)
ಹಬ್ಬ ಬಂದ್ರೆ ಸಾಕು ಜನ ಕೆ ಆರ್ ಮಾರುಕಟ್ಟೆ ತೆರಳಿ, ಹಬ್ಬಕ್ಕೆ ಬೇಕಾಗಿರೋ ವೆರೈಟಿ ವೆರೈಟಿ ಹೂವುಗಳನ್ನು ಖರೀದಿ ಮಾಡ್ತಾರೆ. ಅದರ ಜೊತೆಗೆ ಹಬ್ಬಕ್ಕೆ ಬೇಕಾದ ಎಲ್ಲಾ ಸಮಾಗ್ರಿಗಳನ್ನು ಕೆ.ಆರ್ ಮಾರುಕಟ್ಟೆಯಿಂದಲೇ ಪರ್ಚೆಸ್ ಮಾಡ್ತಾರೆ. ಆದರೆ ಇದೀಗ ಸರ್ಕಾರ ಕೆ ಆರ್ ಮಾರುಕಟ್ಟೆ ಕಲಶದಂತಿರೋ ಹೂವಿನ ಮಾರುಕಟ್ಟೆಯನ್ನು ಶಿಫ್ಟ್ ಮಾಡಲು ಚಿಂತನೆ ನಡೆಸಿದೆ. ಜೊತೆಗೆ ಜಾಗ ಕೂಡ ನಿಗದಿ ಮಾಡಿದೆ.
ಕೆ.ಆರ್ ಮಾರುಕಟ್ಟೆಯಲ್ಲಿರುವ ಹೂವಿನ ಮಾರುಕಟ್ಟೆಯನ್ನು ಜಿಕೆ-ವಿಕೆಗೆ ಶಿಫ್ಟ್ ಮಾಡಲು ಪ್ಲಾನ್ ನಡೆದಿದೆ. ಜಿಕೆ-ವಿಕೆಯಲ್ಲಿ ಮಳಿಗೆ ನಿರ್ಮಿಸಿ ಮಾರ್ಕೆಟ್ ಗೆ ಜಾಗ ಮಾಡಲು ಪ್ಲಾನ್ ಶುರುವಾಗಿದೆ. ಆದರೆ ಯಾವ ಮಾರುಕಟ್ಟೆ ಶಿಫ್ಟ್ ಮಾಡಲು ಪ್ಲಾನ್ ಆಗಿದೆ ಅನ್ನೋದನ್ನ ಸೌತ್ ಇಂಡಿಯಾ ಪ್ಲವರ್ ಅಲೋಷಿಯನ್ ಸ್ಪಷ್ಟ ಪಡಿಸಿದೆ.
ಇನ್ನೂ ಜಿಕೆವಿಕೆಯಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಸ್ವಾಗತ ಅಂತಾ ಸೌತ್ ಇಂಡಿಯಾ ಪ್ಲವರ್ ಅಸೋಸಿಯೇಷನ್ ಸುದ್ದಿಗೋಷ್ಟಿ ನಡೆಸಿದೆ. ಒಂದೆಡೆ ವಿರೋಧ ಕೂಗಿನ ನಡುವೆ ಸರ್ಕಾರದ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದು. ಜಿಕೆವಿಕೆಯಲ್ಲಿ ನಿರ್ಮಾಣವಾಗ್ತಿರೋ ಮಾರುಕಟ್ಟೆ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಮಾರುಕಟ್ಟೆ ನಿರ್ಮಾಣವಾದ್ರೆ ರೈತರಿಗೆ ಅನುಕೂಲಾವಾಗುತ್ತೆ. ಜೊತೆಗೆ ಯಾವುದೇ ಮರಗಳನ್ನು ಕಡಿಯದೇ ಖಾಲಿ ಜಾಗದಲ್ಲಿ ನಿರ್ಮಾಣವಾಗಲಿದೆ. ಅಲ್ಲಿಯ ಮಾರುಕಟ್ಟೆಗೂ ಹಾಗೂ ಕೆ ಆರ್ ಮಾರುಕಟ್ಟೆ ವ್ಯಾಪಾರಕ್ಕೂ ಯಾವುದೇ ಸಂಬಂಧವಿಲ್ಲ. ಎಸ್ಪಿ ರೋಡ್ ಮಾರುಕಟ್ಟೆಯ ಹೊರಭಾಗದಲ್ಲಿ ಬೆಳಗ್ಗೆ ನಡೆಯುವ ಬಿಡಿ ಹೂವಿನ ಅದರಲ್ಲೂ ಅಂತರರಾಷ್ಟ್ರೀಯ ಮಟ್ಟದ ಅಲಂಕಾರಿಕ ಹೂಗಳ ಮಾರುಕಟ್ಟೆ ಮಾತ್ರ ಜಿಕೆವಿಕೆಗೆ ಶಿಷ್ಟ್ ಆಗಲಿದೆ. ನಾವು ಸರ್ಕಾರಕ್ಕೆ ಮನವಿ ಮಾಡಿದ್ದು, ನಮಗೆ ಶಾಶ್ವತ ಮಾರುಕಟ್ಟೆ ಬೇಕು. ನಮ್ಮ ಹೂಗಳನ್ನ ಸಂರಕ್ಷಣೆ ಮಾಡಲು ಸ್ಟೋರೇಜ್ ಕಟ್ಟಡದ ಅವಶ್ಯಕತೆ ಇದೆ ಅಂತಾ ತಿಳಿಸಿದ್ದೆವು. ಈಗ ಸರ್ಕಾರ ಜಿಕೆವಿಕೆಯಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಸೌತ್ ಇಂಡಿಯ ಪ್ಲವರ್ ಅಸೋಸಿಯೇಷನ್ ಮುಖಂಡರು ಹೇಳಿದ್ದಾರೆ.
ವಾ.ಓ: ಒಟ್ನಲ್ಲಿ ಸರ್ಕಾರದ ಹೂವಿನ ಮಾರುಕಟ್ಟೆ ಶಿಫ್ಟ್ ಮಾಡಲು ಮುಂದಾಗಿದ್ದು, ಈಗಾಗಲೇ ನೂರು ಕೋಟಿ ವಚ್ಚದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೂ ಅಸ್ತು ಅಂದಿದೆ. ಇದರಿಂದ ಸಾರ್ವಜನಿಕರಿಗೆ ಎಷ್ಟರ ಮಟ್ಟಕ್ಕೆ ಅನುಕೂಲವಾಗುತ್ತದೆ ಅನ್ನೋದನ್ನ ಕಾದುನೋಡಬೇಕಿದೆ.