KN Rajanna on Tippu Sultan: ಕೃಷ್ಣರಾಜಸಾಗರ ಅಣೆಕಟ್ಟು (KRS) ಕಟ್ಟಲು ಆಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್ ಎಂದು ಹೇಳುವ ಮೂಲಕ ಮಾಜಿ ಸಚಿವ ಕೆ.ಎನ್.ರಾಜಣ್ಣ ಮತ್ತೆ ವಿವಾದದ ಕಿಡಿ ಹೊತ್ತಿಸಿದ್ದಾರೆ. ತುಮಕೂರಿನಲ್ಲಿ ನಡೆದ ಹಿಂದುಳಿದ ವರ್ಗಗಳ ಸಭೆಯಲ್ಲಿ ಮಾತನಾಡಿರುವ ಅವರು, ʼKRSಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್. ನಾನು ಓದಿರುವ ಪ್ರಕಾರ, ಕನ್ನಂಬಾಡಿ ಅಣೆಕಟ್ಟೆಯನ್ನ ಪ್ರಾರಂಭ ಮಾಡಿದ್ದೇ ಟಿಪ್ಪು ಸುಲ್ತಾನ್... ಆನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಅದು ಸಂಪೂರ್ಣವಾಯಿತುʼ ಎಂದು ಹೇಳಿದ್ದಾರೆ.
ಟಿಪ್ಪು ಸುಲ್ತಾನ್‌ನನ್ನ ಬಹಳ ಅವಹೇಳನಕಾರಿಯಾಗಿ ತೋರಿಸಲಾಗುತ್ತದೆ. ನಮ್ಮ ಮಕ್ಕಳಿಗೆ ಇತಿಹಾಸವನ್ನ ಸ್ಪಷ್ಟವಾಗಿ ತಿಳಿಸಬೇಕು, ಯಾವುದೇ ಕಾರಣಕ್ಕೂ ಅದನ್ನ ತಿರುಚಬಾರದು. ಒಡೆಯರ್ ಕಾಲದಲ್ಲಿ KRS ಸಂಪೂರ್ಣ ಮಾಡಬೇಕಾದ್ರೆ ಹಣಕಾಸಿನ ತೊಂದರೆ ಬಂತು. ಮನೆಯಲ್ಲಿದ್ದ ಚಿನ್ನವನ್ನ ತೆಗೆದುಕೊಂಡು ಹೋಗಿ ಬಾಂಬೆಯಲ್ಲಿ ಮಾರುತ್ತಾರೆ. ಬಂದ ಹಣದಲ್ಲಿ ಅವರು ಕೆಆರ್‌ಎಸ್ ಅಣೆಕಟ್ಟೆಯನ್ನ ಸಂಪೂರ್ಣ ಮಾಡುತ್ತಾರೆ. ನಾವು ಇದನ್ನ ಮರೆಯಬಾರದು ಎಂದು ರಾಜಣ್ಣ ತಿಳಿದ್ದಾರೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಬಯಸುತ್ತೇನೆ
ಟಿಪ್ಪು ಸುಲ್ತಾನ್ ನಾಲ್ಕು ಯುದ್ಧ ಮಾಡ್ತಾನೆ. 3ನೇ ಯುದ್ದದಲ್ಲಿ ಸೋತು ಬಿಡ್ತಾನೆ. ಈ ವೇಳೆ ಬ್ರಿಟಿಷ್‌ನವರು 3.30 ಕೋಟಿ ರೂ. ಯುದ್ಧದ ಖರ್ಚು ಕೇಳಿದ್ದಕ್ಕೆ ಆತ ತನ್ನ ಮಕ್ಕಳನ್ನೇ ಅಡವಿಡುತ್ತಾನೆ. ಜೈಲಿನಲ್ಲಿಟ್ಟ ಮಕ್ಕಳನ್ನ ದುಡ್ಡು ಕೊಟ್ಟು ಬಿಡಿಸಿಕೊಳ್ಳಬೇಕಾದರೆ, 4ನೇ ಯುದ್ಧದಲ್ಲಿ ಮೀರ್ ಸಾದಿಕ್‌ನಿಂದ ಸೋಲುತ್ತಾನೆ. ಮೀರ್ ಸಾದಿಕ್ ದ್ರೋಹ ಮತ್ತು ಶಸ್ತ್ರಾಗಾರ ಡ್ಯಾಮೇಜ್ ಆಗದೆ ಇದ್ದಿದ್ದರೆ ಟಿಪ್ಪು ಸುಲ್ತಾನ್ ಸೋಲುತ್ತಿರಲಿಲ್ಲ. ಮೋಸದಿಂದ ಯುದ್ಧದಲ್ಲಿ ಆತನನ್ನ ಸೋಲಿಸಲಾಯ್ತು ಎಂದು ರಾಜಣ್ಣ ಹೇಳಿದ್ದಾರೆ.
ನಮ್ಮ ರಾಜ್ಯದಲ್ಲಿ ರೇಷ್ಮೆ ಬರಲು ಟಿಪ್ಪು ಕಾರಣ. ಟಿಪ್ಪು ರೇಷ್ಮೆ ಜನಕ. ರೇಷ್ಮೆ ಮೊದಲನೇ ಬೆಳೆಯನ್ನ ಪರ್ಷಿಯಾದಿಂದ ತಂದಿದ್ದೇ ಟಿಪ್ಪು. ರಾಮನಗರದ ಎಲ್ಲಾ ಕಡೆ ಮುಸ್ಲಿಂರು ಹೆಚ್ಚು ರೇಷ್ಮೆ ಕೃಷಿ ಮಾಡುತ್ತಾರೆ. ಆತನ ಆನೆಗೆ ಕಣ್ಣು ಹೋದಾಗ ಟಿಪ್ಪು ನಂಜನಗೂಡಿನ ನಂಜುಂಡೇಶ್ವರನಿಗೆ ಹರಕೆ ಮಾಡಿಕೊಳ್ತಾನೆ. ಆ ಬಳಿಕ ಆನೆಗೆ ಕಣ್ಣು ಬರುತ್ತೆ. ಹೀಗಾಗಿ ಪಚ್ಚೆಯನ್ನ ನಂಜುಂಡೇಶ್ವರನ ಲಿಂಗದ ಮೇಲಿಟ್ಟು ಪೂಜೆ ಮಾಡ್ತಾನೆ. ಅಂದಿನಿಂದಲೇ ಹಕ್ಕಿಂ ನಂಜುಂಡೇಶ್ವರ ಅಂತಾ ಹೆಸರು ಬಂದಿತು. ಇದೆಲ್ಲಾ ಟಿಪ್ಪು ಸುಲ್ತಾನ್ ಬಗ್ಗೆ ಇರುವ ಒಳ್ಳೆಯ ಅಂಶಗಳು. ಟಿಪ್ಪುವಿನ ಬಗ್ಗೆ ಬರೀ ಕೆಟ್ಟದ್ದನ್ನೇ ಹೇಳಲಾಗುತ್ತದೆ. ಆದರೆ ಆತನ ಒಳ್ಳಯ ಗುಣಗಳ ಬಗ್ಗೆಯೂ ಹೇಳಬೇಕಾಗುತ್ತದೆ. ನಮ್ಮ ಮಕ್ಕಳಿಗೆ ಇತಿಹಾಸ ಸ್ಪಷ್ಟವಾಗಿ ತಿಳಿಯಬೇಕು. ಇತಿಹಾಸವನ್ನ ತಿರುಚಬಾರದು. ಮಾತು ಎತ್ತಿದರೆ ಹಿಂದೂತ್ವ ಅಂತಾರೆ. ನಾವೆಲ್ಲಾ ಹಿಂದೂಗಳಲ್ವಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಮೊದಲ ದಿನವೇ ಯಡವಟ್ಟು
ಸಚಿವ ಎಚ್.ಸಿ.ಮಹದೇವಪ್ಪ ವಿವಾದ
ಕೃಷ್ಣರಾಜ ಸಾಗರ ಜಲಾಶಯಕ್ಕೆ ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್ ಎಂಬ ಸಚಿವ ಎಚ್.ಸಿ.ಮಹದೇವಪ್ಪ ಹೇಳಿಕೆ ಈ ಹಿಂದೆ ವಿವಾದದ ಕಿಡಿ ಹೊತ್ತಿಸಿತ್ತು. ರಾಜಕೀಯವಾಗಿ ಈ ಹೇಳಿಕೆಗೆ ಬಂದಿದ್ದ ಆಕ್ಷೇಪಗಳು ಒಂದೆಡೆಯಾದರೆ, ಇತಿಹಾಸ ತಜ್ಞರಿಂದಲೂ ಸಚಿವರ ಮಾತಿಗೆ ವಿರೋಧ ವ್ಯಕ್ತವಾಗಿತ್ತು. ಇದೀಗ ಮಾಜಿ ಸಚಿವ ಕೆ.ಎನ್.ರಾಜಣ್ಣ ಕೂಡ KRSಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂದು ಹೇಳಿದ್ದಾರೆ.









