)
ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಿಲ್ಲ, ಬಡ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಕಾಂಗ್ರೆಸ್ ಚೆಲ್ಲಾಟವಾಡುತ್ತಿದೆ ಎಂದು ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರುವ ಬಿಜೆಪಿ, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದೆ.
ರಾಜ್ಯದ 432 ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳು ಕಾಲೇಜು ಕಟ್ಟಡ ನೋಡಲು ಬರುವಂತಾಗಿದೆ. ಖಾಯಂ ಉಪನ್ಯಾಸಕರ ಕೊರತೆ ಹಾಗೂ ಅತಿಥಿ ಉಪನ್ಯಾಸಕರ ನೇಮಕಾತಿ ವಿಳಂಬದಿಂದ ಕಳೆದ 15 ದಿನಗಳಿಂದ ಸಮರ್ಪಕವಾಗಿ ತರಗತಿಗಳು ನಡೆಯುತ್ತಿಲ್ಲ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯದ 432 ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳು ಕಾಲೇಜು ಕಟ್ಟಡ ನೋಡಲು ಬರುವಂತಾಗಿದೆ. ಖಾಯಂ ಉಪನ್ಯಾಸಕರ ಕೊರತೆ ಹಾಗೂ ಅತಿಥಿ ಉಪನ್ಯಾಸಕರ ನೇಮಕಾತಿ ವಿಳಂಬದಿಂದ ಕಳೆದ 15 ದಿನಗಳಿಂದ ಸಮರ್ಪಕವಾಗಿ ತರಗತಿಗಳು ನಡೆಯುತ್ತಿಲ್ಲ.
ಬಡ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ಸಿಗದೆ ಅನ್ಯಾಯವಾಗುತ್ತಿದ್ದರೂ,… pic.twitter.com/Zlhb3T2Wej
— BJP Karnataka (@BJP4Karnataka) August 19, 2025
ಬಡ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ಸಿಗದೆ ಅನ್ಯಾಯವಾಗುತ್ತಿದ್ದರೂ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ನಾಪತ್ತೆಯಾಗಿದ್ದಾರೆ. ಬಡವರ ಮಕ್ಕಳ ಶಿಕ್ಷಣವೆಂದರೆ ಕಾಂಗ್ರೆಸ್ ಸರ್ಕಾರಕ್ಕೆ ಇಷ್ಟೊಂದು ತಾತ್ಸಾರವೇಕೆ..?ʼ ಎಂದು ಬಿಜೆಪಿ ಪ್ರಶ್ನಿಸಿದೆ.
ಬಿಬಿಎಂಪಿ ಅಧೀನದ ೧೭೧ ಶಿಕ್ಷಣ ಸಂಸ್ಥೆಗಳಲ್ಲಿ ಶೇ.೮೧ರಷ್ಟು ಬೋಧಕ ಸಿಬ್ಬಂದಿ ಇಲ್ಲ. ಅನಕ್ಷರಸ್ಥ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನಿಷ್ಕ್ರೀಯತೆಯಿಂದ ಬಿಬಿಎಂಪಿ ವ್ಯಾಪ್ತಿಯ ಶಾಲೆಗಳು ಶಿಕ್ಷಕರಿಲ್ಲದೆ ಸೊರಗುತ್ತಿವೆ. ಮಕ್ಕಳ ಭವಿಷ್ಯ ಅಂಧಕಾರದಲ್ಲಿದೆ.! ಮಧು ಬಂಗಾರಪ್ಪ ತೊಲಗಲಿ, ಮಕ್ಕಳ ಭವಿಷ್ಯ ಉಜ್ವಲವಾಗಲಿ.! ಎಂದು ಬಿಜೆಪಿ ಟೀಕಿಸಿದೆ.
ಅನಕ್ಷರಸ್ಥ ಶಿಕ್ಷಣ ಸಚಿವ @Madhu_Bangarapp ಅವರ ನಿಷ್ಕ್ರೀಯತೆಯಿಂದ ಬಿಬಿಎಂಪಿ ವ್ಯಾಪ್ತಿಯ ಶಾಲೆಗಳು ಶಿಕ್ಷಕರಿಲ್ಲದೆ ಸೊರಗುತ್ತಿವೆ. ಮಕ್ಕಳ ಭವಿಷ್ಯ ಅಂಧಕಾರದಲ್ಲಿದೆ.!
ಮಧು ಬಂಗಾರಪ್ಪ ತೊಲಗಲಿ, ಮಕ್ಕಳ ಭವಿಷ್ಯ ಉಜ್ವಲವಾಗಲಿ.!#CongressFailsKarnataka pic.twitter.com/ARyagqdIck
— BJP Karnataka (@BJP4Karnataka) August 19, 2025
ಇದನ್ನೂ ಓದಿ: ಇಂದು ವಿಶೇಷ ಸಚಿವ ಸಂಪುಟ ಸಭೆ ಕರೆದ ಸಿಎಂ
ಶಿಕ್ಷಕರು/ಉಪನ್ಯಾಸಕರು ಇಲ್ಲ
ಶಾಲಾ ಕೊಠಡಿಗಳು ಇಲ್ಲ
ಶೂ, ಸಾಕ್ಸ್ ಇಲ್ಲ
ಶೌಚಾಲಯವಿಲ್ಲ
ಬಿಸಿಯೂಟವಿಲ್ಲ
ಗುಣಮಟ್ಟದ ಬೇಳೆ ಇಲ್ಲ
ಸ್ಕಾಲರ್ಶಿಪ್ ಇಲ್ಲ
ಶಿಕ್ಷಕರಿಗೆ ಸಂಬಳವಿಲ್ಲ
ಆಟದ ಮೈದಾನವಿಲ್ಲ@INCKarnataka ಸರ್ಕಾರದ ದುರಾಡಳಿತದಲ್ಲಿ ಶಿಕ್ಷಣ ಇಲಾಖೆಗೆ ಗ್ರಹಣ, ಮಕ್ಕಳ ಭವಿಷ್ಯಕ್ಕೆ ಕಲ್ಲು.#CongressFailsKarnataka pic.twitter.com/ed51SF8WNb
— BJP Karnataka (@BJP4Karnataka) August 18, 2025
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಶಿಕ್ಷಣ ವ್ಯವಸ್ಥೆ ಅಧೋಗತಿಗೆ ತಲುಪಿದೆ. ಶಿಕ್ಷಕರು/ಉಪನ್ಯಾಸಕರು ಇಲ್ಲ, ಶಾಲಾ ಕೊಠಡಿಗಳು ಇಲ್ಲ, ಮಕ್ಕಳಿಗೆ ಶೂ, ಸಾಕ್ಸ್ ಇಲ್ಲ, ಶೌಚಾಲಯವಿಲ್ಲ, ಬಿಸಿಯೂಟವಿಲ್ಲ, ಗುಣಮಟ್ಟದ ಬೇಳೆ ಇಲ್ಲ, ಸ್ಕಾಲರ್ಶಿಪ್ ಇಲ್ಲ, ಶಿಕ್ಷಕರಿಗೆ ಸಂಬಳವಿಲ್ಲ ಮತ್ತು ಆಟದ ಮೈದಾನವಿಲ್ಲ. ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಶಿಕ್ಷಣ ಇಲಾಖೆಗೆ ಗ್ರಹಣ, ಮಕ್ಕಳ ಭವಿಷ್ಯಕ್ಕೆ ಕಲ್ಲುʼ ಎಂದು ಬಿಜೆಪಿ ಕುಟುಕಿದೆ.