ಪೊಲೀಸ್ ಠಾಣೆಯಲ್ಲಿ ಫಿನಾಯಿಲ್ ಕುಡಿದು ಆರೋಪಿ ಆತ್ಮಹತ್ಯೆಗೆ ಯತ್ನ

ಅಬ್ರಾರ್ ಬಾಷ ಸುಲ್ತಾನ್ ಎಂಬುವನು   ಕಳೆದ ಡಿಸೆಂಬರ್ ನಲ್ಲಿ  ಶ್ವೇತಾ ಎಂಬ ಮಹಿಳೆಯ  ಸರಗಳ್ಳತನ ಮಾಡಿದ್ದನು .ಕಳ್ಳತನ ಪ್ರಕರಣದಲ್ಲಿ ರಾಜಗೋಪಾಲನಗರ ಪೊಲೀಸರು ಆತನನ್ನು  ಬಂಧಿಸಿದ್ದರು.

Written by - Zee Kannada News Desk | Last Updated : Jan 31, 2023, 11:00 AM IST
  • ಪೊಲೀಸ್ ಠಾಣೆಯಲ್ಲಿ ಫಿನಾಯಿಲ್ ಕುಡಿದು ಆರೋಪಿ ಆತ್ಮಹತ್ಯೆಗೆ ಯತ್ನ
  • ಬೆಂಗಳೂರಿನ ರಾಜಗೋಪಾಲನಗರದಲ್ಲಿ ಘಟನೆ
  • ಕಳೆದ ಡಿಸೆಂಬರ್ ನಲ್ಲಿ ಶ್ವೇತಾ ಎಂಬ ಮಹಿಳೆಯ ಸರಗಳ್ಳತನ ಮಾಡಿದ್ದನು
ಪೊಲೀಸ್ ಠಾಣೆಯಲ್ಲಿ ಫಿನಾಯಿಲ್ ಕುಡಿದು ಆರೋಪಿ ಆತ್ಮಹತ್ಯೆಗೆ ಯತ್ನ

ಬೆಂಗಳೂರು :ಫಿನಾಯಿಲ್  ಕುಡಿದು   ಆರೋಪಿಯೊರ್ವ  ಆತ್ಮಹತ್ಯೆಗೆ ಯತ್ನಸಿರುವ ಘಟನೆ  ರಾಜಗೋಪಾಲನಗರದ  ಪೊಲೀಸ್‌ ಠಾಣೆಯಲ್ಲಿನಡೆದಿದೆ.ಅಬ್ರಾರ್ ಬಾಷ ಸುಲ್ತಾನ್ ಎಂಬುವನು ಕಳೆದ ಡಿಸೆಂಬರ್ ನಲ್ಲಿ  ಶ್ವೇತಾ ಎಂಬ ಮಹಿಳೆಯ  ಸರಗಳ್ಳತನ ಮಾಡಿದ್ದನು .

ಕಳ್ಳತನ ಪ್ರಕರಣದಲ್ಲಿ ರಾಜಗೋಪಾಲನಗರ ಪೊಲೀಸರು ಆತನನ್ನು  ಬಂಧಿಸಿದ್ದರು. ಬಂಧಿತನಾಗಿದ್ದ ವೇಳೆ  ಪ್ರಕಾಶ್ ಎಂಬ ಪಿಸಿ,ಅಬ್ರಾರ್ ನನ್ನ ಹ್ಯಾಂಡ್ ಕಪ್ ಹಾಗೂ ಲೀಡಿಂಗ್ ಚೈನ್ ಹಾಕಿ ಆರೋಪಿಯನ್ನ ಕರೆದೊಯ್ದಿದ್ದರು.ಬಂಧನದಿಂದ ತಪ್ಪಿಸಿಕೊಳ್ಳುವುದಕ್ಕಾಗಿ  ಆತ್ಮಹತ್ಯೆಗೆ ಯತ್ನಿಸಿದ್ದಾನೆ . ಈ ವೇಳೆ ಶೌಚಾಲಯ ಹೋಗುವ ನೆಪದಲ್ಲಿ ಒಳಗಿದ್ದ  ಪಿನಾಯಿಲ್ ಕುಡಿದಿದ್ದಾನೆ.

 ಇದನ್ನೂ ಓದಿತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಲು ಸಮಿತಿ ರಚನೆ

ಇಷ್ಟು ಹೊತ್ತಾದರು ಬಾರದ  ಅಬ್ರಾರ್ ನ್ನು ಗಮನಿಸಿ  ಶೌಚಾಲಯಕ್ಕೆ ಹೋದಾಗ ಆರೋಪಿ   ಆತ್ಮಹತ್ಯೆಗೆ ಯತ್ನಿಸಿರುವುದು ಕಂಡುಬಂದಿದೆ. ಇದನ್ನ ನೋಡಿದ ಪೊಲೀಸ್ ಕಾನ್ಸ್ಟೇಬಲ್ ತಕ್ಷಣ ಬಾಟಲ್ಕಿತ್ತೆಸೆದು ಸಮೀಪ ವಿರುವ  ಹೆಗ್ಗನಹಳ್ಳಿ ಜೈಮಾರುತಿ ಆಸ್ಪತ್ರೆಗೆ ಸೇರಿಸಿದ್ದಾರೆ.  ಆರೋಪಿಗೆ ಚಿಕಿತ್ಸೆ ಮುಂದುವರಿಸಲಾಗಿದೆ  ರಾಜಗೋಪಾಲನಗರ ಪೊಲೀಸರು ಮಾಹಿತಿ ನೀಡಿದ್ದಾರೆ.

 ಇದನ್ನೂ ಓದಿ:ಬಿಎಂಟಿಸಿಯ 94 ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

More Stories

Trending News