ಬೆಂಗಳೂರಿಗರೆ ಹುಷಾರ್! ಮನೆ ಅಥವಾ ಕಟ್ಟಡ ಏನಾದ್ರು ಕಟ್ಟುತ್ತಿದ್ದರೆ ಈಗಲೇ ಚೆಕ್ ಮಾಡಿಕೊಳ್ಳಿ. ಮನೆಯನ್ನು ಬಿಬಿಎಂಪಿ ಪ್ಲಾನ್ ಪ್ರಕಾರ ಕಟ್ಟಲೇಬೇಕಾದ ಅನಿವಾರ್ಯತೆ ಕೂಡ ಇದೆ. ತಪ್ಪಿದರೆ ನಿಮ್ಮ ಮನೆಗೆ ಕಂಟಕ ಆಗೋದು ಗ್ಯಾರಂಟಿ. ಬಾಡಿಗೆ ಆಸೆಗೆ ಬಿದ್ದು ಬೇಕಾಬಿಟ್ಟಿ ಬಿಲ್ಡಿಂಗ್‌ ಕಟ್ಟಿದ್ರೆ, ನಿಮ್ಮ ಕಟ್ಟಡಕ್ಕೆ ಸೀಲ್ ಆಗೋದು ಪಕ್ಕಾ ಆಗಲಿದೆ. 


COMMERCIAL BREAK
SCROLL TO CONTINUE READING

ರಾಜಧಾನಿಯಲ್ಲಿ ಮುಂದುವರೆದ ಅಕ್ರಮ ಕಟ್ಟಡಗಳ ಸರ್ವೇ :
ಬೆಂಗಳೂರಿನಲ್ಲಿರೋ ಅಕ್ರಮ ಕಟ್ಟಡಗಳ ಬಗ್ಗೆ ಡಿಕೆಶಿ ಸೂಚನೆ ಕೊಟ್ಟು ಮೂರು ತಿಂಗಳು ಕಳೆದಿದೆ. ಇಂದು ಶೇಷಾದ್ರಿಪುರಂನಲ್ಲಿ ಅಕ್ರಮ ಕಟ್ಟಡ ಒಂದನ್ನ ಅಧಿಕಾರಿಗಳ ತಂಡ  ಸರ್ವೇ ನಡೆಸಿತು. ಈ ವೇಳೆ ನಿರ್ಮಾಣ ಹಂತದ ಹಾಗೂ ಮತ್ತೊಂದು ಬೃಹತ್​​ ವಸತಿ ಕಟ್ಟಡದ ಮಾಲೀಕರ ನಡುವೆ ತೀವ್ರ ವಾಗ್ವಾದ ಉಂಟಾಗಿತ್ತು.


ಇದನ್ನೂ ಓದಿ : ಕಂಠೀರವ ಸ್ಟುಡಿಯೋ ರಸ್ತೆಯ ಕಂದಕಕ್ಕೆ ಬಿದ್ದು ಅವಘಡ : ಕೆಪಿಟಿಸಿಎಲ್‌ ಸ್ಪಷ್ಟನೆ


ಈ ಆಸ್ತಿಯಲ್ಲಿ ನಿರ್ಮಾಣವಾಗಿರುವ ಕಟ್ಟಡಗಳು ಒತ್ತುವರಿ ಮಾಡಿರುವುದು ಪಾಲಿಕೆ ಸರ್ವೇ ವೇಳೆ ಬಹಿರಂಗವಾಗಿದೆ. ಆದರೆ ಈ ಪೈಕಿ ಈ ಆಸ್ತಿಯಲ್ಲಿರುವ ಕಟ್ಟಡಗಳ ಪೈಕಿ ಯಾವ ಕಟ್ಟಡ ಒತ್ತುವರಿ ಜಾಗದಲ್ಲಿ ಎಂಬುವುದರ ಬಗ್ಗೆ ಉಭಯ ಮಾಲೀಕರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.ನಮ್ಮದೇನು ತಪ್ಪಿಲ್ಲ ಅಂತ ಒಬ್ಬರಿಗೊಬ್ಬರು ಬೆರಳು ತೋರಿಸಿದ್ರು.


ಸದ್ಯ ಪಾಲಿಕೆ ನಿರಂತರವಾಗಿ ಅಕ್ರಮ ಕಟ್ಟಡಗಳ ಹಾಗೂ ಒತ್ತುವರಿ ಜಾಗಗಳ ಸರ್ವೇ ನಡೆಸುತ್ತಲೇ ಇದೆ. ಒತ್ತುವರಿಯಾದ ಜಾಗವನ್ನು ಗುರುತಿಸಿ ನೋಟೀಸ್​ ಜಾರಿ ಮಾಡಿ ಪಾಲಿಕೆ ಕೋರ್ಟ್ ನಲ್ಲಿ ವಿಚಾರಣೆಯನ್ನೂ ನಡೆಸುತ್ತಿದೆ. ಈ ಪೈಕಿ ಕೆಲವು ಪ್ರಕರಣಗಳು ಇತ್ಯರ್ಥಗೊಂಡಿದ್ದು, ಇನ್ನೂ ಕೆಲವು ಕಟ್ಟಡಗಳನ್ನು ತೆರವು ಮಾಡುವುದಕ್ಕೂ ಪಾಲಿಕೆ ಆದೇಶ ಕೊಟ್ಟಿದೆ. ಅಲ್ಲದೆ ಸರ್ವೇ ಪ್ರಕ್ರಿಯೆ ನಿರಂತರ ಎಂದಿದೆ ಬಿಬಿಎಂಪಿ. ಒಟ್ಟಾರೆ ಪಾಲಿಕೆ ಕಾನೂನು ಗಾಳಿಗೆ ತೂರಿ ಬಾನೆತ್ತರದ ಕಟ್ಟಡಗಳನ್ನು ನಿರ್ಮಿಸಿರುವ ಜನರಿಗೆ ನಡುಕ ಹುಟ್ಟಿದ್ದಂತೂ ಸುಳ್ಳಲ್ಲ. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.