Trending Viral Video: ಹಿಂದೂ ಪುರಾಣಗಳ ಪ್ರಕಾರ ಪ್ರತಿಯೊಂದು ದೇವರಿಗೆ ಅದರದೇ ಆದ ಮಹತ್ವ ಮತ್ತು ಶಕ್ತಿ ಇರುತ್ತದೆ. ದೇವರ ಬಳಿ ಭಕ್ತಿಯಿಂದ ಬೇಡಿಕೊಂಡರೆ ಅವರು ನಮ್ಮಲ್ಲಾ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ ಎಂಬುದು ಭಕ್ತರ ನಂಬಿಕೆ. ಅದಕ್ಕೆ ಸಾಕ್ಷಿ ಎಂಬಂತೆ ಲೆಕ್ಕವಿಲ್ಲದಷ್ಟು ನಿದರ್ಶನಗಳು ನಮ್ಮ ಕಣ್ಣ ಮುಂದೆ ಸಿಗುತ್ತವೆ.
ಇದನ್ನೂ ಓದಿ: ಬಿಳಿಗಿರಿರಂಗನ ಬೆಟ್ಟದಲ್ಲಿ ಹೊಸ ಕೀಟ ಪತ್ತೆ, ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಗೋಚರ
ಇನ್ನು ಕರ್ನಾಟಕದ ಪ್ರಸಿದ್ಧ ಜಿಲ್ಲೆಯಾದ ದಕ್ಷಿಣ ಕನ್ನಡ, ದೈವ ದೇವರಿಗೆ ವಿಶೇಷ ಮಾನ್ಯತೆ ನೀಡುವ ಪ್ರದೇಶ ಎಂಬುದು ನಮಗೆಲ್ಲ ತಿಳಿದಿರುವ ಸಂಗತಿ. ಇಲ್ಲಿ ದೇವರಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ದೈವಗಳಿಗೆ ನೀಡಲಾಗುತ್ತದೆ. ಇಲ್ಲಿ ನಡೆಯುವ ಪವಾಡಗಳಿಗೆ ಇಂದಿಗೂ ಉತ್ತರ ಸಿಕ್ಕಿಲ್ಲ. ಇದರ ಜೊತೆಗೆ ಇಲ್ಲಿನ ಜನ ಭಕ್ತಿಯಿಂದ ಆರಾಧನೆ ಮಾಡುವ ದೈವ-ದೇವರು ಇವರ ಕೈ ಬಿಟ್ಟಿಲ್ಲ.
ಕರಾವಳಿಯ ಮಹಾಪವಾಡಕ್ಕೊಂದು ಪುಷ್ಟಿ ನೀಡುವ ಘಟನೆ ಇದೀಗ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಡುಮಲೆ ಕ್ಷೇತ್ರ ಬಹಳ ಪ್ರಸಿದ್ಧವಾದುದು. ಇಲ್ಲಿ ಆರಾಧಿಸಲ್ಪಡುವ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಸದ್ಯ ಕಾರ್ಯಪ್ರಗತಿಯಲ್ಲಿದೆ. ಇಲ್ಲಿ ನಡೆದ ಪವಾಡವೊಂದರ ದೃಶ್ಯ ಸದ್ಯ ಭಾರೀ ಸುದ್ದಿಯಾಗುತ್ತಿದೆ.
ಇದನ್ನೂ ಓದಿ: ನಕಲಿ ನಿರಪೇಕ್ಷಣಾ ಪತ್ರ ನೀಡಿ ಸಿಬಿಎಸ್‌ಸಿ ಪಠ್ಯಕ್ರಮ ಸಂಯೋಜನೆ: ಲೋಕೇಶ್ ತಾಳಿಕಟ್ಟೆ ವಿಚಾರಣೆ
ಪಡುಮಲೆ ಎಂಬುದು ದೈವ ದೇವರುಗಳ ಆರಾಧನೆಯ ಕೇಂದ್ರ. ಇದು ತುಳುನಾಡ ಕಾರಣಿಕ ಪುರುಷರಾದ ಕೋಟಿ ಚೆನ್ನಯರು ನಂಬಿಕೊಂಡು ಬಂದ ಕ್ಷೇತ್ರವೂ ಹೌದು. ಇದೀಗ ಇಲ್ಲಿ ಜೀರ್ಣೋದ್ಧಾರ ಕಾರ್ಯ ಮಾಡಲಾಗುತ್ತಿದ್ದು, ಮದಕ ಎಂಬಲ್ಲಿ ಪೂಜೆ ನೆರವೇರಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಅರ್ಚಕರು ತೆಂಗಿನಕಾಯಿಯನ್ನು ಒಡೆದಿದ್ದಾರೆ. ಆಗ ಪಕ್ಕದಲ್ಲೇ ಇದ್ದ ಆರತಿ ತಟ್ಟೆಗೆ ತೆಂಗಿನ ನೀರು ಚಿಮ್ಮಿದೆ. ಆದರೆ ನೀರು ಚಿಮ್ಮುತ್ತಿದ್ದಂತೆ ಆರಬೇಕಾದ ದೀಪ ಇದ್ದಕ್ಕಿದ್ದಂತೆ ಭಘ್ ಎಂದು ಹೊತ್ತಿ ಉರಿದಿದೆ. ಇದನ್ನು ಕಂಡ ಭಕ್ತರು ಇದೊಂದು ಮಹಾಪವಾಡ ಎಂದು ಕೈಮುಗಿದಿದ್ದಾರೆ. ಸದ್ಯ ಈ ಪವಾಡದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.