ಛಬ್ಬಿ ಮಾರ್ಗವಾಗಿ ಶಿರಹಟ್ಟಿ, ಗದಗಕ್ಕೆ ಹೋಗುವ ಸಾರಿಗೆ ಬಸ್‌ಗಳು ನಮ್ಮ ಗ್ರಾಮದ ಬಸ್ ನಿಲ್ದಾಣಕ್ಕೆ ನಿಲ್ಲಿಸಲ್ಲ. ಜೊತೆಗೆ ಛಬ್ಬಿಯಿಂದ ಗ್ರಾಮದಿಂದ ಗದಗವರೆಗೂ ಸುಮಾರು 30 ಕಿಮೀ ಯಾವುದೇ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಹತ್ತಲು ಬಸ್‌ನಲ್ಲಿ ಸ್ಥಳವೇ ಇರಲ್ಲ.
ಇದನ್ನೂ ಓದಿ-ಮಳೆ ವೇಳೆ ರಸ್ತೆಗೆ ಡಾಂಬರು ಹಾಕಲು ವೆಟ್ ಮಿಕ್ಸಿಂಗ್ ವಿಧಾನ ಬಳಕೆ: ಡಿಸಿಎಂ ಡಿ.ಕೆ.ಶಿವಕುಮಾರ್
ಹಾಗಾಗಿ ವಿದ್ಯಾರ್ಥಿಗಳು ಬಸ್ ಗೆ ಜೋತು ಬಿದ್ದು ಪ್ರಯಾಣಿಸುವ ದುಸ್ಥಿತಿ ಎದುರಾಗ್ತಿದೆ. ಇದ್ರಿಂದ ಏನಾದ್ರು ಅವಘಡಗಳು ನಡೆದ್ರೆ ಹೊಣೆ ಯಾರು ಅಂತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ರು.
ಇದನ್ನೂ ಓದಿ-ಮಳೆ ವೇಳೆ ರಸ್ತೆಗೆ ಡಾಂಬರು ಹಾಕಲು ವೆಟ್ ಮಿಕ್ಸಿಂಗ್ ವಿಧಾನ ಬಳಕೆ: ಡಿಸಿಎಂ ಡಿ.ಕೆ.ಶಿವಕುಮಾರ್
ಇನ್ನು ಸಾರಿಗೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಪ್ರತಿಭಟನಾನಿರತ ವಿದ್ಯಾರ್ಥಿಗಳ ಮನವೊಲಿಸಿ, ಆದಷ್ಟು ಬೇಗ ಸಮಸ್ಯೆ ಪರಿಶೀಲಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಈ ಮಾರ್ಗವಾಗಿ ಹೆಚ್ಚುವರಿ ಬಸ್ ಬಿಡುವುದಾಗಿ ಭರವಸೆ ನೀಡಿದ್ರು. ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಈ ನಿಗದಿತ ದಿನದೊಳಗೆ ಹೆಚ್ಚುವರಿ ಬಸ್ ಬಿಡದೇ ಹೋದಲ್ಲಿ ಪ್ರತಿಭಟನೆಯ ಸ್ವರೂಪ ತೀವ್ರಗೊಳ್ಳುತ್ತೆ ಅಂತ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ರು.









