ಸುಪ್ರೀಂ ಕೊಲಿಜಿಯಂನಿಂದ ಕರ್ನಾಟಕ ಹೈಕೋರ್ಟ್ ಗೆ 7 ಹೆಚ್ಚುವರಿ ಶಾಶ್ವತ ನ್ಯಾಯಾಧೀಶರ ನೇಮಕಕ್ಕೆ ಶಿಫಾರಸ್ಸು

ಕರ್ನಾಟಕ ಹೈಕೋರ್ಟ್ನ 7 ಹೆಚ್ಚುವರಿ ನ್ಯಾಯಾಧೀಶರನ್ನು ಶಾಶ್ವತಗೊಳಿಸಲು ಸುಪ್ರೀಂಕೋರ್ಟ್ ನ  ಕೊಲ್ಜಿಯಂ ಶಿಫಾರಸು ಮಾಡಿದೆ.

Updated: Oct 11, 2018 , 07:33 PM IST
ಸುಪ್ರೀಂ ಕೊಲಿಜಿಯಂನಿಂದ ಕರ್ನಾಟಕ ಹೈಕೋರ್ಟ್ ಗೆ 7 ಹೆಚ್ಚುವರಿ ಶಾಶ್ವತ ನ್ಯಾಯಾಧೀಶರ ನೇಮಕಕ್ಕೆ ಶಿಫಾರಸ್ಸು

ನವದೆಹಲಿ: ಕರ್ನಾಟಕ ಹೈಕೋರ್ಟ್ನ 7 ಹೆಚ್ಚುವರಿ ನ್ಯಾಯಾಧೀಶರನ್ನು ಶಾಶ್ವತಗೊಳಿಸಲು ಸುಪ್ರೀಂಕೋರ್ಟ್ ನ  ಕೊಲ್ಜಿಯಂ ಶಿಫಾರಸು ಮಾಡಿದೆ.

ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ, ಜಸ್ಟಿಸ್ ಮದನ್ ಬಿ ಲೋಕೂರ್ ಮತ್ತು ಜಸ್ಟಿಸ್ ಕುರಿಯನ್ ಜೋಸೆಫ್ ಅವರನ್ನು ಒಳಗೊಂಡ ಕೊಲಿಜಿಯಂ ಈ ಕೆಳಗಿನ ನ್ಯಾಯಾಧೀಶರನ್ನು ಆಯ್ಕೆ ಮಾಡಲು ನಿರ್ಧರಿಸಿದೆ.

ನ್ಯಾಯಮೂರ್ತಿ ಕೆಂಪಯ್ಯ ಸೋಮಶೇಖರ್
ನ್ಯಾಯಮೂರ್ತಿ ಕೆ. ಸೋಮಪ್ಪ ಮುದಗಲ್
ನ್ಯಾಯಮೂರ್ತಿ ಶ್ರೀನಿವಾಸ್ ಎಚ್. ಕುಮಾರ್
ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ
ನ್ಯಾಯಮೂರ್ತಿ  ಬಸವರಾಜ್ ಎ. ಪಾಟೀಲ್
ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರ ರಾವ್ 
ನ್ಯಾಯಮೂರ್ತಿ ಡಾ.ಎಚ್.ಬಿ.ಪಿ.ಶಾಸ್ತ್ರಿ