ಕೋಲಾರ: ಅದು ಬರಗಾಲದ ಜಿಲ್ಲೆ ಅಂತನೇ ಹೆಸರುವಾಸಿಯಾದ ಜಿಲ್ಲೆ, ಅದರಲ್ಲೂ ಈವರ್ಷ ಆ ಜಿಲ್ಲೆಯಲ್ಲಿ ಸರಿಯಾದ ಮಳೆ ಇಲ್ಲದೆ ಬೆಳೆ ಇಲ್ಲದೆ ಅಕ್ಷರಶ: ಬರ ಆವರಿಸಿದೆ, ಇಂಥ ಪರಿಸ್ಥಿತಿ ಇರುವ ಜಿಲ್ಲೆಯಲ್ಲಿ ರೋಗಿಗಳು, ಗರ್ಭಿಣಿ ಸ್ತ್ರೀಯರು, ಅಪಘಾತಕ್ಕೊಳಗಾದ ಜನರು ಜೀವ ಉಳಿಸಿಕೊಳ್ಳಲು ಬೇಕಾದ ಅತ್ಯಮೂಲ್ಯ ವಾದ ರಕ್ತಕ್ಕೂ ಬರ ಬಂದಿದೆ, ಆಸ್ಪತ್ರೆಗಳಲ್ಲಿ ರಕ್ತಕ್ಕಾಗಿ ಪರದಾಡುವ ಸ್ಥಿತಿ ಇದೆ.. ಎಲ್ಲಿ ಈ ಸ್ಟೋರಿ ನೋಡಿ.. 


COMMERCIAL BREAK
SCROLL TO CONTINUE READING

ಆಸ್ಪತ್ರೆಗಳಲ್ಲಿ ವಿವಿದ ರೋಗಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು, ಇನ್ನೊಂದೆಡೆ ತುರ್ತು ಪರಿಸ್ಥಿತಿಗಳಿಗಾಗಿ ಶೇಖರಿಸಿಟ್ಟಿರುವ ರಕ್ತ, ಮತ್ತೊಂದೆಡೆ ರಕ್ತದ ಸಮಸ್ಯೆಯ ಬಗ್ಗೆ ಹೇಳುತ್ತಿರುವ ಬ್ಲಡ್​ ಬ್ಯಾಂಕ್​ನ ಸಿಬ್ಬಂದಿಗಳು ಈ ಎಲ್ಲಾ ದೃಷ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆಯಲ್ಲಿ. ಹೌದು ಕೋಲಾರ ಜಿಲ್ಲೆ ಅಂದ್ರೆ ಪ್ರಕೃತಿಯ ಅವಕೃಪೆಗೆ ಒಳಗಾಗಿ ಸದಾ ಬರಗಾಲಕ್ಕೆ ತುತ್ತಾಗುವ ಜಿಲ್ಲೆ. ಇಂಥ ಜಿಲ್ಲೆಯಲ್ಲಿ ಜನರು, ರೋಗಿಗಳು, ಗರ್ಭಿಣಿ ಸ್ತ್ರೀಯರು ಜೀವ ಉಳಿಸಿಕೊಳ್ಳಲು ಅತ್ಯಮೂಲ್ಯವಾಗಿ ಬೇಕಾಗಿರುವ ರಕ್ತಕ್ಕೂ ಬರ ಬಂದಿದೆ. ಹೌದು ಕೋಲಾರ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಬ್ಲಡ್​ ಬ್ಯಾಂಕ್​ಗಳಿವೆ, ಕೋಲಾರ ಜಿಲ್ಲಾಸ್ಪತ್ರೆ, ರೆಡ್ ಕ್ರಾಸ್​ ಸಂಸ್ಥೆ, ಕೆಜಿಎಫ್​ ಸರ್ಕಾರಿ ಆಸ್ಪತ್ರೆ, ಹಾಗೂ ಆರ್​.ಎಲ್​.ಜಾಲಪ್ಪಾ ಆಸ್ಪತ್ರೆಯಲ್ಲಿದೆ. ಸದ್ಯ ಎಲ್ಲಾ ಕಡೆಯಲ್ಲೂ ಕೂಡಾ ಸದ್ಯ ರಕ್ತದ ಕೊರತೆ ಕಂಡು ಬರುತ್ತಿದೆ.


ಇದನ್ನೂ ಓದಿ: ಶೇ 80 ಕಮಿಷನ್‍ನ ಕಾಂಗ್ರೆಸ್ ಸರಕಾರಕ್ಕೆ ಪ್ರಜ್ಞಾವಂತ ಮತದಾರರಿಂದ ತಕ್ಕ ಪಾಠ: ವಿಜಯೇಂದ್ರ ವಿಶ್ವಾಸ


ವಿಧಾನಸಭಾ ಚುನಾವಣೆಗೂ ಮೊದಲು ರಾಜಕೀಯ ಕಾರಣಕ್ಕೆ, ಹುಟ್ಟಿದ ದಿನದ ಆಚರಣೆ, ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಹೆಚ್ಚಾಗಿ ಬ್ಲಡ್​ ಕ್ಯಾಂಪ್​ಗಳು ನಡೆಯುತ್ತಿತ್ತು, ಅಗತ್ಯಕ್ಕಿಂತ ಹೆಚ್ಚಿನ ರಕ್ತ ಸಿಗುತ್ತಿತ್ತು, ಆದರೆ ವಿಧಾನಸಭೆ ಚುನಾವಣೆಯ ಬಳಿಕ ಬ್ಲಡ್​ ಕ್ಯಾಂಪ್​ಗಳು ಕಡಿಮೆಯಾಗಿವೆ ಜೊತೆಗೆ ರಕ್ತದಾನಿಗಳ ಸಂಖ್ಯೆಯೂ ಕಡಿಮೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಹದಿನಾರುವರೆ ಲಕ್ಷ ಜನಸಂಖ್ಯೆ ಇದೆ, ತಿಂಗಳಿಗೆ ಕನಿಷ್ಠ 350 ರಿಂದ 400 ಯೂನಿಟ್​ ರಕ್ತ ಅವಶ್ಯಕತೆ ಇದೆ. ಪ್ರಮುಖವಾಗಿ ಮಹಿಳೆಯರ ಹೆರಿಗೆ ಸಂದರ್ಭದಲ್ಲಿ, ಅಪಘಾತವಾದಾಗ, ಮತ್ತು ಶಸ್ತ್ರಚಿಕಿತ್ಸೆ ವೇಳೆಯಲ್ಲಿ ರಕ್ತದ ಅವಶ್ಯಕತೆ ಇದೆ. ಅದರ ಜೊತೆಗೆ ವಿವಿದ ರೋಗಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ ಇಂಥ ಸಂದರ್ಭಗಳಲ್ಲಿ ರಕ್ತ ಬೇಕಾಗಿದೆ. ಆದರೆ ಕೋಲಾರದಲ್ಲಿ 30 ರಿಂದ 40 ರಷ್ಟು ರಕ್ತದ ಕೊರತೆ ಕಂಡು ಬರುತ್ತಿದೆ. ಅಂದರೆ ತಿಂಗಳಿಗೆ 60 ರಿಂದ 80 ಯೂನಿಟ್​ ರಕ್ತದ ಕೊರತೆ ಕಂಡು ಬರುತ್ತಿದೆ. ಅದ್ಯ ರಕ್ತದಾನಿಗಳ ಕೊರತೆ ಹಾಗೂ ಇತ್ತೀಚೆಗೆ ಬ್ಲಡ್​ ಕ್ಯಾಂಪ್​ಗಳು ನಡೆಯದೆ ಇರುವುದೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.


ಇದನ್ನೂ ಓದಿ: ಕರ್ನಾಟಕವನ್ನು ಕಾಂಗ್ರೆಸ್‌ ಎಟಿಎಮ್‌ ಮಾಡಿಕೊಂಡಿದೆ : ಅಶ್ವತ್ಥ್‌ ನಾರಾಯಣ್


ಇನ್ನು ಕೋಲಾರ ಜಿಲ್ಲಾಸ್ಪತ್ರೆಯಲ್ಲೂ ಕೂಡಾ ಪ್ರತಿನಿತ್ಯ ಅಗತ್ಯವಿರುಷ್ಟು ರಕ್ತದ ಸಿಗುತ್ತಿಲ್ಲ ಹಾಗಾಗಿನೆ ಬೆಂಗಳೂರಿನ ರೆಡ್​ ಕ್ರಾಸ್​, ಟಿ.ಟಿ.ಕೆ ಸಂಸ್ಥೆಗಳಿಂದ ರಕ್ತ ತರಿಸಿಕೊಳ್ಳಲಾಗುತ್ತಿದೆ. ಅದಕ್ಕೂ ಮಿಗಿಲಾಗಿ ಜಿಲ್ಲಾಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಉಚಿತವಾಗಿ ರಕ್ತ ನೀಡಲಾಗುತ್ತಿದೆ ಆದ್ರೆ ಅದಕ್ಕೆ ಬದಲಿ ರಕ್ತ ನೀಡುವುದು, ಅಥವಾ ರೋಗಿಗಳ ಸಂಬಂದಿಕರಿಂದ ರಕ್ತದಾನ ಮಾಡುತ್ತಿಲ್ಲ, ಬದಲಾಗಿ ರೋಗಿ ರೋಗದಿಂದ ಗುಣಮುಖವಾದ ತಕ್ಷಣ ತಮಗೆ ಸಂಬಂದವಿಲ್ಲದಂತೆ ಹೊರಟು ಹೋಗುತ್ತಾರೆ ಹಾಗಾಗಿ ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ರಕ್ತದ ಕೊರತೆ ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕೆ ಪೂರಕವಾಗಿ ಆರೋಗ್ಯ ಇಲಾಖೆ ಕೂಡಾ ಈ ವಿಚಾರದಲ್ಲಿ ವಿಫಲವಾಗಿದೆ, ಜನರಲ್ಲಿ ರಕ್ತದಾನ ಮಾಡಲು ಮುಂದೆ ಬರಲು ಜನರಲ್ಲಿ ಅರಿವು ಮೂಡಿಸುವುದು, ಸಂಘ ಸಂಸ್ಥೆಗಳ ಜೊತೆಗೆ ಜನರೊಟ್ಟಿಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ರಕ್ತದಾನಕ್ಕೆ ಪ್ರೇರೇಪಣೆ ನೀಡುವ ಕೆಲಸ ಮಾಡುತ್ತಿಲ್ಲ, ಅದಕ್ಕೆ ತಕ್ಕಂತ ಜನರಲ್ಲೂ ರಕ್ತದಾನ ಮಾಡುವ ಕುರಿತು ಆಸಕ್ತಿ ಕಡಿಮೆಯಾಗುತ್ತಿದೆ ಇದು ರಕ್ತದ ಕೊರತೆ ಕಂಡು ಬರಲು ಪ್ರಮುಖ ಕಾರಣ ಹಾಗಾಗಿ ಜನರು ಹೆಚ್ಚು ಹೆಚ್ಚು ಬ್ಲಡ್​ ಕ್ಯಾಂಪ್​ಗಳನ್ನು ಮಾಡಲು ಮುಂದಾಗಬೇಕು ಅನ್ನೋದು ಜಿಲ್ಲಾಶಸ್ತ್ರಚಿಕಿತ್ಸಕರ ಮಾತು.


ಒಟ್ಟಾರೆ ಕೋಲಾರ ಜಿಲ್ಲೆಯಲ್ಲಿ ಕೇವಲ ಮಳೆಯಿಲ್ಲದೆ ಬರಪರಿಸ್ಥಿತಿ ಇಲ್ಲ, ಬದಲಾಗಿದೆ ಜನರು ಜೀವ ಉಳಿಸಿಕೊಳ್ಳಲು ರಕ್ತದ ಕೊರತೆ ಕೂಡಾ ಹೆಚ್ಚಾಗಿದೆ, ರೈತರು ನೀರಿಲ್ಲದೆ ಮಳೆ ಇಲ್ಲದೆ ಪರದಾಡುವ ಸ್ಥಿತಿ ಇದ್ದರೆ,ಇತ್ತ ಆಸ್ಪತ್ರೆಗಳಲ್ಲಿ ಸಮರ್ಪಕ ರಕ್ತವಿಲ್ಲದೆ ರೋಗಿಗಳ ಕೂಡಾ ಪರದಾಡುವ ಸ್ಥಿತಿ ನಿರ್ಮಾಣ ವಾಗಿರುವುದು ಮಾತ ನಿಜಕ್ಕ ವಿಪರ್ಯಾಸ..


ಮಹೇಶ್ ನಾರಾಯಣಸ್ವಾಮಿ ಜೀ ಕನ್ನಡ ನ್ಯೂಸ್ ಕೋಲಾರ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.