ಬಿಜೆಪಿ ಮೊದಲ ಪಟ್ಟಿಯಲ್ಲೇ ಮೂವರು ನಾಯಕರಿಗೆ ಟಿಕೆಟ್

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ 72 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ರಾಜ್ಯ ಬಿಜೆಪಿ ಮೂವರು ಬಿಜೆಪಿ ನಾಯಕರಿಗೆ ಮೊದಲ ಪಟ್ಟಿಯಲ್ಲೇ ಟಿಕೆಟ್ ದೊರೆತಿದೆ. 

Last Updated : Apr 9, 2018, 11:31 AM IST
ಬಿಜೆಪಿ ಮೊದಲ ಪಟ್ಟಿಯಲ್ಲೇ ಮೂವರು ನಾಯಕರಿಗೆ ಟಿಕೆಟ್ title=

ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ 72 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ರಾಜ್ಯ ಬಿಜೆಪಿ ಮೂವರು ಬಿಜೆಪಿ ನಾಯಕರಿಗೆ ಮೊದಲ ಪಟ್ಟಿಯಲ್ಲೇ ಟಿಕೆಟ್ ದೊರೆತಿದೆ. 

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಮತ್ತುರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಶಿಕಾರಿಪುರದಿಂದ , ಶಿವಮೊಗ್ಗ ನಗರ ಕ್ಷೇತ್ರದಿಂದ ಕೆ.ಎಸ್.ಈಶ್ವರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್'ನಿಂದ ಟಿಕೆಟ್ ದೊರೆತಿದೆ. 

ಅಷ್ಟೇ ಅಲ್ಲದೆ, ಬಳ್ಳಾರಿ ಜಿಲ್ಲೆಯ ಮೊಣಕಾಲ್ಮೂರು ಕ್ಷೇತ್ರದಿಂದ ಬಿ.ಶ್ರೀರಾಮುಲುಗೆ ಟಿಕೆಟ್ ನೀಡಲಾಗಿದ್ದು, ಪರಿಷತ್‌ ಸದಸ್ಯರಾದ ವಿ.ಸೋಮಣ್ಣ-ಗೋವಿಂದರಾಜ ಕ್ಷೇತ್ರ, ಬಸನಗೌಡ ಪಾಟೀಲ ಯತ್ನಾಳ-ಬಿಜಾಪುರ ಕ್ಷೇತ್ರ, ಉಮೇಶ್ ಕತ್ತಿ-ಹುಕ್ಕೇರಿ ಕ್ಷೇತ್ರ, ಲಕ್ಷ್ಮಣ ಸವಡಿ-ಅಥಣಿ ಕ್ಷೇತ್ರ, ಆರ್. ಅಶೋಕ್-ಪದ್ಮನಾಭ ನಗರ ಕ್ಷೇತ್ರ, ಸಿ.ಪಿ.ಯೋಗೇಶ್ವರ್-ಚನ್ನಪಟ್ಟಣ ಕ್ಷೇತ್ರದಿಂದ ಟಿಕೆಟ್‌ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಇನ್ನು, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಎಂ.ಕೃಷ್ಣಪ್ಪ, ಹೊಸಕೋಟೆ ಕ್ಷೇತ್ರದಿಂದ ಶರತ್ ಬಚ್ಚೆಗೌಡ, ಚಿಕ್ಕಮಗಳೂರು ಕ್ಷೇತ್ರದಿಂದ ಸಿ.ಟಿ.ರವಿ, ಸಂಡೂರು ಕ್ಷೇತ್ರದಿಂದ ಬಿ.ರಾಘವೇಂದ್ರ, ಶಿಗ್ಗಾವ್ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ, ಹಾನಗಲ್ ಕ್ಷೇತ್ರದಿಂದ ಸಿ.ಎಂ.ಉದಾಸಿ, ಕಾರವಾರ ಕ್ಷೇತ್ರದಿಂದ ರೂಪಾ ನಾಯಕ್, ಬಸವಕಲ್ಯಾಣದಿಂದ ಮಲ್ಲಿಕಾರ್ಜುನ ಖೂಬಾ, ಗುಲ್ಬರ್ಗ ಸಕ್ಷಿನದಿಂದ ದತಾತ್ರೆಯ ಪಾಟೀಲ್, ನಿಪ್ಪಾಣಿ ಕ್ಷೇತ್ರದಿಂದ ಶಶಿಕಲಾ ಜೊಲ್ಲೆ ಸೇರಿದಂತೆ 72 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. 

Trending News