)
ಬೆಂಗಳೂರು: ರಾಜಧಾನಿಯ ಪ್ರಸಿದ್ಧ ಐತಿಹಾಸಿಕ ಡಾ. ಎಮ್.ಹೆಚ್. ಮರಿಗೌಡಲಾಲ್ಬಾಗ್ನಲ್ಲಿರುವ ರಾಷ್ಟ್ರೀಯ ತೋಟಗಾರಿಕಾ ಐತಿಹಾಸಿಕ ಗ್ರಂಥಾಲಯವು ಪುನರ್ನಿರ್ಮಾಣ ಮಾಡುವುದರ ಕಾರ್ಯಕೈಗೊಳ್ಳಲಾಗಿತ್ತು, ಕೆಲವು ವರ್ಷಗಳ ಹಿಂದೆ ಪ್ರಾರಂಭವಾದ ಈ ಯೋಜನೆಯು ಕೊನೆಗೂ ಅಂತಿಮ ಹಂತಕ್ಕೆ ತಲುಪಿದ್ದು, ತೋಟಗಾರಿಕೆ ಇಲಾಖೆಯು ಈ ಸೌಲಭ್ಯವನ್ನು ಉದ್ಘಾಟಿಸಲು ಸಿದ್ಧತೆ ನಡೆಸುತ್ತಿದೆ.
ಈ ಪರಂಪರೆಯ ತಾಣವನ್ನು ಪುನಃಸ್ಥಾಪಿಸಲು ಮತ್ತು ನವೀಕರಿಸಲು ತೋಟಗಾರಿಕೆ ಇಲಾಖೆಯು ಸುಮಾರು 1 ಕೋಟಿ ರೂ.ಗಳನ್ನು ಈಗಾಗಲೆ ಖರ್ಚು ಮಾಡಿದೆ. ಇನ್ನು ಹೊಸದಾಗಿ ಸಸ್ಯಗಳು ಮತ್ತು ಪರಿಸರಕ್ಕೆ ಸೇರಿದಂತೆ, ತೋಟಗಾರಿಕೆ ಮತ್ತು ಉದ್ಯಾನ ವಿನ್ಯಾಸದ ಬಗ್ಗೆ 12,000 ಕ್ಕೂ ಹೆಚ್ಚಿನ ಪುಸ್ತಕಗಳಿಗೆ ಡಿಜಿಟಲ್ ರೂಪ ನೀಡಿ ಇ-ಪುಸ್ತಕಗಳನ್ನಾಗಿ ಪರಿವರ್ತಿಸಲಾಗಿದೆ. ಇದರೊಂದಿಗೆ ಸಾರ್ವಜನಿಕರನ್ನು ಆಕರ್ಷಿಸಲು ಮತ್ತು ಓದಲು ಅವಕಾಶ ಮತ್ತು ವಿವಿಧ ಅನುಕೂಲಗಳನ್ನು ಒದಗಿಸಲಾಗಿದೆ.
ಗ್ರಂಥಾಲಯದ ಹೊಸ ರೂಪಾಂತರದ ಕುರಿತು ಮಾತನಾಡಿದ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಎಚ್.ಟಿ.ಬಾಲಕೃಷ್ಣ, "ನಾವು ಗ್ರಂಥಾಲಯದಿಂದ ಅಮೂಲ್ಯವಾದ ವರ್ಣಚಿತ್ರಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಲಾಗಿದೆ ಎಲ್ಲ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಡಿಜಿಡಲೀಕರಣಗೊಳಿಸಲಾಗಿದೆ. ಯಾವುದೇ ಅಮೂಲ್ಯವಾದ ವಿಷಯಗಳು ಕಳೆದುಹೋಗದಂತೆ ನೋಡಿಕೊಳ್ಳಲಾಗಿದೆ." ಎಂದರು ಇದರೊಂದಿಗೆ ಅವರು ಹೊಸದಾಗಿ ನಿರ್ಮಾಣವಾದ ಕಟ್ಟಡದ ವಿಷೇಶತೆಗಳ ಕುರಿತು ಮಾತನಾಡಿದರು.
ಗ್ರಂಥಾಲಯದ ಕಟ್ಟಡವು ಪುರಾತತ್ವ ಇಲಾಖೆಗೆ ಸೇರಿರುವದರಿಂದ ಇದರ ಮೂಲ ಮತ್ತು ಸಹಜತೆಯು ಎಲ್ಲಿಯೂ ಕಳೆದುಹೊಗಂತೆ ಎಚ್ಚರ ವಹಿಸಲಾಗಿದೆ.
ಇನ್ನು ಕಟ್ಟಡದ ನಿರ್ಮಾಣದ ವಿಚಾರಕ್ಕೆ ಬಂದರೆ ಇದರ ಒಳಾಂಗಣ ನಿರ್ಮಾಣವನ್ನು NTACH (ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್) ಮಾರ್ಗದರ್ಶನದಲಲ್ಲಿ ನಿರ್ಮಿಸಲಾಗಿದೆ. ಹಳೆಯ ಕೆತ್ತನೆ ಮತ್ತು ವಾಸ್ತುಶಿಲ್ಪಗಳಿಗೆ ಹೊಸ ರೂಪ ನೀಡಲಾಗಿದೆ. ಇನ್ನು ಕಟ್ಟ್ಡವನ್ನು ಮಳೆಹಾನಿಯಿಂದತಡೆಯಲು ಎಡ ಮತ್ತು ಬಲ ಬಾಗದಲ್ಲಿ ಒಳಚರಂಡಿ ಅಲವದಿಸಲಾಗಿದೆ ಇನ್ನೇನು ಕೆಲವೇ ದಿನಗಳಲ್ಲಿ ಈ ಗ್ರಂಥಾಲಯ ಸಾರ್ವಜನಿಕ ಬಳಕೆಗೆ ಸಿದ್ದವಾಗಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.