ಆರು ತಿಂಗಳಾದರು ಸರ್ಕಾರವೇ ಅಸ್ತಿತ್ವದಲ್ಲಿಲ್ಲ-ಜಗದೀಶ್ ಶೆಟ್ಟರ್

ಸಮ್ಮಿಶ್ರ ಸರ್ಕಾರಕ್ಕೆ ಆರು ತಿಂಗಳಾದರೂ ಸರ್ಕಾರಕ್ಕೆ ಇನ್ನು ಅಸ್ತಿತ್ವವೇ ಇಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜ್ಯ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ.

Last Updated : Nov 23, 2018, 03:31 PM IST
ಆರು ತಿಂಗಳಾದರು ಸರ್ಕಾರವೇ ಅಸ್ತಿತ್ವದಲ್ಲಿಲ್ಲ-ಜಗದೀಶ್ ಶೆಟ್ಟರ್ title=

ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಆರು ತಿಂಗಳಾದರೂ ಸರ್ಕಾರಕ್ಕೆ ಇನ್ನು ಅಸ್ತಿತ್ವವೇ ಇಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜ್ಯ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು " ಈ ಸರ್ಕಾರ ಬಂದು ಆರು ತಿಂಗಳಾಗಿದೆ ಇದಕ್ಕೆ ಇನ್ನು ಅಸ್ತಿತ್ವವೇ ಇಲ್ಲ.ಇಂತಹ ಸತ್ತು ಹೋಗಿರುವ ಸರ್ಕಾರಕ್ಕೆ ವಿಶ್ ಮಾಡಲಾಗುತ್ತಾ ಎಂದು ಅವರು ವ್ಯಂಗವಾಡಿದ್ದಾರೆ.

ಸಮ್ಮಿಶ್ರ  ಸರಕಾರ ಟೀಕೆಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತಿಲ್ಲ. ಪ್ರತಿಪಕ್ಷಳ ನಾಯಕರಾಗಿ ನಾವು  ನಾಯಕರು ಸರಕಾರದ ತಪ್ಪುಗಳನ್ನು ಎತ್ತಿ ತೋರಿಸುತ್ತೇವೆ. ಟೀಕೆ ಮಾಡೋದೇ ಬೇಡ ಅಂದ್ರೆ ಹೇಗೆ? ಎಂದು ಶೆಟ್ಟರ್ ಪ್ರಶ್ನಿಸಿದರು.

ಇನ್ನು ಕಬ್ಬು ಬೆಳೆಗಾರ ಸಮಸ್ಯೆಯ ಬಗ್ಗೆ ಮಾತನಾಡಿದ  ಶೆಟ್ಟರ್ "ಈ ಸರಕಾರವು ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದೆ. ರೈತರ ಸಮಸ್ಯೆಗಳನ್ನು ಬಗೆಹರಿಸಿದರೆ ಅವರು ಯಾಕೆ ಬೀದಿಗೆ ಬಂದು ಪ್ರತಿಭಟಿಸುತ್ತಾರೆ?. ಎರಡು ತಿಂಗಳ ಹಿಂದೆಯೇ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಮಾತಾಡಬೇಕಿತ್ತು ಎಂದು ಸರ್ಕಾರದ ವಿರುದ್ಧ ಜಗದೀಶ್ ಶೆಟ್ಟರ್ ಕಿಡಿ ಕಾರಿದರು. 

Trending News