)
ಬೆಂಗಳೂರಿನಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ನೆಮ್ಮದಿ ಅನ್ನೋದೇ ಇಲ್ಲ ಎನ್ನುವಂತಾಗಿದೆ,ಯಾಕಂದ್ರೆ ಒಂದಿಲ್ಲೊಂದು ರೀತಿಯಲ್ಲಿ ಜೇಬಿಗೆ ಕತ್ತರಿ ಹಾಕೋಕೆ ಕಾಲ ಕಾಯ್ತಾ ಇರುತ್ತೆ. ಇತ್ತೀಚೆಗೆ ದಿನಬಳಕೆ ವಸ್ತುಗಳ ಸರಣಿ ಬೆಲೆ ಏರಿಕೆ ಬಳಿಕ ಜನರಿಗೆ ಇನ್ನೂ ರಿಲೀಫ್ ಸಿಕ್ಕಿಲ್ಲ.ಅಷ್ಟರಲ್ಲೇ ತರಕಾರಿ ಬೆಲೆ ಗಗನಕ್ಕೆ ಏರಿರೊದ್ರಿಂದ ಗ್ರಾಹಕರಿಗೆ ಶಾಕ್ ಎದುರಾಗಿದೆ..
ಇತ್ತಿಚೆಗೆ ವೆದರ್ ಏರು ಪೇರು ಆಗಿರೋದ್ರಿಂದ ಬೆಳೆಗಳು ಹಾನಿಗೀಡಾಗಿವೆ.ಜೊತೆಗೆ ಹೊರ ಭಾಗದಿಂದ ಬರಬೇಕಿದ್ದ ಕೆಲ ತರಕಾರಿಗಳು ಮಾರುಕಟ್ಟೆ ಯಾತ್ತ ಬರುತ್ತಿಲ್ಲ, ಹೀಗಾಗಿ ಕೆಲ ತರಕಾರಿಗಳ ದರ ಏರಿಕೆಯಾಗಿದೆ. ಇದರಿಂದ ಬೆಂಗಳೂರಿನ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಮೇಲಿಂದ ಮೇಲೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ತರಕಾರಿ ಕೊಳ್ಳಲು ಯೋಚಿಸಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಟಮೋಟ,ಬೀನ್ಸ್,ಕ್ಯಾರೆಟ್, ಬಿಟ್ರೋಟ್ ಬಟಾಣಿ,ನುಗ್ಗೆಕಾಯಿ, ತೊಗರಿಕಾಯಿ, ತೆಂಗಿನಕಾಯಿ ಕ್ಯಾಪ್ಸಿಕಂ ಸೇರಿದಂತೆ ತರಕಾರಿ ದರಗಳು ಗಗನಕ್ಕೆ ಏರಿಕೆಯಾಗಿವೆ.
ಯಾವ ತರಕಾರಿಯ ದರ ಎಷ್ಟಿದೆ ?
ನುಗ್ಗೆಕಾಯಿ- 500 ರಿಂದ 600 ರುಪಾಯಿ.
ಅವರೆಕಾಯಿ- 80 ರಿಂದ 100 ರುಪಾಯಿ.
ಗ್ರೀನ್ ಬಟಾಣಿ- 80 ರಿಂದ 100 ರುಪಾಯಿ.
ಬೀನ್ಸ್- 60 ರಿಂದ 80 ರುಪಾಯಿ.
ತೊಂಡೆಕಾಯಿ- 80 ರಿಂದ 100 ರುಪಾಯಿ.
ತೊಗರಿಕಾಯಿ- 70 ರಿಂದ 80 ರುಪಾಯಿ.
ಕ್ಯಾರೆಟ್- 60 ರಿಂದ 80 ರುಪಾಯಿ.
ಬೀಟ್ ರೂಟ್- 60 ರಿಂದ 60 ರುಪಾಯಿ.
ಹಣ್ಣು ಹುರಳಿಕಾಯಿ- 100 ರಿಂದ 120 ರುಪಾಯಿ.
ಹಸಿ ಮೆಣಸಿನಕಾಯಿ- 80 ರಿಂದ 100 ರುಪಾಯಿ.
ಬೆಂಡೇಕಾಯಿ- 60 ರಿಂದ 80 ರುಪಾಯಿ.
ಟೊಮೆಟೊ- 60 ರಿಂದ 80 ರುಪಾಯಿ.
ಒಟ್ಟಾರೆ ತರಕಾರಿ ದರ ಏರಿಕೆ ಆಗುತ್ತಿದ್ದಂತೆ ಇತ್ತ ಸೊಪ್ಪಿನ ದರ ಕೂಡ ಸೈಕ್ಲೋನ್ ಎಫೆಕ್ಟ್ ನಿಂದ ಹಾಳಾಗಿದ್ದು, ಎಲ್ಲಾ ದರಗಳು ದಿಢೀರ್ ಏರಿಕೆಯಾಗಿದೆ.ಹೀಗಾಗಿ ದರ ಏರಿಕೆ ಗ್ರಾಹಕರ ಬೇಸರಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಖರ್ಗೆ ಕ್ಷೇತ್ರದಲ್ಲಿ ಇಂದು ದಲಿತ ಸಂಘಟನೆಗಳ ಪಥಸಂಚಲನ