“ಸೂರ್ಯಕುಮಾರ್ ಯಾದವ್ ಭಾರತೀಯ ಟಿ20 ಕ್ರಿಕೆಟ್ ನಲ್ಲಿ ಕ್ರಾಂತಿ ಮಾಡಲಿದ್ದಾರೆ`
ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಟಿ20 ವಿಶ್ವಕಪ್ ನಲ್ಲಿ ಸೋಲುವುದರ ಮೂಲಕ ನಿರಾಸೆಯನ್ನು ಹೊಂದಿರಬಹುದು, ಆದರೆ ಈ ಟೂರ್ನಿಯಿಂದ ಭಾರತ ತಂಡವು ಕೆಲವು ಪಾಸಿಟಿವ್ ಅಂಶಗಳನ್ನು ಸಹ ಹೊಂದಿದೆ.ಅದರಲ್ಲಿ ಪ್ರಮುಖವಾಗಿ ಹೇಳಬೇಕಾದ ಅಂಶವೆಂದರೆ ಸೂರ್ಯಕುಮಾರ್ ಯಾದವ್ ಭರ್ಜರಿ ಫಾರ್ಮ್ ನಲ್ಲಿ ಇರುವುದು.
ಸಿಡ್ನಿ: ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಟಿ20 ವಿಶ್ವಕಪ್ ನಲ್ಲಿ ಸೋಲುವುದರ ಮೂಲಕ ನಿರಾಸೆಯನ್ನು ಹೊಂದಿರಬಹುದು, ಆದರೆ ಈ ಟೂರ್ನಿಯಿಂದ ಭಾರತ ತಂಡವು ಕೆಲವು ಪಾಸಿಟಿವ್ ಅಂಶಗಳನ್ನು ಸಹ ಹೊಂದಿದೆ.ಅದರಲ್ಲಿ ಪ್ರಮುಖವಾಗಿ ಹೇಳಬೇಕಾದ ಅಂಶವೆಂದರೆ ಸೂರ್ಯಕುಮಾರ್ ಯಾದವ್ ಭರ್ಜರಿ ಫಾರ್ಮ್ ನಲ್ಲಿ ಇರುವುದು.
ಹೌದು, ಅವರು ಈಗ ಆರು ಪಂದ್ಯಗಳಲ್ಲಿ 239 ರನ್‌ಗಳ ಬೃಹತ್ ಮೊತ್ತದೊಂದಿಗೆ ದೀರ್ಘಕಾಲೀನ ಪ್ರಭಾವ ಬೀರಿದ್ದಾರೆ. ಸೂರ್ಯಕುಮಾರ್ ಮೂರು ಅರ್ಧ ಶತಕಗಳೊಂದಿಗೆ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಒಬ್ಬರಾಗಿದ್ದಾರೆ. 32 ವರ್ಷದ ಸೂರ್ಯಕುಮಾರ್ ಯಾದವ್ ತಮ್ಮ ಅಸಾಧಾರಣ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಅಭಿಮಾನಿಗಳು ಮತ್ತು ಕ್ರಿಕೆಟ್ ತಜ್ಞರಿಂದ ಸಾಕಷ್ಟು ಪ್ರಶಂಸೆ ಗಳಿಸಿದ್ದಾರೆ. ಈಗ ಭಾರತದ ಮಾಜಿ ಆಲ್‌ರೌಂಡರ್ ಸಂಜಯ್ ಬಂಗಾರ್ ಅವರು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನ ಕಠಿಣ ಪರಿಸ್ಥಿತಿಗಳಲ್ಲಿಯೂ ಸಹ ಉತ್ತಮವಾಗಿ ಆಡಬಲ್ಲ ನಿರ್ಭೀತ ಬ್ಯಾಟರ್ ಎಂದು ಸೂರ್ಯಕುಮಾರ್ ಅವರನ್ನು ಹೊಗಳಿದ್ದಾರೆ.
"ಅವರು ಸಂಪೂರ್ಣವಾಗಿ ಆಲ್‌ರೌಂಡ್ ಬ್ಯಾಟರ್ ಆಗಿದ್ದಾರೆ. ಸೂರ್ಯಕುಮಾರ್ ಯಾದವ್ ಫೈನ್ ಲೆಗ್‌ನಲ್ಲಿ ಕೇವಲ ಹೊಡೆತಗಳನ್ನು ಆಡುವ ಕಾಲವಿತ್ತು. ಈಗ ಅವರ ರೇಂಜ್ ಹೆಚ್ಚಾಗಿದೆ, ಅವರ ಸ್ಥಾನಮಾನ ಹೆಚ್ಚಾಗಿದೆ. ವಿಶೇಷವೆಂದರೆ ಒತ್ತಡದ ಸಂದರ್ಭಗಳಲ್ಲಿ ಇರಲಿ ಅಥವಾ ಬ್ಯಾಟಿಂಗ್‌ಗೆ ಅತ್ಯಂತ ಕಷ್ಟಕರವೆಂದು ಪರಿಗಣಿಸಲಾದ ಆಸ್ಟ್ರೇಲಿಯನ್ ಅಥವಾ ಇಂಗ್ಲಿಷ್ ಪರಿಸ್ಥಿತಿಗಳು ಇರಲಿ, ಅವರು ಅಲ್ಲಿಗೆ ಹೋಗಿ ತಮ್ಮ ಮೊದಲ ಪ್ರವಾಸದಲ್ಲಿಯೇ ಅವರು ಪ್ರಭಾವವನ್ನು ಬಿರಿದ್ದಾರೆ" ಎಂದು ಬಂಗಾರ್ ಹೇಳಿದರು. ಇದೆ ವೇಳೆ ಬಂಗಾರ್ ಅವರು ಸೂರ್ಯಕುಮಾರ್ ಅವರನ್ನು ಬಹು ಆಯಾಮದ ಆಟಗಾರ ಎಂದು ಕರೆದರು, ಅವರು ಭಾರತೀಯ T20 ಕ್ರಿಕೆಟ್ ಅನ್ನು ಕ್ರಾಂತಿಗೊಳಿಸುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ʼಕೈಮರʼ ಚಿತ್ರತಂಡದಿಂದ ಪ್ರಿಯಾಂಕ ಉಪ್ಪಿ ಬರ್ತ್‌ಡೇಗೆ ಟೀಸರ್ ಗಿಫ್ಟ್..!
"ಸೂರ್ಯಕುಮಾರ್ ಯಾದವ್ ಭಾರತೀಯ ಟಿ20 ಕ್ರಿಕೆಟ್‌ನಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡುವ ಆಟಗಾರ. ಅವರಂತಹ ಬಹು ಆಯಾಮದ ಆಟಗಾರರನ್ನು ನೀವು ಕಂಡುಕೊಳ್ಳಬೇಕು, ಇಂಗ್ಲೆಂಡ್ ತಂಡವು ನ.9 ಅಥವಾ ನಂ. 10 ರವರೆಗೆ ಆಲ್‌ರೌಂಡರ್‌ಗಳಿಂದ ತುಂಬಿರುತ್ತದೆ. ಆಟಗಾರರು ತಮ್ಮ ಹೊಡೆತಗಳಿಂದ ವಿಕೆಟ್‌ನ ಎರಡೂ ಬದಿಗಳನ್ನು ಗುರಿಯಾಗಿಸಬಹುದು, ಸ್ವಿಚ್ ಹಿಟ್, ರಿವರ್ಸ್ ಸ್ವೀಪ್ ಮತ್ತು ಅಸಾಂಪ್ರದಾಯಿಕ ಪಾಕೆಟ್‌ಗಳನ್ನು ಕಾಣಬಹುದು. ಅಂತಹ ಆಟಗಾರರಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ. ಅವರಲ್ಲಿರುವ ಆಯ್ಕೆಗಳ ಸಂಖ್ಯೆ, ಅವರು ಎಲ್ಲಾ ರೀತಿಯ ಹೊಡೆತಗಳನ್ನು ಆಡುತ್ತಾರೆ. ಅವರು ಒಂದು ರೀತಿ ಸ್ಫೂರ್ತಿ, ಮತ್ತು ಮುಂದೆ ಆ ರೀತಿ ಆಡುವ ಹೆಚ್ಚಿನ ಆಟಗಾರರನ್ನು ನೀವು ನೋಡುತ್ತೀರಿ" ಎಂದು ಬಂಗಾರ್ ಹೇಳಿದರು.
ಈ ಹಿಂದೆ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅವರು 2022 ರ ಟಿ 20 ವಿಶ್ವಕಪ್ ನಲ್ಲಿ ಸೂರ್ಯಕುಮಾರ್ "ಪ್ಲೇಯರ್ ಆಫ್ ದಿ ಟೂರ್ನಮೆಂಟ್" ಪ್ರಶಸ್ತಿಯನ್ನು ಗೆಲ್ಲಬೇಕು ಎಂದು ಹೇಳಿದ್ದರು.
ಐಸಿಸಿ ಶುಕ್ರವಾರ ಪ್ರಶಸ್ತಿ ಪಡೆಯಲು ಸ್ಪರ್ಧೆಯಲ್ಲಿರುವ ಒಂಬತ್ತು ಆಟಗಾರರ ಪಟ್ಟಿಯನ್ನು ಅನಾವರಣಗೊಳಿಸಿದ್ದು, ನಾಲ್ಕು ಅರ್ಧಶತಕಗಳ ಸೌಜನ್ಯದೊಂದಿಗೆ 296 ರನ್ ಗಳಿಸುವ ಮೂಲಕ ಪಂದ್ಯಾವಳಿಯ ಪ್ರಮುಖ ರನ್ ಸ್ಕೋರರ್ ಆಗಿರುವ ಸ್ಟಾರ್ ಭಾರತೀಯ ಬ್ಯಾಟರ್ ವಿರಾಟ್ ಕೊಹ್ಲಿ ಒಳಗೊಂಡಿದ್ದಾರೆ.ಸೂರ್ಯಕುಮಾರ್ ಯಾದವ್, ಪಾಕಿಸ್ತಾನದ ಆಲ್‌ರೌಂಡರ್ ಶಾದಾಬ್ ಖಾನ್, ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿ, ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್, ಇಂಗ್ಲೆಂಡ್ ಆರಂಭಿಕರಾದ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್, ಜಿಂಬಾಬ್ವೆ ಆಲ್‌ರೌಂಡರ್ ಸಿಕಂದರ್ ರಜಾ ಮತ್ತು ಶ್ರೀಲಂಕಾದ ಆಲ್‌ರೌಂಡರ್ ವನಿಂದು ಹಸರಂಗ ಕೂಡ ಈ ಪಟ್ಟಿಯಲ್ಲಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್