಿ ಎಂದು ಕೇಳಿದಾಗ ಕೆಲ ವಿಷಯಗಳನ್ನ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಬಿಜೆಪಿ ಗೊಂದಲಕ್ಕೆ ಆರ್ ಎಸ್ ಎಸ್ ಮಧ್ಯಪ್ರವೇಶ ಸದ್ಯಕ್ಕೆ ಮಾಡಲ್ಲ: ಕಾರಣ?! ಹೇಳಿದ್ದೇನು?

1. ರಾಷ್ಟ್ರ ಮೊದಲು : ಮಾರ್ಚ್ 21 ರಿಂದ 23 ವರೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಪ್ರತಿನಿಧಿ ಸಭೆ ಚನ್ನಯ್ಯನಹಳ್ಳಿಯಲ್ಲಿ ಸೇರುವ ಉದ್ದೇಶ ರಾಷ್ಟ್ರ ನಿರ್ಮಾಣ ಆಗಿರುತ್ತದೆ.

2. ಲೋಕಸಭೆ ಚುನಾವಣೆ ಚರ್ಚೆ: ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕೆಲ ಸ್ಥಾನಗಳು ಕಳೆದುಕೊಂಡಿದೆ, ಇದರಿಂದ ಪಕ್ಷಕ್ಕೆ ಬಹುಮತ ಸಿಕ್ಕಿಲ್ಲ. ಇದಕ್ಕೆ ಕಾರಣ ಬೇಕಿದೆ.

3. ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರ ಆಯ್ಕೆ: ಹಾಲಿ ರಾಷ್ಟ್ರೀಯ ಅಧ್ಯಕ್ಷರ ಅವಧಿ ಮುಗಿದಿದೆ. ಈಗ ಮುಂದಿನ ಬಿಜೆಪಿ ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆ ನಡೆಯಬೇಕು.

4. ನಿಮ್ಮ ಪ್ರಯತ್ನ ಎಷ್ಟು ಇದೇ? : ಇವೆಲ್ಲಾ ದೊಡ್ಡ ಕಾರಣ, ಆದರೆ ಬಣ ರಾಜಕೀಯ ನಿಲ್ಲಿಸಲು ಪಕ್ಷ ಏನೆಲ್ಲಾ ಪ್ರಯತ್ನ ಮಾಡಿದೆ? ವಿಜಯೇಂದ್ರ, ಯತ್ನಾಳ್ ಅಥವಾ  ತಟಸ್ಥರು ಅಂದರೆ ಪಕ್ಷ ಅಲ್ಲಾ. ಮೊದಲು ನೀವು ಪ್ರಯತ್ನ ಮಾಡಿ.

5. ಕೇಂದ್ರ ಬಿಜೆಪಿ ಸರಿ ಮಾಡಲಿ: ಒಂದು ವೇಳೆ ರಾಜ್ಯ ಮಟ್ಟದಲ್ಲಿ ಪರಿಹಾರ ಸಿಕ್ಕಿಲ್ಲ ಅಂದ್ರೆ ಕೇಂದ್ರ ನಾಯಕರ ಮೊರೆ ಹೋಗಿ. ಅವರ ಸಲಹೆ ಪಡೆಯಿರಿ.

ಇದನ್ನೂ ಓದಿ:  ಜೀರಿಗೆಯನ್ನು ಕುಟ್ಟಿ ಇದರಲ್ಲಿ ಬೆರೆಸಿ ಕುಡಿದರೆ 30 ದಿನದ ವರೆಗೆ ಕಂಟ್ರೋಲ್‌ ಆಗುತ್ತೆ ಬ್ಲಡ್‌ ಶುಗರ್‌!

ಎಂದು ತಿಳಿಸುವ ಮೂಲಕ ಸದ್ಯಕ್ಕೆ ಸಂಘ ನಿಮ್ಮ ರಾಜಕೀಯ ಸ್ವಾರ್ಥಕ್ಕೆ ಪ್ರವೇಶ ಮಾಡಲ್ಲ ಎಂದು ತಿಳಿಸಿದೆ. ಒಟ್ಟಿನಲ್ಲಿ,  ಲರ್ನ್ ಬೈ ಹಾರ್ಡ್ ವೇ ಎನ್ನುವ ಹಾಗೆ ಕಷ್ಟಗಳು ನಿಮಗೆ ಪಾಠ ಕಲಿಸಲಿದೆ ಎಂದು ಸಂಘ ರಾಜ್ಯ ಬಿಜೆಪಿ ನಾಯಕರಿಗೆ ತಿಳಿಸಿದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News