ರೈತನಿಂದ ಗೋಮಾತೆಗೆ ಸಂಪ್ರದಾಯದಂತೆ ಸೀಮಂತ ಕಾರ್ಯ
Baby Shower To Cow : ಹಸುವಿಗೆ ಸೀರೆ ಉಡಿಸಿ, ಆರತಿ ಎತ್ತಿ, ಶೋಭಾನೆ ಪದ ಹಾಡುವ ಮೂಲಕ ಗೋಮಾತೆಗೆ ಸೀಮಂತ ಮಾಡಿದ್ದಾರೆ.
ಬೆಳಗಾವಿ: ಭಾರತೀಯ ಸಂಪ್ರದಾಯದಲ್ಲಿ ಮಹಿಳೆ ಚೊಚ್ಚಲ ಗರ್ಭಿಣಿಯಾದಾಗ ತವರು ಮತ್ತು ಗಂಡನ ಮನೆಯವರು ಸೀಮಂತವನ್ನು ಮಾಡುತ್ತಾರೆ. ಬಂಧು ಬಳಗ ಸೇರಿ ಸೀಮಂತ ಕಾರ್ಯಕ್ರಮ ನಡೆಸುವುದು ವಾಡಿಕೆ. ಅದರಂತೆಯೇ ಹಸುವಿನ ಸೀಮಂತವನ್ನು ಇಲ್ಲೊಬ್ಬ ರೈತ ಮಾಡಿದ್ದಾರೆ.
ಇದನ್ನೂ ಓದಿ : ಸಿದ್ದರಾಮಯ್ಯ ಅವರಿಗೆ ದಮ್ ಇದ್ರೆ ಹಿಂದೂ ರಾಷ್ಟ್ರ ಆಗೋದನ್ನ ತಡೆಯಲಿ: ಅನಂತಕುಮಾರ್ ಹೆಗಡೆ
ಗೋಕಾಕ ತಾಲ್ಲೂಕಿನ ಉಪ್ಪಾರಟ್ಟಿ ಗ್ರಾಮದ ರಮೇಶ ತಿಗಡಿ ಎಂಬ ರೈತ ತಮ್ಮ ಮನೆಯಲ್ಲಿ ಸಾಕಿದ ಗೋವಿಗೆ ಸೀಮಂತ ಮಾಡಿದ್ದಾರೆ. ಈ ಹಸುವನ್ನು ಸಾಕಿದಾಗಿನಿಂದಲೂ ತಮ್ಮ ಮನೆಗೆ ಒಳ್ಳೆಯದಾಗಿದೆ ಎಂಬುದು ಈ ರೈತನ ನಂಬಿಕೆ. ಅವರ ಮನೆಯ ಈ ಹಸು ಮೊದಲ ಬಾರಿಗೆ ಗರ್ಭ ಧರಿಸಿತ್ತು.
ಸಂತಸಗೊಂಡ ರೈತ ರಮೇಶ ತಿಗಡಿ ಹಿಂದೂ ಸಂಪ್ರದಾಯದಲ್ಲಿ ಸೀಮಂತ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಬಂಧು ಬಳಗ ಹಾಗೂ ನೆರೆಹೊರೆಯವರನ್ನು ಅಹ ಕರೆದಿದ್ದರು. ಹಸುವಿಗೆ ಸೀರೆ ಉಡಿಸಿ, ಆರತಿ ಎತ್ತಿ, ಶೋಭಾನೆ ಪದ ಹಾಡುವ ಮೂಲಕ ಗೋಮಾತೆಗೆ ಸೀಮಂತ ಮಾಡಿದ್ದಾರೆ. ಆಗಮಿಸಿದ ಎಲ್ಲರಿಗೂ ಊಟದ ವ್ಯವಸ್ಥೆ ಕೂಡ ಮಾಡಿದ್ದರು. ರಮೇಶ ತಿಗಡಿ ಕುಟುಂಬದ ಈ ಅಪರೂಪದ ಕಾರ್ಯಕ್ರಮಕ್ಕೆ ಜನತೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ : ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಬದ್ಧ: ಸಚಿವ. ಕೆ.ಹೆಚ್ ಮುನಿಯಪ್ಪ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.