Tiger Injured: ಬಂಡೀಪುರ ಸಫಾರಿ ಜೋನ್'ನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಪ್ರವಾಸಿಗರ ನೆಚ್ಚಿನ ಹುಲಿ ಗಾಯಗೊಂಡಿರುವುದು ಮುನ್ನಲೆಗೆ ಬಂದಿದೆ.

Tiger Injured: ದೇಶದ ಜನಪ್ರಿಯ ಹುಲಿ ಸಂರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ನಾಲ್ಕು ಮರಿಗಳಿರುವ ತಾಯಿ ಹುಲಿ ಗಾಯಗೊಂಡಿರುವುದು ಬೆಳಕಿಗೆ ಬಂದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ಜೋನ್ ನಲ್ಲಿ ಪ್ರವಾಸಿಗರಿಗೆ ತನ್ನ ಮರಿಗಳ ಜೊತೆ ದರ್ಶನ ಕೊಡುತ್ತಿದ್ದ ಹೆಣ್ಣು ಹುಲಿಯ ಹಿಂಗಾಲುಗಳಿಗೆ ಗಾಯಗೊಂಡಿರುವುದು ತಿಳಿದುಬಂದಿದೆ.
ಈ ಕುರಿತು ಬಂಡೀಪುರ ಸಿಎಫ್ಒ ಡಾ.ಪ್ರಭಾಕರನ್ ಪ್ರತಿಕ್ರಿಯಿಸಿ, ಬೇಟೆಯಾಡುವ ಸಂದರ್ಭದಲ್ಲಿ ಗಾಯಗೊಂಡಿರುವ ಸಾಧ್ಯತೆ ಇದ್ದು, ಹುಲಿ ಮೇಲೆ ನಿಗಾ ಇಡಲಾಗಿದೆ. ಮರಿಗಳು ಕೂಡ ಆರೋಗ್ಯವಾಗಿರುವುದು ಕಂಡುಬಂದಿದ್ದು ನಿಗಾ ವಹಿಸಿದ್ದೇವೆ.
ಇದೇ ವೇಳೆ ಅಗತ್ಯವಿದ್ದರೆ ಗಾಯಗೊಂಡಿರುವ ಹುಲಿಗೆ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದ್ದಾರೆ.