ಬೆಂಗಳೂರು: ಶುಕ್ರವಾರದಂದು 1.30 ಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿಗೆ ರಾಜ್ಯಪಾಲರು ಪತ್ರ ಬರೆದು ವಿಶ್ವಾಸ ಮತಯಾಚನೆಗೆ ಆದೇಶಿಸಿದ್ದರು. ಆದರೆ ಈಗ ರಾಜ್ಯಪಾಲರ ಆದೇಶವು ಕೂಡ ಜಾರಿ ಆಗದೆ ಉಳಿದಿದೆ.ಈ ಹಿನ್ನಲೆಯಲ್ಲಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರ ಬರೆದು ಇಂದು ಸಂಜೆ ಆರು ಗಂಟೆ ವೇಳೆ ವಿಶ್ವಾಸ ಮತಯಾಚನೆಗೆ ಕಾಲಾವಧಿಯನ್ನು ನಿಗದಿಪಡಿಸಿದ್ದಾರೆ. 



COMMERCIAL BREAK
SCROLL TO CONTINUE READING

ಈಗ ರಾಜ್ಯಪಾಲರು ಎರಡನೇ ಪತ್ರ ಕಳುಹಿಸಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ' ನನಗೆ ರಾಜ್ಯಪಾಲರ ಮೇಲೆ ಗೌರವವಿದೆ. ಆದರೆ ರಾಜ್ಯಪಾಲರು ಕಳುಸಿರುವ ಎರಡನೇ ಲವ್ ಲೆಟರ್ ನಿಂದ ನನ್ನ ಮನಸ್ಸಿಗೆ ನೋವಾಗಿದೆ. ಅವರಿಗೆ 10 ದಿನಗಳ ಹಿಂದಷ್ಟೇ ಕುದುರೆ ವ್ಯಾಪಾರದ ಬಗ್ಗೆ ತಿಳಿದಿದೆ. (ಯಡಿಯೂರಪ್ಪ ನ ಪಿಎ ಸಂತೋಷ ಅವರು ಸ್ವತಂತ್ರ ಶಾಸಕ ಎಚ್ ನಾಗೇಶ್ ಅವರನ್ನು ವಿಮಾನಕ್ಕೆ ಹತ್ತಿಸುತ್ತಿರುವ ಫೋಟೋಗಳನ್ನು ತೋರಿಸುತ್ತಾ) ಆದ್ದರಿಂದ ಈ ವಿಶ್ವಾಸಮತಯಾಚನೆ ನಿರ್ಧಾರವನ್ನು ನಾನು ನಿಮಗೆ(ಸ್ಪೀಕರ್) ಬಿಡುತ್ತೇನೆ. ಇದು ದೆಹಲಿಯಿಂದ ನಿರ್ದೇಶಿತವಾಗಬಾರದು. ಆದ್ದರಿಂದ ರಾಜ್ಯಪಾಲರು ಕಳುಹಿಸಿದ ಲೆಟರ್ ನಿಂದ ನನ್ನನ್ನು ಉಳಿಸಲು ನಿಮ್ಮನ್ನು ಕೋರುತ್ತೇನೆ 'ಎಂದು ಹೇಳಿದರು.



ಇನ್ನೊಂದೆಡೆ ರಾಜ್ಯಪಾಲರ ನಡೆಗೆ ಕಿಡಿ ಕಾರಿರುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ' ಕರ್ನಾಟಕದ ರಾಜ್ಯಪಾಲರು ಬಿಜೆಪಿ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ. ಸಿಎಂ ಕುಮಾರಸ್ವಾಮಿಗೆ ಅವರು ಬರೆದಿರುವ ಪತ್ರದ ಬಗ್ಗೆ ನಾವು ಕಾನೂನು ಸಲಹೆ ಪಡೆಯುತ್ತೇವೆ.ರಾಜ್ಯಪಾಲರಿಗೆ ಆ ಅಧಿಕಾರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮುಂದುವರೆದು ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಈಗ ವಿಪ್ ಜಾರಿ ಬಗ್ಗೆ ಗೊಂದಲ ಉಂಟಾಗಿದೆ ಎಂದು ಅವರು ವೇಣುಗೋಪಾಲ್ ಹೇಳಿದರು.