)
ವಿಧಾನಸಭೆ ಕಲಾಪದಲ್ಲಿ ಗೃಹ ಲಕ್ಷ್ಮಿ ಯೋಜನೆಯ ಬಾಕಿ ಹಣ ಪಾವತಿ ವಿಚಾರ ದೊಡ್ಡ ಸದ್ದುಮಾಡ್ತು.ಆಗಸ್ಟ್ ನಿಂದ ಮೂರು ತಿಂಗಳು ಗೃಹ ಲಕ್ಷ್ಮಿ ಹಣ ಬಿಡುಗಡೆ ಮಾಡಿಲ್ಲ, ಸುಮ್ಮನೆ ಬಿಲ್ಡಪ್ ಕೊಡೋದೇ ಆಯ್ತು ಅಂತ ಬಿಜೆಪಿ ಶಾಸಕ ಮಹೇಶ್ ಟೆಂಗಿನ ಕಾಯಿ ಧ್ವನಿ ಎತ್ತಿದ್ರು.ನಾವು ಯಾವುದೇ ಬಾಕಿ ಹಣವನ್ನ ಉಳಿಸಿಕೊಂಡಿಲ್ಲ ಅಂತ ಸಚಿವೆ ಹೆಬ್ಬಾಳ್ಕರ್ ಉತ್ತರ ನೀಡಿದ್ರು.ಈ ವೇಳೆ ಬಿಜೆಪಿ ನಾಯಕರು ಸುಳ್ಳು ಹೇಳ್ತಿದ್ದಾರೆಂದು ತಿರುಗಿಬಿದ್ರು.ಇನ್ನು ಉತ್ತರ ಕರ್ನಾಟಕದ ಚರ್ಚೆಯಲ್ಲಿ ನಾನು ಭಾಗವಹಿಸ್ತೇನೆಂಬ ಹೆಚ್ ಕೆ ಪಾಟೀಲರ ಬೇಡಿಕೆಗೆ ಬಿಜೆಪಿ ತೀರ್ವ ವಿರೋಧ ವ್ಯಕ್ತಪಡಿಸ್ತು.ಇದೇ ವೇಳೆ ಸಿಎಂ ಕುರ್ಚಿ ವಿಚಾರವೂ ಮಧ್ಯದಲ್ಲಿ ಬಂದು ಹೋಯ್ತು.ಇವತ್ತಿನ ಕಲಾಪದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಇಂದು ಐದನೇ ದಿನಕ್ಕೆಕಾಲಿಟ್ಟಿತ್ತು.ಕಲಾಪದಲ್ಲಿ ಗೃಹ ಲಕ್ಷ್ಮಿ ಯೋಜನೆಯ ಮೂರು ತಿಂಗಳ ಬಾಕಿ ಕೊಟ್ಟಿಲ್ಲವೆಂದು ಬಿಜೆಪಿಯ ಮಹೇಶ್ ಟೆಂಗಿನಕಾಯಿ ಆರೋಪಿಸಿದ್ರು.ಆದ್ರೆ ನಾವು ಎಲ್ಲಾ ಬಾಕಿಯನ್ನೂ ಕ್ಲಿಯರ್ ಮಾಡಿದ್ದೇವೆ, ಫೈನಾನ್ಸ್ ಡಿಫಾರ್ಟ್ ಮೆಂಟ್ ನವರು ರಿಲೀಸ್ ಮಾಡಬೇಕು ಅಂತ ಹೆಬ್ಬಾಳ್ಕರ್ ಸಮರ್ಥನೆ ಮಾಡಿಕೊಂಡ್ರು.ಆದ್ರೆ ಮೂರು ತಿಂಗಳ ಬಾಕಿ ಬಿಡುಗಡೆಯಾಗಿಲ್ಲ ಅನ್ನೋ ದಾಖಲೆಗಳನ್ನಬಿಡುಗಡೆ ಮಾಡುವ ಮೂಲಕ ಟೆಂಗಿನ ಕಾಯಿ ಹೆಬ್ಬಾಳ್ಕರ್ ಗೆ ಪೇಚಿಗೆ ಸಿಲಿಕಿಸಿದ್ರು. ಈವೇಳೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕೂಡ ತೆಂಗಿನಕಾಯಿಗೆ ಧ್ವನಿ ಸೇರಿಸಿದ್ರು.
ಸದನಕ್ಕೆ ಸುಳ್ಳು ಹೇಳುವ ಮೂಲಕ ಸಚಿವೆ ದಾರಿ ತಪ್ಪಿಸ್ತಿದ್ದಾರೆಂದು ಅಶೋಕ್ ಆರೋಪಿಸಿದ್ರು.ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಸದನವನ್ನ ಸುಳ್ಳು ಹೇಳಿ ನೀವೇ ಧಿಕ್ಕು ತಪ್ಪಿಸ್ತಿದ್ದೀರ, ಹೆಚ್ಚು ಕಡಿಮೆ ಆಗಿದ್ರೆ ಸರಿಪಡಿಸೋಣ ಅಂತ ಸಮಾಧಾನ ಮಾಡಿದ್ರು.ಅಲ್ಲಿಗೆ ಬಿಜೆಪಿ ನಾಯಕರು ಸುಮ್ಮನಾದ್ರು.
ಇನ್ನು ಗೃಹ ಲಕ್ಷ್ಮಿ ಬಾಕಿ ಹಣದ ಚರ್ಚೆ ವೇಳೆ ಸಿಎಂ ಕುರ್ಚಿ ಕಿತ್ತಾಟದ ವಿಚಾರವೂ ಪ್ರಸ್ತಾಪ ವಾಯ್ತು.ಬಾಕಿ ಹಣ ಬಿಡುಗಡೆ ಬಗ್ಗೆ ಸಚಿವೆ ಹೆಬ್ಬಾಳ್ಕರ್ ಸುಳ್ಳು ಹೇಳ್ತಿದ್ದಾರೆಂದು ಆರೋಪಿಸಿ ಆರ್.ಅಶೋಕ್ ಮಾತನಾಡ್ತಿದ್ರು.ಈ ವೇಳೆ ಸಿಎಂ ಸಿದ್ದರಾಮಯ್ಯ ಹೆಬ್ಬಾಳ್ಕರ್ ಪರ ಬೆಂಬಲಕ್ಕೆ ಬಂದ್ರು.ಆಗ ಸುಮ್ಮನಿದ್ದ ಅಶೋಕ್ ಮೊದಲು ಒಂದತ್ತು ದಿನ ನೀವು ಡಿನ್ನರ್ ಪಾರ್ಟಿಗಳಿಗೆ ಬ್ರೇಕ್ ಹಾಕಿಸಿ, ಆಗ ಸದನ ಸರಿಯಾದ ಧಿಕ್ಕಿನಲ್ಲಿ ಸಾಗುತ್ತೆ ಅಂತ ಕಿಚಾಯಿಸಿದ್ರು.ರಾತ್ರಿಯೆಲ್ಲಾ ಡಿನ್ನರ್ ಪಾರ್ಟಿಗಳು ನಡೆಯುತ್ತವೆ.ಸಚಿವರು ಮಾಹಿತಿ ಪಡೆದುಕೊಳ್ಳದೆ ಬೆಳಗ್ಗೆ ಎದ್ದು ಸದನಕ್ಕೆ ಬರ್ತಾರೆ. ಹೀಗಾಗಿ ಸರಿಯಾದ ಉತ್ತರವನ್ನ ನೀಡೋಕೆ ಸಾಧ್ಯವಾಗ್ತಿಲ್ಲ.ಸರ್ಕಾರಕ್ಕೆ ಯಾರು ಹೇಳುವವರು ಕೇಳುವವರು ಇಲ್ಲದಂತಾಗಿದೆ ಎಂದು ಕಾಲೆಳೆದ್ರು.
ಇನ್ನು ಸದನದೊಳಗೆ ಶಾಸಕರ ಪ್ರಶ್ನೆಗಳಿಗೆ ಉತ್ತರಿಸುವ ಸಚಿವರಿಗೆ ಚರ್ಚೆ ಮಾಡೋಕೆ ಅವಕಾ ಶವಿಲ್ಲ ಅಂತ ಅಡ್ಡಿಪಡಿಸಿದ ಘಟನೆಯೂ ನಡೆದು ಹೋಯ್ತು.ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಸ್ಪೀಕರ್ ಅವಕಾಶ ನೀಡಿದ್ದರು.ಹಲವು ಶಾಸಕರು ಇದರ ಬಗ್ಗೆ ನಾಲ್ಕು ದಿನಗಳಿಂದ ತಮ್ಮ ಆಭಿಪ್ರಾಯ ಮಂಡಿಸ್ತಿದ್ರು. ಇವತ್ತು ಸಚಿವ ಹೆಚ್.ಕೆ. ಪಾಟೀಲರು ತಾವು ಈ ಭಾಗದವರು,ನಮಗೂ ಚರ್ಚೆಗೆ ಅವಕಾಶ ಕೊಡಿ ಅಂತ ಸ್ಪೀಕರ್ ಮುಂದೆ ಬೇಡಿಕೆ ಇಟ್ರು.ಆದ್ರೆ ಈ ವೇಳೆ ಬಿಜೆಪಿ ಶಾಸಕರು ಅಡ್ಡಿಯಾದ್ರು.ಉತ್ತರ ಕೊಡುವ ಜಾಗದಲ್ಲಿ ನಿಂತವರು ಶಾಸಕರಂತೆ ಚರ್ಚೆ ಮಾಡೋಕೆ ಅವಕಾಶವಿಲ್ಲವೆಂದು ಕಡ್ಡಿತುಂಡು ಮಾಡಿದಂತೆ ಪ್ರತಿಪಕ್ಷ ನಾಯಕ ಅಶೋಕ್ ಹಾಗೂ ಸುನೀಲ್ ಕುಮಾರ್ ಧ್ವನಿ ಎತ್ತಿದ್ರು.
ಇಷ್ಟು ವರ್ಷಗಳಿಂದ ಸದನ ನಡೆಯುತ್ತಿದೆ,ಯಾವ ಸಚಿವರು ಚರ್ಚೆಯಲ್ಲಿ ಭಾಗವಹಿಸಿಲ್ಲ,ಹಿಂದೆ ನಾನು ಸಿಟಿ ರವಿ ಸಚಿವರಾಗಿದ್ದೆವು, ಆಗ ಮಂಗಳೂರು ಗೋಲಿಬಾರ್ ಬಗ್ಗೆ ಸಿಟಿ ರವಿ ಚರ್ಚೆಗೆ ಅವಕಾಶ ಕೊಡ್ಲಿಲ್ಲ, ಸಚಿವರು ಮಾತನಾಡೋಕೆ ಬರಲ್ಲ ಅಂತ ಅಂದು ನೀವೇ ಹೇಳಿದ್ರಿ,ಈಗ ಕೇಳ್ತಿರೋದು ಎಷ್ಟರ ಮಟ್ಟಿಗೆ ಸರಿ ಅಂತ ಪ್ರಶ್ನಿಸಿದ್ದಾರೆ..ಕೊನೆಗೆ ಅವರಿಗೆ ಚರ್ಚೆಗೆ ಅವಕಾಶ ನೀಡ್ಬೇಡಿ ಅಂತ ಸ್ಪೀಕರ್ ಗೆ ಬೇಡಿಕೆ ಇಟ್ರು.ಈ ವೇಳೆ ಡಿಕೆಶಿ ಕೂಡ ಈ ಭಾಗದವರು ಮಾತನಾಡಲಿ ಎಂದು ಪಾಟೀಲರ ಪರ ನಿಂತ್ರು.ಕೊನೆಗೆ ಪಾಟೀಲರ ಚರ್ಚೆಯಿಂದ ಹಿಂದೆ ಸರಿದ್ರು.
ಒಟ್ನಲ್ಲಿ ಇವತ್ತು ಐದನೇ ದಿನದ ಕಲಾಪದಲ್ಲಿ ಉತ್ತರ ಕರ್ನಾಟಕದ ಮೇಲಿನ ಚರ್ಚೆ ಮುಂದುವರಿಯಿತು.ಶಾಸಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ರು.ಗೃಹ ಲಕ್ಷ್ಮಿ ಯೋಜನೆ ಬಾಕಿ ಹಣದ ಬಗ್ಗೆಯೂ ಚರ್ಚೆಯಾಯ್ತು.ಉತ್ತರದ ವೇಳೆ ಸಚಿವೆ ಹೆಬ್ಬಾಳ್ಕರ್ ಪೇಚಿಗೆ ಸಿಲುಕಿದ್ದೂ ಆಯ್ತು.
ರಾಚಪ್ಪ ಸುತ್ತೂರು ಪೊಲಿಟಿಕಲ್ ಬ್ಯೂರೋ
ಜೀ ಕನ್ನಡ ನ್ಯೂಸ್ ಬೆಳಗಾವಿ