)
ಆರ್ ಎಸ್ ಎಸ್ ವಿರುದ್ಧ ಕೊನೆಗೂ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ...ಸಿಎಂ ನೇತೃತ್ವದ ಸಂಪುಟ ಸಭೆಯಲ್ಲಿ ಸರ್ಕಾರಿ ಜಾಗಗಳಲ್ಲಿ ಆರ್ ಎಸ್ ಎಸ್ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕುವ ನಿರ್ಧಾರ ಮಾಡಿದೆ.ಈ ಮೂಲಕ ಅದೇಗೆ ಕ್ರಮ ಕೈಗೊಳ್ತಿರೋ ನಾವು ಒಂದು ಕೈ ನೋಡಿಯೇ ಬಿಡ್ತೇವೆಂಬ ಬಿಜೆಪಿ ನಾಯಕರಿಗೆ ಈ ಮೂಲಕ ಟಕ್ಕರ್ ಕೊಟ್ಟಿದೆ..ಹಂತಹಂತವಾಗಿ ಸಂಘದ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕೋಕೆ ಮುಂದಾಗಿದೆ.
ಆರ್ ಎಸ್ ಎಸ್ ಸಂಘಟನೆಯಾಗಿ ಮೊನ್ನೆ ಭಾನುವಾರಕ್ಕೆ ನೂರು ವರ್ಷ ಪೂರ್ಣಗೊಳಿಸಿರುವ ಸಂದರ್ಭದಲ್ಲೇ ಅದನ್ನ ಬ್ಯಾನ್ ಮಾಡಬೇಕೆಂಬ ಚರ್ಚೆ ಜೋರಾಗ್ತಿದೆ. ಕರ್ನಾಟಕದ ಮಟ್ಟಿಗೆ ಅದರ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕುವ ಪ್ರಯತ್ನ ನಡೆದಿದೆ.ಸಾರ್ವಜನಿಕ ಸ್ಥಳಗಳಲ್ಲಿ ಸಂಘ ಪರಿವಾರದ ಪಥಸಚಲನ ಹಾಗೂ ಕಾರ್ಯ ಚಟುವಟಿಕೆಗಳಿಗೆ ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಪ್ರಿಯಾಂಕ್ ಖರ್ಗೆ ಎತ್ತಿದ ಧ್ವನಿಗೆ ಪೂರಕವಾಗಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲವೆಡೆ ನಿರ್ಭಂದ ಮಾಡುವ ತೀರ್ಮಾನ ಮಾಡಲಾಗಿದೆ.ಶಾಲಾ,ಕಾಲೇಜು,ಆಟದ ಮೈದಾನಗಳು, ಪಾರ್ಕ್,ಬಸ್ ನಿಲ್ದಾಣಗಳು, ಗುಡಿ ಗುಂಡಾರಗಳು, ಸಾರ್ವಜನಿಕ ರಸ್ತೆಗಳಲ್ಲಿ ಪಥಸಂಚಲ ನಡೆಸುವುದಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಿದೆ.ಒಂದು ವೇಳೆ ಏನಾದ್ರೂ ಕಾರ್ಯ ಚಟುವಟಿಕೆ ಇಲ್ಲವೇ ಪಥ ಸಂಚಲನ ನಡೆಸಬೇಕಾದ್ರೆ ಪೊಲೀಸರ ಪೂರ್ವಾನುಮತಿ ಕಡ್ಡಾಯ ಗೊಳಿಸಲಾಗಿದೆ.
ಸಂಪುಟ ಸಭೆಯಲ್ಲೂ ದೊಡ್ಡ ಧ್ವನಿ ಎತ್ತಿದ ಪ್ರಿಯಾಂಕ್..!
ಇನ್ನು ಸಂಪುಟ ಸಭೆಯಲ್ಲಿ ಮೊದಲಿಗೆ ಸಚಿವ ಪ್ರಿಯಾಂಕ್ ಖರ್ಗೆಯವರೇ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.ಶಾಲಾ ಕಾಲೇಜುಗಳಲ್ಲಿ ಮಕ್ಕಳ ಮೇಲೆ ಭಾಚನಾತ್ಮಕ ವಿಚಾರಗಳನ್ನು ತುಂಬುವ ಪ್ರಯತ್ನವನ್ನು ಸಂಘದ ಕಾರ್ಯಕರ್ತರು ಮಾಡ್ತಿದ್ದಾರೆ.ರಾಷ್ಟ್ರಭಕ್ತಿ, ರಾಷ್ಟ್ರಾಭಿಮಾನ ಎಂಬ ನೆಪವೊಡ್ಡಿ ಮಕ್ಕಳನ್ನ ಸೆಳೆಯುವ ಪ್ರಯತ್ನ ಮಾಡ್ತಿದ್ದಾರೆ.ರಸ್ತೆಗಳಲ್ಲಿ ಅನುಮತಿ ಪಡೆಯದೆ ದೊಣ್ಣೆ ಹಿಡಿದು ಪಥ ಸಂಚಲನ ಮಾಡ್ತಾರೆ.ಇದಕ್ಕೆ ಕಡಿವಾಣ ಹಾಕದಿದ್ರೆ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಂದು ವಿವರಿಸಿದ್ದಾರೆ.ಇದಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸೇರಿದಂತೆ ಕೆಲವು ಸಚಿವರು ವಿರೋಧಾಭಿಪ್ರಾಯಗಳನ್ನ ತಿಳಿಸಿದ್ದಾರೆ.ಜೊತೆಗೆ ಹೈಕಮಾಂಡ್ ನಿರ್ದೇಶನ ವೂ ಸೇರಿ ಅಂತಿಮವಾಗಿ ರಾಜ್ಯದಲ್ಲಿ ಅನುಮತಿಯ ನೆಪದಲ್ಲಿ ಸಂಘದ ಕಾರ್ಯ ಚಟುವಟಿಕೆಗಳನ್ನೇ ಹತ್ತಿಕ್ಕುವ ಕೆಲಸಕ್ಕೆ ಸರ್ಕಾರ ಕೈಹಾಕಿದಂತೆ ಕಾಣ್ತಿದೆ.
ಇನ್ನು ಸಂಘದ ಕಾರ್ಯಚಟುವಟಿಕೆಗಳಿಗೆ ಸರ್ಕಾರ ಬ್ರೇಕ್ ಹಾಕುವ ಪ್ರಯತ್ನ ಮಾಡಿಲ್ಲ.ಸಂಘದ ಚಟುವಟಿಕೆಗಳಲ್ಲಿ ಭಾಗಿಯಾಗುವ ದೇಣಿಗೆ ನೀಡುವ ಸಂಗ್ರಹಿಸುವ ಅಧಿಕಾರಿಗಳ ಮೇಲು ಕ್ರಮಕ್ಕೆ ಮುಂದಾಗಿದೆ.ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕೆಲವು ಪಿಡಿಒ,ವಿಲೇಜ್ ಅಕೌಂಟೆಂಟ್ ಗಳು ಸಂಘದ ಸಕ್ರಿಯ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾದ ಬಗ್ಗೆ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದರು.ಅವರ ಮಾಹಿತಿ ಒದಗಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದರಂತೆ.ಹೀಗಾಗಿ ಸಂಪುಟ ಸಭೆಯಲ್ಲಿ ಇದರ ಬಗ್ಗೆಯೂ ಚರ್ಚೆಗಳು ನಡೆದು ಅಂತಿಮ ವಾಗಿ ಅಧಿಕಾರಿಗಳ ಮೇಲೆ ಕಠಿಣ ಕ್ರಮಕ್ಕೆ ತೀರ್ಮಾನ ಮಾಡಲಾಗಿದೆಯಂತೆ.ಯಾರು ಪಥಸಂಚಲನ ಮಾಡ್ತಾರೆ, ಗಣವೇಷ ಹಾಕ್ತಾರೆ ಅಂತವರು ಐಡೆಂಟಿಫೈ ಆಗಿದ್ದೇ ಆದ್ರೆ ಸಸ್ಪೆಂಡ್ ಮಾಡುವ ಅಧಿಕಾರವನ್ನು ಇಲಾಖೆಗೆ ನೀಡಲಾಗಿದೆಯಂತೆ.
ಒಟ್ಟಿನಲ್ಲಿ ಸಂಘಪರಿವಾರದ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ಸರ್ಕಾರದ ಕಣ್ಣು ಬಿದ್ದಿದೆ.ಹೇಗಾದ್ರು ಸಂಘ ಪರಿವಾರಕ್ಕೆ ವಿಸ್ತರಣೆ ,ಜನರನ್ನು ತಲುಪಲು ಹಾಗೂ ಅಡ್ಡಿಪಡಿಸುವುದಕ್ಕೆ ನಿಯಮಗಳನ್ನ ತರಲಾಗ್ತಿದೆ. ಇಂದಿನ ಸಂಪುಟ ಸಭೆಯಲ್ಲಿ ಕೆಲವು ನಿರ್ಬಂಧ ವಿಧಿಸುವ ತೀರ್ಮಾನ ತೆಗೆದುಕೊಂಡಿದ್ದು, ಶೀಘ್ರದಲ್ಲೇ ಅದನ್ನು ನಿಯಮಗಳ ರೂಪದಲ್ಲಿ ಅನುಷ್ಠಾನ ತರಲು ಸರ್ಕಾರ ಮುಂದಾಗಿದೆ.ಇದು ಮುಂದೆ ಯಾವ ಸ್ವರೂಪ ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ